Actor Chethan: ಗಡೀಪಾರು ಶಿಕ್ಷೆಯಿಂದ ನಟ ಚೇತನ್ಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
Actor Chethan: ನಟ ಚೇತನ್ (Actor Chethan) ಒಂದೆರಡಲ್ಲ ಸಾಕಷ್ಟು ವಿವಾದಾತ್ಮಕ ಹೇಳಿಕೆ ಹುಟ್ಟುಹಾಕಿ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ನಟ ಚೇತನ್ ದೇಶ ವಿರೋಧಿ ಚಟುವಟಿಕೆ, ಹೇಳಿಕೆ ನೀಡುತ್ತಿರುವ ಹಿನ್ನೆಲೆ ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ್ದು, ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಇದೀಗ ನಟ ಚೇತನ್ ಅವರ ಒಸಿಐ ರದ್ದು ಹಿನ್ನೆಲೆಯಲ್ಲಿ ಹೈಕೋರ್ಟ್ (high court) ರಿಲೀಫ್ ನೀಡಿದೆ.
ನಟ ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾ ಹೊಂದಿದ್ದರು. ಚೇತನ್ ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ (FRRO) ಪತ್ರವನ್ನು ಸ್ವೀಕರಿಸಿದ್ದು, ಪತ್ರವನ್ನು ಸ್ವೀಕರಿಸಿದ 15 ದಿನಗಳಲ್ಲಿ ಅವರ OCI ಕಾರ್ಡ್ ಅನ್ನು ಹಿಂದಿರುಗಿಸುವಂತೆ ಸೂಚನೆ ನೀಡಲಾಗಿತ್ತು.
ಒಸಿಐ ಮಾನ್ಯತೆ ರದ್ದು ಮಾಡಲಾಗಿತ್ತು. ಇದೀಗ ಗಡೀಪಾರು ಶಿಕ್ಷೆಯಿಂದ ಚೇತನ್ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ಈ ಬಗ್ಗೆ ಮಾತನಾಡಿದ್ದ ನಟ ಚೇತನ್ “ ನೀವು ಕ್ರಿಮಿನಲ್ ಕೆಲಸಗಳಲ್ಲಿ ತೊಡಗಿದ್ದೀರಿ. ಹಾಗಾಗಿ ನಿಮ್ಮ ವೀಸಾ ರದ್ದು ಮಾಡಲಾಗುತ್ತದೆ ಎಂದು 10 ತಿಂಗಳ ಹಿಂದೆ (ಜೂನ್ 8 22) ಶೋಕಾಸ್ ನೋಟೀಸ್ ನೀಡಿದ್ದರು, ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದಿದ್ದೆ. ನಿನ್ನೆ ಮತ್ತೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಅಂತ ವೀಸಾ ರದ್ದು ನೋಟೀಸ್ ನೀಡಿದ್ದಾರೆ” ಎಂದು ಹೇಳಿದ್ದರು.
“ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಯಾವಾಗ ಭಾಗಿಯಾಗಿದ್ದೇನೆ? ಬೇಕೆಂದೇ ನನ್ನ ಮೇಲೆ ಈ ರೀತಿ ಪಿತೂರಿ ನಡೆಸುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ವಾಕ್ ಸ್ವಾತಂತ್ರವನ್ನು ಕಿತ್ತುಹಾಕಿದ್ದಾರೆ” ಎಂದು ನಟ ಹೇಳಿದ್ದಾರೆ.
ಇದನ್ನೂ ಓದಿ: Actress Abhinaya: ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡಲಿದ್ದಾರಾ ‘ ಅಭಿನಯ’! ಏನಿದು ಹೊಸ ವಿಷಯ? ಇಲ್ಲಿದೆ ಸಂಪೂರ್ಣ ಮಾಹಿತಿ