Home Education SSLC Exam Evaluation: SSLC ಪರೀಕ್ಷೆ ಮೌಲ್ಯಮಾಪನ ಇಂದಿನಿಂದ ಆರಂಭ., ಫಲಿತಾಂಶ ಬಿಡುಗಡೆ ಮಾಹಿತಿ ...

SSLC Exam Evaluation: SSLC ಪರೀಕ್ಷೆ ಮೌಲ್ಯಮಾಪನ ಇಂದಿನಿಂದ ಆರಂಭ., ಫಲಿತಾಂಶ ಬಿಡುಗಡೆ ಮಾಹಿತಿ ತಿಳಿಯಿರಿ!

SSLC Result 2023 Karnataka
Image source: Hindustan Times

Hindu neighbor gifts plot of land

Hindu neighbour gifts land to Muslim journalist

SSLC Result 2023 Karnataka: ಈಗಾಗಲೇ ಕರ್ನಾಟಕ ಎಸ್‌ಎಸ್‌ಎಲ್‌ಸಿ 2023 ವಾರ್ಷಿಕ ಪರೀಕ್ಷೆಯು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ರಾಜ್ಯದಾದ್ಯಂತ ನಡೆದು ಮುಕ್ತಾಯವಾಗಿದೆ. ಅಲ್ಲದೆ ಮಂಡಲಿ ಕಳೆದ ವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಕೀ ಉತ್ತರಗಳನ್ನು ಬಿಡುಗಡೆ ಮಾಡಿ, ಆನ್‌ಲೈನ್‌ ಮೂಲಕ ಈ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶಕ್ಕಾಗಿ (Karnataka SSLC Result 2023) ವಿದ್ಯಾರ್ಥಿಗಳು ಮತ್ತು ಪೋಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಸದ್ಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಏಪ್ರಿಲ್‌ 21 ರಿಂದ ಆರಂಭಿಸಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೌಲ್ಯಮಾಪನವನ್ನು ಇಂದಿನಿಂದ ಆರಂಭಿಸಿದೆ. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ದ್ವಿತೀಯ ಪಿಯುಸಿ ರಿಸಲ್ಟ್‌ ನೀಡಿದ ಮಾದರಿಯಲ್ಲೇ ನೀಡಲಾಗುವುದು ಎಂದು ತಿಳಿಸಲಾಗಿದೆ.

ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್‌ ಅಂಡ್ ಅಸೆಸ್ಮೆಂಟ್ ಬೋರ್ಡ್‌ ಇಂದಿನಿಂದ ಅಂದರೆ ಏಪ್ರಿಲ್ 24 ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಿಂದೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಏಪ್ರಿಲ್ 21 ರಂದೇ ಆರಂಭಿಸುವುದಾಗಿ ಮಂಡಲಿ ತಿಳಿಸಿದ್ದು, ಕಾರಣಾಂತರಗಳಿಂದ ಏಪ್ರಿಲ್ 24 ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭ ಮಾಡಿದೆ.

2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 236 ಕೇಂದ್ರಗಳಲ್ಲಿ 8.42 ಲಕ್ಷ ವಿದ್ಯಾರ್ಥಿಗಳ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಮಾಹಿತಿ ನೀಡಿದೆ.

ಮುಖ್ಯವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ’ಯು ಶಿಕ್ಷಕರಿಗೆ ಈಗಾಗಲೇ ಮೌಲ್ಯಮಾಪನಕ್ಕೆ ತಪ್ಪದೇ ಹಾಜರಾಗಲು ಸೂಚನೆ ನೀಡಿದೆ. ಮೇ ತಿಂಗಳಿನಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಫಲಿತಾಂಶ ಬಿಡುಗಡೆ ಮಾಡಲು ಮಂಡಲಿ ನಿಯಮಗಳನ್ನು ರೂಪಿಸಿಕೊಂಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಚೆಕ್‌ ಮಾಡುವ ವಿಧಾನ :
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ ಅಧಿಕೃತ ವೆಬ್‌ಸೈಟ್‌ https://kseab.karnataka.gov.in/ಗೆ ಭೇಟಿ ನೀಡಬೇಕು. ನಂತರ ತೆರೆದ ವೆಬ್‌ಪೇಜ್‌ ಮುಖಪುಟದಲ್ಲಿ ‘Karnataka SSLC Exam Result 2023’ ಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ಅಥವಾ ವಿದ್ಯಾರ್ಥಿಗಳು ‘www.karresults.nic.in‘ ಗೆ ಭೇಟಿ ನೀಡಬೇಕು. ಇಲ್ಲಿ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಟೈಪ್ ಮಾಡುವ ಮೂಲಕ ರಿಸಲ್ಟ್‌ ಚೆಕ್‌ ಮಾಡಬಹುದು.

ಸದ್ಯ 2023ನೇ ಸಾಲಿನ ಕರ್ನಾಟಕ ಬೋರ್ಡ್‌ 10ನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಮೇ ತಿಂಗಳ 2ನೇ ವಾರದಲ್ಲಿ ಪ್ರಕಟ ಮಾಡುವ ಸಾಧ್ಯತೆ ಇದೆ.

 

ಇದನ್ನು ಓದಿ: Solar Flare: ಇನ್ನೆರಡು ದಿನಗಳ ಕಾಲ ಹೊತ್ತಿ ಉರಿಯಲಿದೆ ಪೃಥ್ವಿ! ಮನೆಯಿಂದ ಹೊರಗೆ ಕಾಲಿಡಬೇಡಿ: ನಾಸಾ ಎಚ್ಚರಿಕೆ!