PAN Card: ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಮೊದಲು ಈ ಮಾಹಿತಿ ತಿಳಿದುಕೊಳ್ಳಿ!
PAN Card limit: ಇಂದು ಹೆಚ್ಚಿನ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ (PAN Card limit)ಅತ್ಯಗತ್ಯ ದಾಖಲೆಯಾಗಿದ್ದು, ಹೀಗಾಗಿ, ಪ್ಯಾನ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕೂಡ ಮುಖ್ಯವಾಗುತ್ತದೆ. ಪ್ಯಾನ್ ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ 10 ಸಂಖ್ಯೆಗಳ ಆಲ್ಫಾನ್ಯೂಮರಿಕ್ (Alpha Numeric Number)ಸಂಖ್ಯೆಯಾಗಿದೆ.ಪ್ಯಾನ್ ಕಾರ್ಡ್‌ನಲ್ಲಿ ಹೆಸರು, ಛಾಯಾಚಿತ್ರ, ಜನನ ಪ್ರಮಾಣಪತ್ರ, ಪ್ಯಾನ್ ಸಂಖ್ಯೆಯನ್ನು ಒಳಗೊಂಡಿರುತ್ತದೆ.
ಮತ್ತೊಂದೆಡೆ ಇ-ಪ್ಯಾನ್ ಎನ್ನುವುದು ವರ್ಚುವಲ್ ಪ್ಯಾನ್ ಕಾರ್ಡ್ (PAN Card) ಆಗಿದ್ದು ಅವಶ್ಯಕವಾಗಿದ್ದು, ಎಲ್ಲಿ ಬೇಕಾದರೂ ಇ-ಪರಿಶೀಲನೆಗೆ ಬಳಕೆ ಮಾಡಲಾಗುತ್ತದೆ. ಪ್ಯಾನ್ ಕಾರ್ಡ್ ಅನ್ನು ಗುರುತಿನ ದಾಖಲೆಯಾಗಿ ಉಪಯೋಗಿಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಸಾಲ ಪಡೆಯಲು ಐಟಿಆರ್ ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅವಶ್ಯಕವಾಗಿದೆ. ಪ್ಯಾನ್ ಸಂಖ್ಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ತೆರಿಗೆ ಪಾವತಿ ಮಾಡುವವರಿಗೆ ಪ್ಯಾನ್ ಕಾರ್ಡ್ ಅತ್ಯವಶ್ಯಕವಾಗಿದ್ದು, ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಆದಾಯ ತೆರಿಗೆ ಪಾವತಿ ಸಂದರ್ಭ ತೊಡಕು ಉಂಟಾಗುವುದು ನಿಶ್ಚಿತ.
ಆದಾಯ ತೆರಿಗೆ ಇಲಾಖೆಯು ನಿಗದಿಮಾಡಿದ ನಿಯಮದ ಅನುಸಾರ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದುವುದಕ್ಕೆ ಅವಕಾಶವಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ಅವರ ಹೆಸರಿನಲ್ಲಿ ನೀಡಲಾದ ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಉಪಯೋಗಿಸಬಹುದು. ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಆದಾಯ ತೆರಿಗೆ ದಾಖಲೆಗಳನ್ನ ಪರಿಶೀಲಿಸುವ ಸಂದರ್ಭ ಸಮಸ್ಯೆ ಉಂಟಾಗಬಹುದು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್‌ಗಳನ್ನು ಹೊಂದಿದ್ದರೆ ಆದಾಯ ತೆರಿಗೆ ಇಲಾಖೆಯ ಅನುಸಾರ ಆ ವ್ಯಕ್ತಿಯ ವಿರುದ್ಧ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 272B ಅಡಿಯಲ್ಲಿ ಪ್ರಕರಣ ದಾಖಲಿಸಿ ವಿಚಾರಣೆ ಕೂಡ ಮಾಡಬಹುದು. ದಂಡವನ್ನು ತಪ್ಪಿಸಿಕೊಳ್ಳಬೇಕಾದರೆ ನಾವು ಒಂದು ಪ್ಯಾನ್ ಕಾರ್ಡ್ ಮಾತ್ರ ಹೊಂದಿರಬೇಕಾಗುತ್ತದೆ.
ಒಬ್ಬರ ಪ್ಯಾನ್ ಕಾರ್ಡ್ ಮತ್ತೊಬ್ಬರು ಬಳಕೆ ಮಾಡುವಂತಿಲ್ಲ. ಒಂದು ವೇಳೆ, ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಇದ್ದರೆ ಕಾನೂನಿನ ಅನುಸಾರ ದಂಡ ವಿಧಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿರುವ ವ್ಯಕ್ತಿಗೆ ಹತ್ತು ಸಾವಿರದವರೆಗೆ ದಂಡವನ್ನು ವಿಧಿಸುವಸಾಧ್ಯತೆಯಿದೆ. ಒಂದಕ್ಕಿಂತ ಅಧಿಕ ಪ್ಯಾನ್ ಕಾರ್ಡ್ ಅನ್ನು ಹೊಂದುವುದನ್ನು ಆದಾಯ ತೆರಿಗೆ ಇಲಾಖೆಯ ನಿಯಮವನ್ನ ಉಲ್ಲಂಘನೆ ಮಾಡಿದಂತಾಗುತ್ತದೆ.
ಇದನ್ನು ಓದಿ : New York : ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್ ಕೇವಲ 24 ಸಾವಿರ ರೂ.ಗೆ ಮಾರಾಟ ; ಕಾರಣ ಏನು ಗೊತ್ತಾ?