Anushka – Virat Kohli: ಬೆಂಗಳೂರಿನಲ್ಲಿ ವಿರುಷ್ಕಾ ಮಸಾಲೆ ದೋಸೆ ಸವಿದ CTR ಹೋಟೆಲ್’ನ ವೈಶಿಷ್ಯ ಕೇಳಿದ್ರೆ ಬೆರಗಾಗ್ತಿರ !

Anushka Sharma and Virat Kohli in Bangalore: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ತಮಗಾಗಿ ಮತ್ತು ತಮ್ಮ ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ. ಮೊನ್ನೆ ಶನಿವಾರ ಬೆಂಗಳೂರಿನಲ್ಲಿದ್ದ ವಿರಾಟ್‌ ಹಾಗೂ ಕುಟುಂಬ ದಕ್ಷಿಣ ಭಾರತದ ಆಹಾರ ವೈಭವವನ್ನು ಆನಂದಿಸಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿರುವ ವಿರಾಟ್, ಬೆಂಗಳೂರಿನಲ್ಲೂ ಫ್ಯಾಮಿಲಿಗಾಗಿ ಸಮಯ ಮೀಸಲಿಟ್ಟರು. ಮತ್ತು ತಮ್ಮನ್ನು ಪ್ರೋತ್ಸಾಹಿಸಲು ಕುಟುಂಬ ಸಮೇತ ಬೆಂಗಳೂರು ತಲುಪಿದ ಅನುಷ್ಕಾ ಅವರೊಂದಿಗೆ ಕೊಹ್ಲಿ (Anushka Sharma and Virat Kohli) ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಹೋಟೆಲ್ ಒಂದಕ್ಕೆ ಹೋಗಿದ್ದಾರೆ.

ಅವರು ಟಿಫನ್’ಗೆ ಹೋದದ್ದು ಎಲ್ಲಿಗೆ ಗೊತ್ತಾ ? ಅದು ಮಲ್ಲೇಶ್ವರಂನ ಮರ್ಗೋಸಾ ರಸ್ತೆಯಲ್ಲಿರುವ ಸೆಂಟ್ರಲ್ ಟಿಫಿನ್ ರೂಮ್‌’ಗೆ. ಅಲ್ಲಿ ಅವರು ದಕ್ಷಿಣ ಭಾರತದ ಆಹಾರವನ್ನು ಆನಂದಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಸೌತ್ ಇಂಡಿಯನ್ ಫುಡ್ ಇಡ್ಲಿ, ಮಸಾಲ ದೋಸಾ, ಸಾಂಬಾರ್-ವಡಾ ಸವಿದರು. ಅಲ್ಲದೆ ಕೇಸರಿ ಬಾತ್ ಮತ್ತು ಮಂಗಳೂರು ಬಜ್ಜಿ ಸವಿದಿದ್ದಾರೆ. ಈ ಹೋಟೆಲ್ನ ಮೆನುವನ್ನು ಮತ್ತು ತಾವು ಸವಿದ ಆಹಾರಗಳ ಫೋಟೋವನ್ನು ಅನುಷ್ಕಾ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲ ವಿಶೇಷ. ಆದರೆ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್ ಕೊಹ್ಲಿಯ ಜೊತೆ ಊಟಕ್ಕೆ ಹೋದರಲ್ಲ, ಬೆಂಗಳೂರಿನ ಮಲ್ಲೇಶ್ವರಂನ ಶ್ರೀ ಸಾಗರ್ ಸಿ ಟಿ ಆರ್ (Central Tiffin Room) ಹೋಟೆಲ್. ಈ ಜೋಡಿ ಉಳಿದ ಹೈ ಫೈ ಹೊಟೇಲ್ ಗಳನ್ನು ಬಿಟ್ಟು ಈ ಹೊಟೇಲ್’ಗೆ ಬರಲು ಒಂದು ಪ್ರಮುಖ ಕಾರಣವಿದೆ. ಹೌದು CTR ಹೋಟೆಲ್ ಗೆ ತನ್ನದೇ ವೈಶಿಷ್ಟ್ಯ ವಿದೆ.

ಈ ಶ್ರೀ ಸಾಗರ್ CTR hotel ಇದೀಗ ನಿರಂತರವಾಗಿ 71 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಈ ಹೋಟೆಲ್ ತನ್ನ ಗತಕಾಲದ ವೈಭವವನ್ನು ಇವತ್ತಿಗೂ ಒಂದು ಉಳಿಸಿಕೊಂಡಿದೆ.
ಅದೇ ಹಳೆಯ ಬಿಲ್ಡಿಂಗಿನಲ್ಲಿ ನಡೆಸಿಕೊಂಡು ಬರುತ್ತಿರುವ ಹೋಟೆಲ್ ಇವತ್ತಿಗೂ ತನ್ನ ಹೆಸರು ಒಂದರಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅಲ್ಲದೆ, ಅದೇ ಮಟ್ಟಿಗಿನ ರುಚಿಯನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿದೆ.

1952 ರಲ್ಲಿ ಪ್ರಾರಂಭವಾದ ಈ ಶ್ರೀ ಸಾಗರ್ ಸಿಟಿ ಆರ್ ಮುಂದೆ ನಿರಂತರವಾಗಿ ಜನರು ಬಂದು ಕ್ಯೂ ನಿಲ್ಲುತ್ತಾರೆ. ಈ ಹೋಟೆಲ್ ಇಡೀ ದಿನ ತೆರೆದಿರುವುದಿಲ್ಲ. ಬೆಳಿಗ್ಗೆ ಸ್ವಲ್ಪ ಲೇಟ್ ಆಗಿ 8 ಗಂಟೆಗೆ ತೆರೆದರೆ, ಮತ್ತೆ ಮಧ್ಯಾಹ್ನ ಹೋಟೆಲ್ 12.30 ಕ್ಕೆ ಬಾಗಿಲು ಮುಚ್ಚಿಕೊಳ್ಳುತ್ತದೆ. ಮತ್ತೆ ಸಂಜೆ 4 ಗಂಟೆಗೆ ತೆರೆದು, ರಾತ್ರಿ 9.30 ಗಂಟೆ ತನಕ ರಸ್ತೆಯಲ್ಲಿ ಜನರನ್ನು ಕ್ಯೂ ನಿಲ್ಲಿಸಿಕೊಂಡು ಸಕತ್ತಾಗಿ ರುಚಿಯನ್ನು ಉಣಬಡಿಸುತ್ತಲೇ ಇದೆ. ಈ ಹೋಟೆಲ್ ಬಾಗಿಲು ತೆಗೆಯುವ ಮೊದಲೇ, ಗ್ರಾಹಕರು ಬಂದು ಕ್ಯೂ ನಿಲ್ಲುತ್ತಾರೆ. ಬರೇ ಕಾಫಿ ಕುಡಿಯಬೇಕು ಅನ್ನಿಸಿದರೂ, CTR Hotel ನಲ್ಲಿಯೇ ಚಪ್ಪರಿಸಬೇಕು, ಅದಕ್ಕಾಗಿ 20 ನಿಮಿಷ ಕ್ಯೂನಲ್ಲಿ ನಿಲ್ಲಬೇಕು: ಅನ್ನುವ ಜನ, ಆ ಕ್ರೇಜ್ ಇವತ್ತಿಗೂ ಉಳಿದಿದೆ ! ಇನ್ನೂ ಒಂದು ವಿಶೇಷೆಂದರೆ, ಈ ಹೊಟೇಲ್ ತನ್ನ ಹೆಸರಿಗೆ ತಕ್ಕಂತೆ ಕೇವಲ ಟಿಫನ್ ಮಾತ್ರ ನೀಡುತ್ತದೆ. ಇಲ್ಲಿ ಊಟ ಲಭ್ಯವಿಲ್ಲ.

ಬೆಂಗಳೂರಿಗೆ ಬಂದರೆ, ಮೆಜೆಸ್ಟಿಕ್’ನಿಂದ ಕೇವಲ BMTC ಬಸ್ಸಿನಲ್ಲಿ 10 ನಿಮಿಷದ ದೂರದಲ್ಲಿದೆ ಶ್ರಿ ಸಾಗರ್ CTR. ಇಲ್ಲಿ ಬಂದು ಕಾಫಿ ಕುಡಿದು, ಮಸಾಲೆ ದೋಸೆ ಹೊಡೆದು, ಹೊರಗೆ ಕ್ಯೂ ನಿಂತ ಜನರ ಫೋಟೋ ಕ್ಲಿಕ್ಕಿಸಿ ಸ್ಟೇಟಸ್ ಹಾಕಿದರೆ, ಇಲ್ಲಿಗೆ ಬಂದವರೆಲ್ಲರ ‘ ಸ್ಟೇಟಸ್ ‘ ಮೇಲಕ್ಕೆ ಏರಿದ ಅನುಭವ. ನಿಮಗೂ ಸಮಯವಿದ್ದರೆ ಇಲ್ಲಿಗೆ ಒಮ್ಮೆ ಭೇಟಿ ಕೊಡಿ. ಇದೀಗ ಇಲ್ಲಿ, ಕಳೆದ 15 ವರ್ಷಗಳ ಹಿಂದೆ ನಿಲ್ಲಿಸಿದ್ದ ‘ ಸೂಪ್ ವಡಾ ‘ ಎಂಬ ತಿಂಡಿ ಕೂಡಾ ನಿಮಗಾಗಿ ರೆಡಿಯಾಗಿ ಕಾಯುತ್ತಿರುತ್ತದೆ. ಕಾಲದ ಜತೆ ಸ್ಪರ್ಧಿಸಿ, ತನ್ನತನವನ್ನು ಉಳಿಸಿಕೊಂಡು ಬಂದ ಈ ಹಾಟ್ ಹೊಟೇಲ್ ಗೆ ಬರಲು ವಿರಾಟ್ ಮತ್ತು ಅನುಷ್ಕಾ ಶರ್ಮಾಗೆ ಸಮಯ ಸಿಕ್ಕಿದೆ. ನೀವೂ ಬಿಡುವು ಮಾಡಿಕೊಳ್ಳಿ.

ಇಲ್ಲಿ ವಿಶೇಷ ಏನೆಂದರೆ ಅನುಷ್ಕಾ ಶರ್ಮಾ ಕ್ರಂಚಿಯಾಗಿರುವ ಮಸಾಲೆ ದೋಸೆಯ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಇದರಲ್ಲಿ ಹದವಾಗಿ ಕಾದಿರುವಂತಹ ಮಸಾಲೆ ದೋಸೆ ಹಾಗೂ ಅದರ ಜೊತೆ ತೆಂಗಿನಕಾಯಿ ಚಟ್ನಿ ಇರುವುದನ್ನು ಕಾಣಬಹುದು. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಗೋಳಿಬಜೆಯನ್ನು ಕೂಡ ತಿಂದಿದ್ದಾರೆ. ಅನುಷ್ಕಾ ಶರ್ಮಾ ಸಿಟಿಆರ್‌ನ ಮೆನು ಫೋಟೋವನ್ನು ಸಹ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ. ಮಸಾಲೆ ದೋಸೆ, ಗೋಳಿಬಜೆ, ಕೇಸರಿಬಾತ್ ಬೆಲೆ ತೋರಿಸಲಾಗಿದೆ. ಅನುಷ್ಕಾ ಶರ್ಮಾ ಅವರು ತಿಂದ ಮಸಾಲೆ ದೋಸೆ ಬೆಲೆ 70 ರೂಪಾಯಿ, ಕೇಸರಿಬಾತ್ ಬೆಲೆ 40 ರೂಪಾಯಿ, ಮಂಗಳೂರು ಬಜ್ಜಿ 50 ರೂಪಾಯಿ ಇದೆ.

 

Leave A Reply

Your email address will not be published.