Actress Lakshmi: ಮಗಳು ಐಶ್ವರ್ಯ ಸೋಪು ಮಾರುತ್ತಾ ಇಷ್ಟು ಕಷ್ಟದಲ್ಲಿದ್ದರೂ ಯಾಕೆ ನಟಿ ಜೂಲಿ ಲಕ್ಷ್ಮಿಯ ಮನಸ್ಸು ಕರಗಿಲ್ಲ ಗೊತ್ತಾ ? – ಅಸಲಿ ಕಾರಣ ಇಲ್ಲಿದೆ !

Actress Lakshmi: ಸಿನಿ ಇಂಡಸ್ಟ್ರಿಯ ಸೆಲೆಬ್ರಿಟಿ ಯ ಬಗ್ಗೆ ಏನೇ ವಿಷಯ ಆದರೂ ಅದು ದೊಡ್ದ ಮಟ್ಟದಲ್ಲಿ ಸುದ್ದಿಯಾಗುತ್ತದೆ. ಇದೀಗ ಸ್ಯಾಂಡಲ್ ವುಡ್ (Sandalwood) ನಲ್ಲಿ ಮೂಡಿಬಂದ ನಾ ನಿನ್ನ ಮರೆಯಲಾರೆ, ನಾ ನಿನ್ನ ಬಿಡಲಾರೆ, ಒಲವೇ ಗೆಲವು, ಕಿಲಾಡಿ ಜೋಡಿಯಂತಹ ಸೂಪರ್ ಹಿಟ್ ಚಲನ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ ಜೂಲಿ ಲಕ್ಷ್ಮಿ(Actress Julie Lakshmi) ಅವರ ಸಿನಿ ತೆರೆಯ ಕಥೆ ಎಲ್ಲರಿಗೂ ತಿಳಿದಿದೆ. ಹತ್ತಕ್ಕೂ ಹೆಚ್ಚು ಫಿಲ್ಮ್‌ಫೇರ್ (Filmfare) ಪ್ರಶಸ್ತಿಗಳನ್ನು ಮತ್ತು ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಪ್ರತಿಭೆಯ ಮೂಲಕ ಗಿಟ್ಟಿಸಿಕೊಂಡಿದ್ದಾರೆ. ಇಂತಹಾ ಪ್ರತಿಭಾನ್ವಿತ ನಟಿ ಬದುಕಿನಲ್ಲಿ ಸ್ವತಃ ನೊಂದಿದ್ದಾರೆ. ಆಕೆಯ ಬಳಿ ಒಟ್ಟು ಮೂರು ಜನ ಗಂಡಸರು ಬಂದಿದ್ದು, ಇಬ್ಬರಿಗೆ ಡೈವೋರ್ಸ್ ನೀಡಿ ಆಕೆ ಇದೀಗ ಮೂರನೆಯ ಪತಿಯ ಜತೆ ವಾಸಿಸುತ್ತಿದ್ದಾರೆ.

 

ಹೌದು, ಮೊದಲನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ (Actress Lakshmi) ಮತ್ತು ಭಾಸ್ಕರ್ (Bhaskar) ದಂಪತಿಗಳಿಗೆ ಮದುವೆ ಆದ ಎರಡು ವರ್ಷದ ಬಳಿಕ ಏಕೈಕ ಮಗಳು ಐಶ್ವರ್ಯ ಜನಿಸಿದಳು. ಎರಡು ಮೂರು ವರ್ಷದ ನಂತರ ತನ್ನ ಗಂಡ ಭಾಸ್ಕರ್ ಜೊತೆ ವಿಚ್ಛೇದನವಾದದ್ದು ಎಲ್ಲರಿಗೂ ತಿಳಿದೇ ಇದೆ. ತನ್ನ ಏಕೈಕ ಮಗಳಾದ ಐಶ್ವರ್ಯ (Aishwarya) ತನ್ನ ಜೀವನದಲ್ಲಿ ಸಿನಿ ರಂಗಕ್ಕೆ ಕಾಲಿಟ್ಟು ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ತನ್ನ ಚಾಪನ್ನು ತೋರಿಸಿ ಹಲವಾರು ದಕ್ಷಿಣದ ದಿಗ್ಗಜರೊಂದಿಗೆ ನಟಿಸಿದ್ದಾರೆ.

ಆದರೆ ಈ ಐಶ್ವರ್ಯ(Aishwarya) ತನ್ನ ಜೀವನದಲ್ಲಿ ಬಹು ನಿರಾಶಿತರಾಗಿದ್ದಾರೆ. 1971 ರಲ್ಲಿ ಜನಿಸಿದ ಮಗಳು ಐಶ್ವರ್ಯ ಸಹಜವಾಗಿ ಚಿತ್ರರಂಗದತ್ತ ಆಕರ್ಷಿತರಾಗಿದ್ದಳು. ಒಳ್ಳೆಯ ಅವಕಾಶಗಳೂ ದೊರೆತವು. ಕಾರಣ ಪಂಚ ಭಾಷಾ ದಿಗ್ಗಜ ತಾರಾ ಪುತ್ರಿ ಈ ಐಶ್ವರ್ಯ. ಆದರೆ ಐಶ್ವರ್ಯಾಗೆ ಆನಂತರ ಏಕಾಏಕಿ ಅವಕಾಶಗಳು ಬರುವುದು ನಿಂತು ಹೋಗುತ್ತದೆ. ಅಲ್ಲಿಂದ ಆಕೆಯ ಅವನತಿ ಶುರುವಾಗಿತ್ತು. ಆಕೆ ಈಗಲೂ ಸೋಪು ತಯಾರಿಸುತ್ತಾ, ಮನೆ ಮನೆ ಮಾರುತ್ತಾ ಜೀವನ ಸಾಗಿಸುತ್ತಾ ಇದ್ದಾರೆ. ಇದ್ಯಾಕೆ ಹೀಗೇ ? ನಟಿ ಲಕ್ಷ್ಮಿ(Actress Lakshmi) ತನ್ನ ನಟನೆಯ ಮೂಲಕ ತನ್ನನ್ನು ತಾನು ಗುರುತಿಸಿಕೊಂಡು ಇಷ್ಟು ದೊಡ್ಡ ವ್ಯಕ್ತಿಯಾಗಿದ್ದಾರೆ. ತನ್ನ ಮಗಳು ಕಷ್ಟದ ಸಮಯದಲ್ಲಿದ್ದಾಗ ಒಂದು ರೂಪಾಯಿಯನ್ನು ನೀಡಲು ಹಿಂದೆ ಜಾರಿದ್ದಾರೆಯೇ ಎಎನ್ನುವ ಪ್ರಶ್ನೆ ಕಾಡುತ್ತದೆ. ಐಶ್ವರ್ಯಳಿಗೆ ಒಂದು ಬಿಡಿಗಾಸು ಕೂಡಾ ನೀಡಲ್ಲ ಅನ್ನುವ ಕಟು ಮನಸ್ಸು ಅಮ್ಮಜ್ಯೂಲಿ ಲಕ್ಷ್ಮಿಯದ್ದು. ಅದಕ್ಕೂ ಇದೆ ಒಂದು ಬಲವಾದ ಕಾರಣ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಹೌದು, ನಟಿ ಐಶ್ವರ್ಯಗೆ ಯಾಕೆ ಅವಕಾಶಗಳು ತಪ್ಪಿ ಹೋದವು. ಅದಕ್ಕೆ ಆಕೆಯೇ ಮಾಡಿದ ಒಂದು ದೊಡ್ಡ ನಿರ್ಧಾರ ಕಾರಣ. ತನ್ನ ವೃತ್ತಿ ಜೀವನ ಏರುಗತಿಯಲ್ಲಿ ಇರುವಾಗಲೇ ಐಶ್ವರ್ಯಾ ಜೀವನದ ಬಹುದೊಡ್ಡ ಯಡವಟ್ಟು ಮಾಡಿಕೊಂಡಿದ್ದಳು. ತನ್ನ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮುಸ್ಲಿಂ ಹುಡುಗನ ಬಲೆಗೆ ಬೀಳುತ್ತಾಳೆ ಐಶ್ವರ್ಯಾ. ಆತನನ್ನೆ ಮದುವೆಯಗಲು ನಿರ್ಧರಿಸುತ್ತಾಳೆ. ಆದರೆ ಅದಕ್ಕೆ ಅಮ್ಮ ಜ್ಯೂಲಿ ಲಕ್ಷ್ಮಿ ಸುತಾರಾಂ ಒಪ್ಪಲ್ಲ. ಸಂಪ್ರದಾಯದ ಮನೆತನದ ಲಕ್ಷ್ಮಿ, ತನ್ನ ಮಗಳು ಮುಸ್ಲಿಂ ಹುಡುಗನನ್ನು ಮದುವೆ ಆಗುವುದನ್ನು ಬಲವಾಗಿ ವಿರೋಧಿಸುತ್ತಾರೆ. ಆದರೆ ಕೇಳೋದೇ ಇಲ್ಲ.

ಐಶ್ವರ್ಯ ಆಕೆಯ ತಾಯಿ ಲಕ್ಷ್ಮಿಯ ಇಚ್ಛೆಗೆ ವಿರುದ್ಧವಾಗಿ 1994 ರಲ್ಲಿ ತನ್ವೀರ್ ಅಹ್ಮದ್ ನನ್ನು ವಿವಾಹವಾಗುತ್ತಾಳೆ. ಅಮ್ಮ ಲಕ್ಷ್ಮಿ ಎಷ್ಟು ಬೇಡಾಡಿದರೂ ಆಕೆ ಕೇಳೋದಿಲ್ಲ. ಅಲ್ಲದೆ ಅವತ್ತು ಆಕೆ ಇಸ್ಲಾಂಗೆ ಮತಾಂತರಗೊಳ್ಳುತ್ತಾಳೆ ಮತ್ತು ತನ್ನ ಹೆಸರನ್ನು ಅಫ್ಶಾನ್ ಅಹ್ಮದ್ ಎಂದು ಬದಲಿಸಿ ಕೊಳ್ಳುತ್ತಾಳೆ. ತನ್ವೀರ್ ಜೊತೆ ಮದುವೆಯಾದ ನಂತರ ಪತಿಯೂ ಡ್ರಗ್ಸ್ ಚಟಕ್ಕೆ ಬಿದ್ದಿದ್ದರಿಂದ ತಾನೂ ಮಾದಕ ವ್ಯಸನಿಯಾಗಿದ್ದಳು ಎನ್ನುವ ಮಾಹಿತಿ ಇದೆ. ಈ ಮಧ್ಯೆ ಆಕೆಯ ಮಗಳು ಅನೈನಾ 1995 ರಲ್ಲಿ ಜನಿಸಿದಳು. ಆದರೆ ಕೌಟುಂಬಿಕ ದೌರ್ಜನ್ಯ ಮತ್ತು ತನ್ವೀರ್’ನ ಮಾದಕ ವ್ಯಸನದಿಂದಾಗಿ ಆಕೆ 1996ರಲ್ಲಿ ವಿಚ್ಛೇದನವನ್ನು ಪಡಕೊಂಡಿದ್ದಾರೆ.

ಕೊನೆಯದಾಗಿ ಅವತ್ತು ಲಕ್ಷ್ಮಿ ಮಗಳು ಐಶ್ವರ್ಯಾಳನ್ನು ಕಣ್ಣೀರು ಕರೆದು ಬೇಡಿಕೊಂಡಿದ್ದಳು. ಆದ್ರೆ ಜಿಹಾದಿ ಹುಡುಗನ ಜತೆ ಆಕೆ ಮುಂದೆ ನಡೆದೇ ಬಿಟ್ಟಳು. 1990 ರ ದಶಕದಲ್ಲಿ ಲವ್ ಜಿಹಾದ್ ಎನ್ನುವ ಪದ ಬಳಕೆ ಅಷ್ಟಾಗಿ ಇರಲಿಲ್ಲ. ಆದರೂ ಅವರಿಬ್ಬರ ಮದ್ವೆ ವಿಚಾರ ಜೋರಾಗಿ ಸುದ್ದಿಯಾಗಿತ್ತು. ಯಾವಾಗ ಮಗಳು ತನ್ನ ಸಂಸ್ಕಾರ ಮತ್ತು ವಿವೇಕದ ಮಾತನ್ನು ಕೇಳದೆ ಮುಂದೆ ನಡೆದಲೋ, ಆಗ ಅಮ್ಮ ಜ್ಯೂಲಿ ಲಕ್ಷ್ಮಿ ಕಲ್ಲಾಗಿ ಹೋಗಿದ್ದಾಳೆ. ಮಗಳ ಬಗೆಗಿನ ಎಲ್ಲಾ ಸಂಬಂಧ ಮತ್ತು ಮಮಕಾರಗಳನ್ನು ಮರೆತು ಹೋಗಿದ್ದಾಳೆ. ಈಗ ಲಕ್ಷ್ಮಿಯ ಮಗಳು ಎಷ್ಟೇ ಕಷ್ಟದಲ್ಲಿ ಇದ್ದರೂ, ಲಕ್ಷ್ಮಿ ಸ್ಪಂದಿಸದೆ, ಸಹಾಯ ಮಾಡದೆ ಇರಲು ಇದೇ ಕಾರಣ.

ಹಾಗೆ ತನ್ವೀರ್ ಮದುವೆಯ ನಂತರ ಐಶ್ವರ್ಯ ಉದ್ಯಮವನ್ನು ತೊರೆಯಬೇಕಾಯಿತು ಎಂದು ಸಂದರ್ಶನ ಒಂದರಲ್ಲಿ ಆಕೆ ಬಹಿರಂಗಪಡಿಸಿದ್ದಾಳೆ. ಸಿನಿ ರಂಗದಲ್ಲಿ (film industry) ನಟಿಸುವ ಯಾವುದೇ ಆಫರ್ ಬಾರದೆ ಇದ್ದ ಕಾರಣ ಇವರು ತನ್ನ ಜೀವನದಲ್ಲಿ ಆರ್ಥಿಕವಾಗಿ ಕುಗ್ಗಿ ಹೋದರು. ಕೆಲವು ವರ್ಷಗಳ ನಂತರ ಐಶ್ವರ್ಯ ಅವರ ಏಕೈಕ ಮಗಳು ಅನೈನಾಳ ಮದುವೆಯಾಯಿತು. ಈ ಮದುವೆಯನ್ನೇ ಬಹಳ ಕಷ್ಟದಿಂದ ನಡೆಸಿಕೊಟ್ಟಿದ್ದೇನೆ ಎಂಬ ಮಾತನ್ನು ಅದೊಮ್ಮೆ ಐಶ್ವರ್ಯ ಬಿಚ್ಚಿಟ್ಟಿದ್ದರು.

ಹಾಗಾಗಿ ಯಾವುದೇ ಆರ್ಥಿಕ ಬೆಂಬಲವಿಲ್ಲದೆ, ಜೀವನೋಪಾಯಕ್ಕಾಗಿ ಅವಳು ಉದ್ಯೋಗವನ್ನು ಹುಡುಕಬೇಕಾಯಿತು. ಐಶ್ವರ್ಯ ಭಾಸ್ಕರನ್ (Aishwarya bhaskaran) ಈಗ ತಮ್ಮ ದೈನಂದಿನ ಜೀವನ ನಡೆಸಲು ಮನೆಯಲ್ಲಿ ಸೋಪು ತಯಾರಿಸಿ, ಮನೆ ಮನೆಗೆ ಹೋಗಿ ಸಾಬೂನು ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಸಣ್ಣ ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದು ಈ ಮೂಲಕ ಆಗಾಗ ಏನಾದರೂ ಪೋಸ್ಟ್ ಹಾಕುತ್ತಾ ಇರುತ್ತಾರೆ. ಲವ್ ಜಿಹಾದ್ ಹುಡುಗನ ಹಿಂದೆ ಹೋದ ಸೆಲೆಬ್ರಿಟಿ ಬಾಳು ಬರಡಾಗಿದೆ.

ಇದನ್ನೂ ಓದಿ: ಹೃತಿಕ್ ಹಾಗೂ ಸಬಾ ಆಜಾದ್ ಸಂಬಂಧ ದ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ಹೇಳಿದ್ದೇನು ಗೊತ್ತಾ?

4 Comments
  1. MichaelLiemo says

    ventolin prescription: Buy Albuterol inhaler online – buy ventolin inhaler online
    can you buy ventolin over the counter

  2. Josephquees says

    lasix 40mg: buy furosemide online – furosemide

  3. Timothydub says

    canadian online pharmacy reviews: best canadian pharmacy online – reputable canadian pharmacy

  4. Timothydub says

    reputable mexican pharmacies online: mexico pharmacies prescription drugs – mexico drug stores pharmacies

Leave A Reply

Your email address will not be published.