Vir Electric Bicycle: ಸಶಸ್ತ್ರ ಪಡೆಯ ಸಿಬ್ಬಂದಿಗಳಿಗಾಗಿ ಹೊಸ ‘ವೀರ್ ಬೈಕ್’ ಬಿಡುಗಡೆ!
Vir Electric Bicycle: ಮಾರುಕಟ್ಟೆಯಲ್ಲಿ ವಿವಿಧ ಬೈಸಿಕಲ್’ಗಳಿವೆ. ಕಂಪನಿಗಳು ಜನರನ್ನು ಆಕರ್ಷಿತಗೊಳಿಸಲು ಪ್ರತಿಬಾರಿ ವಿಭಿನ್ನ ಶೈಲಿಯ, ಉತ್ತಮ ಫೀಚರ್ ಇರುವ ಬೈಸಿಕಲ್ ಅನ್ನು ಬಿಡುಗಡೆ ಮಾಡುತ್ತಿವೆ. ಆದರೆ, ಪುಣೆ ಮೂಲದ ಉಡ್‌ಚಲೋ ಸಂಸ್ಥೆಯು ಸಶಸ್ತ್ರ ಪಡೆಗಳಿಗಾಗಿ ಬೈಸಿಕಲ್ (Vir Electric Bicycle) ಬಿಡುಗಡೆ ಮಾಡಿದೆ.
ಹೌದು, ಸಂಸ್ಥೆಯು ಎಲೆಕ್ಟಿಕ್ ಬೈಸಿಕಲ್ ಅನ್ನು ಶಸ್ತ್ರ ಪಡೆಗಳ ಸಿಬ್ಬಂದಿಗಾಗಿ ಇದೇ ಏಪ್ರಿಲ್ 22 ರಂದು ಬಿಡುಗಡೆ ಮಾಡಿದ್ದು, ಈ ಬೈಕ್ ಹೆಸರು ‘ವೀರ್ ಬೈಕ್’ (Vir bike) ಎಂದಾಗಿದೆ. ಈ ಬೈಕ್ ಬೆಲೆ (vir cycle price) 25,995 ರೂ. ಆಗಿದೆ.
“ಈ ಬೈಕ್ ನ ಎಲ್ಲಾ ಭಾಗವನ್ನು ಭಾರತದಲ್ಲೇ ನಿರ್ಮಿಸಲಾಗಿದ್ದು, ಇದು ಹಗುರವಾದ ಪ್ರೇಂ, ಎಲೆಕ್ನಿಕ್ ಕಟ್ -ಆಫ್ ಇರುವ ಡಿಸ್ಕ್ ಬ್ರೇಕ್, ಮತ್ತು ಅಡ್ನಸ್ಟ್ ಮಾಡಬಹುದಾದ ಆಸನವನ್ನು ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನಕ್ಕೆ ಬೆಂಬಲ ಕೊಡುತ್ತದೆ” ಎಂದು ಆರ್ಡಿ ಮುಖ್ಯಸ್ಥ ಸಹಿಲ್ ಉತ್ತೇಕರ್ ಹೇಳಿದರು. ಅಲ್ಲದೆ, ಈ ಬೈಸಿಕಲ್ ಎಲ್ಲಾ ವಾತಾವರಣದಲ್ಲೂ ಕೆಲಸ ಮಾಡುತ್ತದೆ ಎಂದು ವೀರ್ ಬೈಕ್‌ನ ಸಹ-ಸ್ಥಾವಕ ಮತ್ತು ಉತ್ತೇಕರ್ ತಿಳಿಸಿದ್ದಾರೆ.
ಉಡ್‌ಚಲೋ, ಸಶಸ್ತ್ರ ಪಡೆಗಳಲ್ಲಿನ ಯೋಧರಿಂದ ಸ್ಪೂರ್ತಿ ಪಡೆದು ಪರಿಸರ-ಸ್ನೇಹಿ ಹಾಗೂ ಕೈಗೆಟುಕುವ ಸಾರಿಗೆ ಅವಕಾಶವನ್ನು ಜನರಿಗೆ ಒದಗಿಸಲು ನಿರ್ಧರಿಸಿದೆ. ಅಲ್ಲದೆ, ಭೌತಶಾಸ್ತ್ರದ ಓಮ್ಸ್ ನಿಯಮವಾದ V = IRನ ಸೂಚಕವೂ ಆಗಿದೆ.
ಇದನ್ನು ಓದಿ: Bengalore Bus Fire:ಬೆಂಗಳೂರಲ್ಲಿ ಚಲಿಸುತ್ತಿದ್ದ BMTC ಬಸ್‌ಗೆ ಆಕಸ್ಮಿಕ ಬೆಂಕಿ: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು!!