Mangaluru: ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ: ಸ್ಥಳ, ದಿನಾಂಕ ಗುರ್ತು ಹಾಕಿಕೊಳ್ಳಿ
Mangaluru job fair : ಇಂದಿನ ದಿನದಲ್ಲಿ ಉದ್ಯೋಗ (Job) ಸಿಗುವುದು ಬಹಳ ಕಷ್ಟ. ಕೆಲವರಿಗೆ ಉದ್ಯೋಗ ಸಿಕ್ಕರೂ ತಾವು ಬಯಸಿರುವ ಕೆಲಸ ಸಿಕ್ಕಿರುವುದಿಲ್ಲ. ವರ್ಷದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಾರೆ. ಆದರೆ, ಅದರಲ್ಲಿ 50% ಜನರು ನಿರುದ್ಯೋಗಿಗಳಾಗುತ್ತಾರೆ. ಉದ್ಯೋಗ ಕಡಿಮೆಯೋ? ಅಥವಾ ವಿದ್ಯಾರ್ಹತೆ ಸಾಕಾಗುವುದಿಲ್ಲವೋ? ತಿಳಿಯದು. ಒಟ್ಟಾರೆ ದೇಶದಲ್ಲಿ ವಿದ್ಯಾವಂತ ನಿರೋದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಈ ನಿರುದ್ಯೋಗಿಗಳಿಗಾಗಿಯೇ ಇಂತಹ ಉದ್ಯೋಗ ಮೇಳ (Job fair) ನಡೆಸಲಾಗುತ್ತಿದ್ದು, ಜನರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹೌದು, ಉದ್ಯೋಗ ಅರಸಿ ಬರುವುದಿಲ್ಲ. ನಾವೇ ಅರಸಿಕೊಂಡು ಹೋಗಬೇಕು. ಸದ್ಯ ಮಂಗಳೂರಿಗರಿನ (mangaluru) ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ.
ಯೇನೆಪೋಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಮತ್ತು ಮ್ಯಾನೇಜ್ ಮೆಂಟ್ ಹಾಗೂ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ʼಯೆನ್ ಜಾಬ್ ಫೇರ್ – 2023ʼ ನಡೆಯಲಿದೆ.
ಮಂಗಳೂರಿನಲ್ಲಿ ನಡೆಯುವ ‘ಉದ್ಯೋಗ ಮೇಳ’ಕ್ಕೆ (Mangaluru job fair) 35ಕ್ಕೂ ಅಧಿಕ ವಿವಿಧ ಕಂಪನಿಗಳು ಆಗಮಿಸುತ್ತಿದ್ದು, ಉದ್ಯೋಗ ಅರಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ಈ ಕೆಳಗಿನಂತಿದೆ.
ಹುದ್ದೆಯ ವಿವರ: ಮಾನವ ಸಂಪನ್ಮೂಲ, ಪ್ರವಾಸೋದ್ಯಮ, ಆತಿಥ್ಯ, ವಿಮಾನಯಾನ, ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ, ಆಸ್ಪತ್ರೆಗಳು, ಲಾಜಿಸ್ಟಿಕ್ಸ್, ಬ್ಯಾಂಕಿಂಗ್, ಮಾಧ್ಯಮ, ನರ್ಸಿಂಗ್, ಆಟೋಮೊಬೈಲ್ ಇನ್ನಿತರ ಕಂಪೆನಿಗಳ ಹುದ್ದೆಗಳು ನೇಮಕಾತಿ ನಡೆಯಲಿದೆ.
‘ಯೆನ್ ಜಾಬ್ ಫೇರ್ – 2023ʼ ಉದ್ಯೋಗ ಮೇಳ ಏಪ್ರಿಲ್ 28 ರ
ಬೆಳಿಗ್ಗೆ 9 ರಿಂದ ಸಂಜೆ 4 ತನಕ ಮಂಗಳೂರಿನ ಬಲ್ಮಠದಲ್ಲಿರುವ ಯೇನೆಪೋಯಾ ಕಾಲೇಜು ಆವರಣದಲ್ಲಿ ನಡೆಯಲಿದೆ. ಬಿ.ಕಾಂ (Bcom), ಬಿಸಿಎ (BCA), ಬಿಬಿಎ (BBA), ಡಿಪ್ಲೊಮಾ (Diploma) , ಐಟಿಐ (ITI) ಮತ್ತು ಇತರೆ ಪದವಿ ಪಡೆದವರು ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ರೆಸ್ಯುಮೆ (Resume), ಭಾವಚಿತ್ರಗಳು, ಆಧಾರ್ ಕಾರ್ಡ್ (Aadhar card), ದಾಖಲಾತಿಗಳ ಪ್ರತಿಯನ್ನು ಕೊಂಡೊಯ್ಯಬೇಕು. ಇಂತಹ ಅವಕಾಶ ಮತ್ತೆ ಸಿಗದು ಹಿಂದೆ ಸರಿಯದೆ ಮುಂದೆ ಸಾಗಿ.
ಇದನ್ನೂ ಓದಿ: Property Register: ತಂದೆಯ ಹೆಸರಲ್ಲಿರುವ ಮನೆಯನ್ನು ಮಕ್ಕಳ ಹೆಸರಿಗೆ ಮಾಡೋದು ಹೇಗೆ? ಇಲ್ಲಿದೆ ಈ ವಿಧಾನದ ಸಂಪೂರ್ಣ ವಿವರ!!