Sonam khan: ಅಂದು ಬೆತ್ತಲೆ ದೃಶ್ಯ ಮಾಡಿ ಜೋರಾಗಿ ಅತ್ತಿದ್ದೆ, ಸಮಾಧಾನ ಮಾಡೋಕೆ ಅವರು ಮಾಡಿದ್ದೇನು ಗೊತ್ತಾ! ಅಚ್ಚರಿ ಸಂಗತಿ ಬಿಚ್ಚಿಟ್ಟ ಓಯೆ ಓಯೆ ನಟಿ ಸೋನಮ್​ ಖಾನ್

Sonam khan: ಚಿತ್ರದಲ್ಲಿ ಬೆತ್ತಲೆಯಾಗಿ ದೃಶ್ಯ ಮಾಡುವಾಗ ನಾನು ತುಂಬಾ ಅತ್ತಿದ್ದೆ. ನಂತರ ನನ್ನನ್ನು ಸಮಾಧಾನ ಪಡಿಸಲು ಚಿಕ್ಕಮ್ಮ, ನಟಿ ಜೀನತ್​ ಅಮಾನ್​ ಅವರನ್ನು ಕರೆಸಬೇಕಾಗಿತ್ತು. ಅವರು ಚಾಲಕೇಟ್​ ತಿನ್ನಿಸಿ ನನ್ನನ್ನು ಸಮಾಧಾನ ಪಡಿಸಿದ್ದರು ಎಂದು ಸೋನಮ್​ ಖಾನ್​ ಹೇಳಿದ್ದಾರೆ.

 

ಅಂದು ತನ್ನ ಗ್ಲಾಮರಸ್ ಸ್ಟೈಲ್ ಹಾಗೂ ಚುಂಬನದ ದೃಶ್ಯಗಳನ್ನು ನೀಡಿ ಇಡೀ ಬಾಲಿವುಡ್ ಲೋಕವನ್ನೇ ಅಚ್ಚರಿ ಗೊಳಿಸಿದ ನಟಿ ಅಂದ್ರೆ ಅದು ಸೋನಮ್ ಖಾನ್ (Sonam khan). ಹೌದು 90 ರ ದಶಕದಲ್ಲಿ, ಅಂತಹ ಧೈರ್ಯ ಎಲ್ಲರಿಗೂ ಇರಲಿಲ್ಲ. ಆದರೆ, ಸೋನಂ ಅವರು ಕೇವಲ ತನ್ನ 16 17ನೇ ವಯಸ್ಸಿನಲ್ಲಿ ಈ ವಿಚಾರವಾಗಿ ಬಹಳ ಫೇಮಸ್ ಆಗಿದ್ರು. ಹೀಗೆ ‘ತ್ರಿದೇವ್​’ ಹಾಗೂ ‘ವಿಜಯ್’ ಚಿತ್ರಗಳ ಮೂಲಕ ಬಹಳ ಖ್ಯಾತಿ ಗಳಿಸ ಓಯೆ ಓಯೆ ನಟಿ ಎಂದೇ ಫೇಮಸ್ ಆದ ಸೋನಮ್​ ಖಾನ್​ ತಾನು ನಟಿಸಿದ ನಗ್ನ ದೃಶ್ಯದ ಸೀನ್​ ಕುರಿತು ಮಾತನಾಡಿದ್ದಾರೆ.

ಯಸ್. ಸೋನಮ್ ನಟನೆತ ‘ತ್ರಿದೇವ’ ಚಿತ್ರ ಸಖತ್ ಹಿಟ್ ಆಗಿತ್ತು. ಮುಖ್ಯವಾಗಿ ಅದೇ ಚಿತ್ರದಲ್ಲಿ, ‘ಓಯೇ ಓಯೇ…’ ಹಾಡು ಜನರಲ್ಲಿ ಬಹಳ ಪ್ರಸಿದ್ಧವಾಯಿತು. ಈ ಚಿತ್ರಕ್ಕಾಗಿ ಸೋನಂ ಕೆಲವೊಂದು ಬೆತ್ತಲೆಯ ದೃಶ್ಯಗಳನ್ನೂ ನೀಡಿದ್ದರು ಎನ್ನಲಾಗಿದೆ. ಇತ್ತೀಚೆಗೆ ತಾನು ನೀಡಿದ ಸಂದರ್ಶನದಲ್ಲಿ ಸೋನಮ್ ಅವರು “ಈ ಚಿತ್ರಕ್ಕಾಗಿ ನಾನು ನಗ್ನ ದೃಶ್ಯಗಳನ್ನು ನೀಡಬೇಕು ಎಂದು ತಿಳಿದಾಗ ನಾನು ತುಂಬಾ ಅತ್ತಿದ್ದೆ. ನಂತರ ನನ್ನನ್ನು ಸಮಾಧಾನ ಪಡಿಸಲು ಚಿಕ್ಕಮ್ಮ, ನಟಿ ಜೀನತ್​ ಅಮಾನ್​ ಅವರನ್ನು ಕರೆಸಬೇಕಾಗಿತ್ತು. ಅವರು ಚಾಲಕೇಟ್​ ತಿನ್ನಿಸಿ ಸಮಾಧಾನ ಪಡಿಸಿದ್ದರು” ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ ಸೋನಮ್ ಖಾನ್​ಇದು ಇವರ ನಿಜವಾದ ಹೆಸರಲ್ಲ. ಅವರ ನಿಜವಾದ ಹೆಸರು ಬಖ್ತಾವರ್ ಖಾನ್ ಎಂದು. ಆರಂಭದಲ್ಲಿ ಸೋನಂ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಕುಟುಂಬವನ್ನು ಸಾಗಿಸಲು ಸೋನಮ್ ಕೆಲಸ ಮಾಡಲು ನಿರ್ಧರಿಸಿದರು ಮತ್ತು ಯಾವುದಾದರೊಂದು ಕೆಲಸವನ್ನು ಕೊಡಿಸುವಂತೆ ತಮ್ಮ ಚಿಕ್ಕಮ್ಮ ಮತ್ತು ಬಾಲಿವುಡ್ ಹಿರಿಯ ನಟಿ ಜೀನತ್ ಅಮಾನ್ ಅವರನ್ನು ಕೇಳಿಕೊಂಡರು. ಜೀನತ್ (Jeenath Aman) ಅವರಿಗೆ ಕೆಲವು ಮಾಡೆಲಿಂಗ್ ಕ್ಷೇತ್ರದ ಪರಿಚಯವಿತ್ತು. ಅಲ್ಲಿಯೇ ಸೋನಂ ಹಣ ಸಂಪಾದಿಸಲು ಪ್ರಾರಂಭಿಸಿದರು ಮತ್ತು ನಂತರ ಶೀಘ್ರದಲ್ಲೇ ಚಲನಚಿತ್ರಗಳಲ್ಲಿಯೂ ನಟಿಸಲಾರಂಭಿಸಿದರು.

ಆದರೂ ಸೋನಮ್ ಚಿತ್ರರಂಗ ಪ್ರವೇಶಿಸಿಸಿದ್ದೇ ಒಂದು ಅಚ್ಚರಿ. ಅದೇನೆಂದರೆ ಒಂದು ದಿನ ಸೋಮನ್​ ತಂದೆಯ ಸ್ನೇಹಿತರೊಬ್ಬರು ತಂದೆ ಮುಶೀರ್ ಖಾನ್ ಬಳಿ ಬಂದು ಫಿರೋಜ್ ಖಾನ್ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಾಗಿ ನಾಯಕಿಗಾಗಿ ಹುಡುಕುತ್ತಿದ್ದಾರೆ ಎಂದು ಹೇಳಿದರು. ಅಲ್ಲದೆ ಸೋನಮಳ ನವೊಲಿಸಲು ವರು ಹೇಳಿದ್ದರು. ಅದರಂತೆ ಸೋನಂ ಬಾಲಿವುಡ್​ಗೆ ಎಂಟ್ರಿ ಕೊಟ್ಟರು. ಆದರೆ ಮೊದಲ ಆ ಚಿತ್ರ ಹಿನ್ನಡೆಯಾಯಿತು.

ಆದರೆ, ತಂದೆಯ ಗೆಳೆಯನಿಗೆ ಇಂಡಸ್ಟ್ರಿಯಲ್ಲಿ ಒಳ್ಳೆಯ ಪರಿಚಯವಿತ್ತು. ಅವರು ಸೋನಮ್ ಅವರ ಆಡಿಷನ್ ಟೇಪ್​ ಒಂದನ್ನು ಯಶ್ ಚೋಪ್ರಾ ಅವರಿಗೆ ತಲುಪಿಸಿದರು. ಆ ದಿನಗಳಲ್ಲಿ ಯಶ್ ಮಲ್ಟಿಸ್ಟಾರರ್ ಚಿತ್ರವನ್ನು ಮಾಡುತ್ತಿದ್ದರು, ಅದರಲ್ಲಿ ಹೇಮಾ ಮಾಲಿನಿ ಮತ್ತು ಮೀನಾಕ್ಷಿ ಶೇಷಾದ್ರಿ ಅವರೊಂದಿಗೆ ಸೋನಮ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಯಶ್ ಚೋಪ್ರಾ ಅವರ ಚಿತ್ರದಲ್ಲಿ ಕೆಲಸ ಮಾಡುವಾಗ ಸೋನಂ ಹೆಚ್ಚಿನ ಚಿತ್ರಗಳಿಗೆ ಸಹಿ ಹಾಕಿದರು. 1989 ಸೋನಂಗೆ ಅದ್ಭುತವಾಗಿತ್ತು. ಅವರ ‘ತ್ರಿದೇವ’ ಚಿತ್ರ ಮಾತ್ರ ಸೂಪರ್ ಹಿಟ್ ಆಗಿತ್ತು.

ನಂತರದ ದಿನಗಳಲ್ಲಿ ಯಶ್ ಚೋಪ್ರಾ ಹಾಗೂ ಸೋನಮ್ ಖಾನ್ ಇಬ್ಬರಿಗೂ ಪ್ರೇಮಾಂಕುರವಾದರೂ ಸೋನಮ್ ಮದುವೆಯಾದದ್ದು ರಾಜೀವ್ ಅನ್ನು. ಮದುವೆಯ ನಂತರ ಸೋನಂ ರಾಜೀವ್ ಜೊತೆ ವಿದೇಶಕ್ಕೆ ತೆರಳಿದ್ದರು. ಆದರೆ, ಇಲ್ಲಿಗೆ ಬಂದ ನಂತರ ಇಬ್ಬರ ನಡುವೆ ಅಂತರ ಹೆಚ್ಚಾಗತೊಡಗಿತು. ಸೋನಂ ಮತ್ತು ರಾಜೀವ್ (Rajeev) ವರ್ಷಗಳ ಕಾಲ ಒಂದೇ ಸೂರಿನಡಿ ಇದ್ದರೂ ಅಪರಿಚಿತರಂತೆ ವಾಸಿಸುತ್ತಿದ್ದರು. ಅಂತೂ ಕೊನೆಗೆ 2016 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಇದಾದ ನಂತರ ಸೋನಮ್ 2017 ರಲ್ಲಿ ಮುರಳಿ ಪೊದುವಾಲ್ ಎಂಬುವವರನ್ನು ಎರಡನೇ ಬಾರಿಗೆ ವಿವಾಹವಾದರು.

ಇನ್ನು ಸೋನಂ ಇತ್ತೀಚೆಗೆ ತಾನು ಭಾರತೀಯ ಚಿತ್ರರಂಗಕ್ಕೆ ಮರಳಿ ಪ್ರವೇಶಿಸುವುದಾಗಿ ಘೋಷಿಸಿದ್ದಾರೆ. ಘೋಷಣೆಯಾದಾಗಿನಿಂದಲೂ ನಟಿ ಸುದ್ದಿಯಲ್ಲಿದ್ದಾರೆ. ಬಿ- ಟೌನ್‌ನ ದೊಡ್ಡ ನಿರ್ಮಾಪಕರು ವಿವಿಧ ಸ್ಕ್ರಿಪ್ಟ್‌ಗಳೊಂದಿಗೆ ಅವರನ್ನು ಸಂಪರ್ಕಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ನಟಿ ನಿಜವಾಗಿಯೂ ನಾನು ಉತ್ಸುಕಳಾಗಿದ್ದೇನೆ ಎಂದು ತಿಳಿಸಿದ್ದಾರೆ.

Leave A Reply

Your email address will not be published.