Sachin tendulkar : ನೀವೇ ನಿಜವಾದ ಸಚಿನ್ ಅಂತ ಗ್ಯಾರಂಟಿ ಏನು ?’ ಎಂದಿದ್ದಕ್ಕೆ ತೆಂಡುಲ್ಕರ್ ಕೊಟ್ಟ ವೆರಿಫಿಕೇಷನ್ ಇದು!

Share the Article

Sachin Tendulkar blue-tick verification : ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಪರೂಪಕ್ಕೆ ಒಮ್ಮೆ ಎಂಬಂತೆ, ‘ಏನಾದರೂ ಆಸಕ್ತಿಕರ ಪ್ರಶ್ನೆಗಳನ್ನು ಕೇಳಿ’ ಎಂದು ತಮ್ಮ ಅಭಿಮಾನಿಗಳ ಬಳಿ ಕೇಳಿದ್ದರು. #AskSachin ಹ್ಯಾಷ್‌ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿ ಅವರು ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ಅಭಿಮಾನಿಗಳು ಏನು ಸಾಮಾನ್ಯರಾ ? ಅವರೆಲ್ಲ ಥರಾವರಿ ಟ್ಯಾಲೆಂಟ್ ಇರೋ ಜನರೇ ! ಹಾಗಾಗಿ ತಕ್ಷಣ ಸಚಿನ್ ಗೆ ಪ್ರಶ್ನೆ ಇಟ್ಟೇ ಬಿಟ್ಟಿದ್ದಾರೆ.

ಎಲನ್ ಮಸ್ಕ್​ ಟ್ವಿಟರ್​ನ ಮಾಲೀಕನಾದ ಬಳಿಕ ಹಲವಾರು ವಿವಾದಗಳಿಗೆ ಟ್ವಿಟರ್ ಕಾರಣವಾಗುತ್ತಿದೆ. ಉದ್ಯೋಗ ಕಡಿತ ಮಾಡೋದ್ರಿಂದ ಹಿಡಿದು, ಆಫೀಸ್ ಅನ್ನೇ ಬೆಡ್ ರೂಮ್ ಮಾಡಿ, ಟ್ವಿಟರ್ ಹಕ್ಕಿಯನ್ನೇ ಮಾರಟಕ್ಕಿಟ್ಟು, CEO ಚೇರಿನಲ್ಲಿ ನಾಯಿ ಕೂರಿಸಿ, ನೀಲಿ ಹಕ್ಕಿ ಬದಲು ನಾಯಿ ಇರಿಸಿ… ಅಬ್ಬಬ್ಬಾ ಈ ಎಲನ್ ಮಾಡಿದ ಅವಾಂತರ ಒಂದೋ ಎರಡೋ? ಒಟ್ಟಿನಲ್ಲಿ ಟ್ವಿಟರ್ ಗ್ರಾಹಕರು ನೀಲಿ ಹಕ್ಕಿಯೊಂದಿಗೆ ಮುನಿಸಿಕೊಳ್ಳುವಂತೆ ಮಾಡುತ್ತಿದ್ದಾನೆ. ಇಷ್ಟೆಲ್ಲಾ ಮಾಡಿಯೂ ಸುಮ್ಮನಾಗದ ಈತನಿಗೆ ಇದೀಗ ಬಳಕೆದಾರರ ಬ್ಲೂ ಟಿಕ್ ಮೇಲೆ ಕಣ್ಣು ಬಿದ್ದಿದೆ.

ಹೌದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬ್ಲೂ ಟಿಕ್ ವೆರಿಫಿಕೇಷನ್​ದೇ ಮಾತುಕತೆ. ಬ್ಲೂ ಟಿಕ್​​ಗೆ ವಿಧಿಸಲಾಗುತ್ತಿರುವ ಮೊತ್ತ ಪಾವತಿಸದ ಸೆಲೆಬ್ರಿಟಿಗಳ ಖಾತೆಯಲ್ಲಿನ ವೆರಿಫಿಕೇಷನ್ ಮಾರ್ಕ್​ಗಳನ್ನು ಎಲನ್ ಮಸ್ಕ್​ ತೆಗೆದು ಹಾಕಿರುವುದು ಇಂದು ಸಂಚಲನ ಸೃಷ್ಟಿಸಿದೆ. ಕಂಪನಿಯು ಆರಂಭದಲ್ಲಿ ಏಪ್ರಿಲ್ 1 ರಂದು ಬ್ಲೂ ಟಿಕ್‌ಗಳನ್ನು ತೆಗೆದುಹಾಕುವ ಯೋಜನೆಯನ್ನು ಪ್ರಕಟಿಸಿತು, ಆದರೆ ಬದಲಾವಣೆಯು ಆಯ್ದ ಖಾತೆಗಳಿಗೆ ಅನ್ವಯಿಸುತ್ತದೆ. ಇದಕ್ಕೆ ಕಾರಣ ಎಲನ್ ಮಸ್ಕ್ ಜಾರಿಗೆ ತಂದಿರುವ ನೂತನ ನಿಯಮ. ಬ್ಲೂ ಟಿಕ್​ ಅನ್ನು ಉಳಿಸಿಕೊಳ್ಳಲು ಎಲ್ಲಾ ಬಳಕೆದಾರರು ಚಂದಾದಾರಿಕೆಯನ್ನು ಪಡೆಯಬೇಕಾಗುತ್ತದೆ

ತಮ್ಮ ಖಾತೆಯಲ್ಲಿನ ಬ್ಲೂ ಟಿಕ್​ ಉಳಿಸಿಕೊಳ್ಳಲು ಸೆಲೆಬ್ರಿಟಿಗಳು ಸಬ್​ಸ್ಕ್ರಿಪ್ಷನ್​ ಮೊತ್ತವನ್ನು ಪಾವತಿಸಬೇಕು. ಚಂದಾದಾರಿಕೆ ಮೊತ್ತವನ್ನು ಪಾವತಿಸದೆ ಇರುವವರ ಖಾತೆಗಳಿಂದ ಟ್ವಿಟರ್​ ಬ್ಲೂ ಟಿಕ್​ ತೆಗೆದು ಹಾಕಿದೆ. ​ತಮ್ಮ ಖಾತೆಯಲ್ಲಿನ ಬ್ಲೂ ಟಿಕ್ ಉಳಿಸಿಕೊಳ್ಳಲು ಸಬ್​ಸ್ಕ್ರಿಪ್ಸನ್​ ಮೊತ್ತವನ್ನು ವಿಧಿಸಿದ್ದು ಮೊಬೈಲ್​ ಬಳಕೆದಾರರಿಗೆ 650 ರೂ ಹಾಗೂ ವೆಬ್​ ಬಳಕೆದಾರರಿಗೆ 900 ರೂ ಶುಲ್ಕವನ್ನು ವಿಧಿಸಿದೆ.

ಅಂದಹಾಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ನಟ ಶಾರುಖ್​ ಖಾನ್, ಅಮಿತಾಭ್ ಬಚ್ಚನ್, ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರ ಟ್ವಿಟರ್ ಖಾತೆಯಲ್ಲಿನ ಬ್ಲೂ ಟಿಕ್ ಮೊನ್ನೆಯಿಂದ ಕಾಣೆಯಾಗಿದೆ. ಇದರ ಬೆನ್ನಲೇ ಅಮಿತಾಭ್ ‘ಹೇ ಟ್ವಿಟ್ಟರ್! ನೀವು ಕೇಳುತ್ತೀರಾ? ನಾನು ಚಂದಾದಾರಿಕೆ ಸೇವೆಗಾಗಿ ಪಾವತಿಸಿದ್ದೇನೆ. ಆದ್ದರಿಂದ ದಯವಿಟ್ಟು ನನ್ನ ಹೆಸರಿನ ಮುಂದೆ ಬ್ಲೂ ಟಿಕ್ ಅನ್ನು ಹಿಂತಿರುಗಿಸಿ, ಇದರಿಂದ ಜನರಿಗೆ ನಾನೇ ಅಮಿತಾಭ್ ಬಚ್ಚನ್ ಎಂದು ತಿಳಿಯುತ್ತದೆ. ನಾನು ಕೈ ಜೋಡಿಸಿ ನಿಮ್ಮ ಬಳಿ ವಿನಂತಿಸುತ್ತಿದ್ದೇನೆ ಎಂದು ಟ್ವೀಟ್​​ ಮಾಡಿದ್ದಾರೆ.

ಇದೀಗ ಈ ಮಧ್ಯೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ‘ಏನಾದರೂ ಆಸಕ್ತಿಕರ ಪ್ರಶ್ನೆಗಳನ್ನು ಕೇಳಿ’ ಎಂದು #AskSachin ಹ್ಯಾಷ್​ಟ್ಯಾಗ್​ನೊಂದಿಗೆ ಟ್ವೀಟ್ ಮಾಡಿ ಪ್ರಶ್ನೆಗಳನ್ನು ಆಹ್ವಾನಿಸಿದ್ದರು. ‘ಈಗ ಬ್ಲೂ ಟಿಕ್ ಇರದ್ದರಿಂದ ನೀವೇ ನಿಜವಾದ ಸಚಿನ್ ತೆಂಡುಲ್ಕರ್​ ಎಂದು ನಮಗೆ ಖಚಿತವಾಗುವುದು ಹೇಗೆ?’ ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ.

ಪ್ರಶ್ನೆಗಾರನ ಪ್ರಶ್ನೆಗೆ ಕೊಂಚ ತರಲೆಯಾಗಿಯೇ ಉತ್ತರಿಸಿರೋ ಸಚಿನ್ ತೆಂಡುಲ್ಕರ್, ಆ ಕಮೆಂಟ್​ ಕೋಟ್​-ಟ್ವೀಟ್ ಮಾಡಿ ಅದರ ಜತೆಗೆ ಬ್ಲೂ ಶರ್ಟ್ ತೊಟ್ಟಿರುವ ತಮ್ಮದೊಂದು ಸೆಲ್ಫಿ ಸೇರಿಸಿ, ಸದ್ಯಕ್ಕೆ ಇದೇ ನನ್ನ ಬ್ಲೂ ಟಿಕ್ ವೆರಿಫಿಕೇಷನ್ (Sachin Tendulkar blue-tick verification) ಎಂದು ಪೋಸ್ಟ್ ಮಾಡಿದ್ದರು. ಈ ಟ್ವೀಟ್​ಗೆ ಭರ್ಜರಿ ಲೈಕ್​-ಕಮೆಂಟ್​-ರಿಟ್ವೀಟ್​ಗಳು ಬಂದಿವೆ. ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ತುಂಬಾ ವೈರಲ್ ಆಗಿದ್ದು, ಸಚಿನ್ ಅವರ ಇಮೇಜಿನೇಷನ್ ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

https://twitter.com/sachin_rt/status/1649370965586092035/photo/1?ref_src=twsrc%5Etfw%7Ctwcamp%5Etweetembed%7Ctwterm%5E1649370965586092035%7Ctwgr%5E3bf5a9ef7dfb20a179fa5b4c035fafb1e8f055fe%7Ctwcon%5Es1_&ref_url=https%3A%2F%2Fwww.vijayavani.net%2Fsachin-tendulkar-said-on-twitter-that-as-of-now-this-is-my-blue-tick-verification%2F

Leave A Reply