New York: ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್ ಕೇವಲ 24 ಸಾವಿರ ರೂ.ಗೆ ಮಾರಾಟ ; ಕಾರಣ ಏನು ಗೊತ್ತಾ?
New York: ಅಬ್ಬಬ್ಬಾ!! ಬರೋಬ್ಬರಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್ (Flight Ticket) ಕೇವಲ 24 ಸಾವಿರ ರೂ.ಗೆ ಮಾರಾಟವಾಗಿದೆ ಎಂದರೆ ಆಶ್ಚರ್ಯವೇ ಸರಿ. ಹೌದು, ಅಷ್ಟು ಇಳಿಕೆಯಾಗಿದೆ ಎಂದರೆ ಅಚ್ಚರಿ ಉಂಟಾಗುವುದು ಸಾಮಾನ್ಯ. ಜಪಾನ್‌ನ (New York) ಆಲ್ ನಿಪ್ಪಾನ್ ಏರ್‌ವೇಸ್ (ಎಎನ್‌ಎ) ವಿಮಾನಯಾನ ಸಂಸ್ಥೆಯು ದುಬಾರಿ ಬ್ಯುಸಿನೆಸ್ ಕ್ಲಾಸ್ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಯಾಕೆ? ಕಾರಣವೇನು?
ಕೆಲವು ನಿರ್ದಿಷ್ಟ ಮಾರ್ಗಗಳಲ್ಲಿ ಏರ್‌ಲೈನ್ಸ್ ಟಿಕೆಟ್ ದರಗಳನ್ನು ಕಡಿತಗೊಳಿಸಲಾಗಿದೆ. ಆದರೆ, ಇದು ಬೇಕುಂತಲೇ ಕೊಟ್ಟಿರುವ ಆಫರ್ ಅಲ್ಲ, ಬದಲಾಗಿ ವೈಬ್‌ಸೈಟ್‌ನಲ್ಲಿ ಆದ ತೊಂದರೆಯಿಂದಾಗಿ (technical problem) ಕೆಲವು ಮಾರ್ಗದಲ್ಲಿ 8 ಲಕ್ಷ ರೂ. ಮೌಲ್ಯದ ವಿಮಾನದ ಟಿಕೆಟ್ ಕೇವಲ 24 ಸಾವಿರ ರೂ.ಗೆ ಮಾರಾಟವಾಗಿದೆ. ಅತಿ ದುಬಾರಿ ಬೆಲೆಯ ಟಿಕೆಟ್ ಕೇವಲ 73 ಸಾವಿರ ರೂ.ಗೆ ಪ್ರಯಾಣಿಕರಿಗೆ ದೊರೆತಿದೆ. ಇದರಿಂದ ಸಂಸ್ಥೆಗೆ ಲಕ್ಷಾಂತರ ರೂಪಾಯಿ ಹಣ ನಷ್ಟವಾಗಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಆಲ್ ನಿಪ್ಪಾನ್ ಏರ್‌ವೇಸ್ ಸ್ಪಷ್ಟನೆ ನೀಡಿದ್ದು, “ನಮ್ಮ ಏರ್‌ಲೈನ್ಸ್‌ನ ವಿಯೆಟ್ನಾಮ್ ಡೊಮೇನ್‌ನ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಟಿಕೆಟ್ ಕಡಿಮೆ ದರಕ್ಕೆ ಮಾರಾಟವಾಗಿದೆ. ಕರೆನ್ಸಿ ಪರಿವರ್ತನೆಯಲ್ಲಿನ ಸಮಸ್ಯೆಯಿಂದ ದರಗಳು ವಿಪರೀತ ಕಡಿಮೆಯಾಗಿ ಕಾಣಿಸಿಕೊಂಡಿವೆ. ಪ್ರಯಾಣಿಕರು ಇದರ ಲಾಭ ಪಡೆದು ಬುಕ್ ಮಾಡಿದ್ದರಿಂದ ಲಕ್ಷಾಂತರ ರೂ. ನಷ್ಟವಾಗಿದೆ,” ಎಂದು ತಿಳಿಸಿತು.
ಕಡಿಮೆ ಬೆಲೆಗೆ ಟಿಕೆಟ್ ಮಾರಾಟವಾಗಿದೆ ಎಂದು ತಿಳಿಸಿರುವ ಸಂಸ್ಥೆ
ಎಷ್ಟು ಟಿಕೆಟ್‌ಗಳು ಸೇಲ್ ಆಗಿದೆ ಎಂಬುದನ್ನು ತಿಳಿಸಿಲ್ಲ. ಒಟ್ಟಾರೆ ಭಾರೀ ದೊಡ್ಡ ಮೊತ್ತದ ನಷ್ಟವಾಗಿದೆ. ಸದ್ಯ ಮೇ ಮೊದಲ ವಾರದವರೆಗೆ ರಿಯಾಯಿತಿ ದರದ ಟಿಕೆಟ್ ಬಳಸಲು ಅವಕಾಶವಿರುತ್ತದೆ. ತಾಂತ್ರಿಕ ದೋಷದ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಜಪಾನ್‌ನ (Japan) ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದನ್ನು ಓದಿ : AC Tips : ಎಸಿ ಬಳಸುವ ಮುನ್ನ ಈ ಮಾಹಿತಿ ತಿಳಿಯಿರಿ!