Beautiful wifes of cricketers : ಅಪ್ಸರೆಯಂತೆ ಕಾಣೋ ಕ್ರಿಕೆಟಿಗರ ಹೆಂಡತಿಯರು! ಬ್ಯೂಟಿಯಲ್ಲಿ ಫಿಲಂ ಹೀರೋಯಿನ್ ಗಳಿಗೇ ನೀಡ್ತಾರೆ ಪೈಪೋಟಿ !

Beautiful wives of cricketers : ಇತ್ತೀಚಿನ ದಿನಗಳಲ್ಲಂತೂ ಸಿನಿಮಾ ನಟ ನಟಿಯರಿಗಿಂತಲೂ ಕ್ರಿಕೆಟ್(Cricket) ತಾರೆಯರಿಗೆ ಹೆಚ್ಚಿನ ಅಭಿಮಾನಿಗಳಿದ್ದಾರೆ ಅನ್ನಬಹುದು. ಅಂದಹಾಗೆ ಕೇವಲ ಕ್ರಿಕೆಟಿಗರಿಗೆ ಮಾತ್ರವಲ್ಲ ಈಗಂತೂ ಅವರ ಪತ್ನಿಯರಿಗೂ ಹಲವರು ಫ್ಯಾನ್ಸ್ ಆಗಿದ್ದಾರೆ. ಅಲ್ಲಾ ಕಣ್ರೀ! ಯಾವುದೇ ಫಿಲಂ ಹಿರೋಯಿನ್ ಗೂ ಕಡಿಮೆ ಇಲ್ಲದೆ ಅಪ್ಸರೆಯಂತೆ ಕಾಣೋ ನೆಚ್ಚಿನ ಆಟಗಾರರ ಹೆಂಡತಿಯರ ಸೌಂದರ್ಯಕ್ಕೆ ಮರುಳಾಗದವರಾರು ಹೇಳಿ? ಅದರಲ್ಲೂ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರೋದ್ರಿಂದ ಸದಾ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅವರಿಗೆ ಫ್ಯಾನ್ ಫಾಲೋವರ್ಸ್ ಕೂಡ ಜಾಸ್ತಿ. ಹಾಗಾದರೆ ಅಪ್ಸರೆಯರಿಗಿಂತ ಸುಂದರವಾಗಿ ಕಾಣುವ ಈ ಕ್ರಿಕೆಟಿಗರ ಪತ್ನಿಯರ ( Beautiful wives of cricketers) ಬಗ್ಗೆ ತಿಳಿಯೋಣ ಬನ್ನಿ.

 

ಆಸ್ಟ್ರೇಲಿಯಾದ ಕ್ರಿಕೆಟಿಗ ಬೆನ್ ಕಟಿಂಗ್ ಅವರ ಪತ್ನಿ ಎರಿನ್. ಅವರಿಗೆ ಹಾಲೆಂಡ್ ಎಂಬ ಹೆಸರೂ ಸೇರಿದೆ. ಕಟಿಂಗ್ ಕ್ರಿಕೆಟಾಂಗಣದಲ್ಲಿ ಆಲ್ ರೌಂಡರ್ ಮತ್ತು ಅವರ ಪತ್ನಿ ಆಸ್ಟ್ರೇಲಿಯಾದ ಖ್ಯಾತ ಗಾಯಕಿ ಆಗಿದ್ದರು. ಇದಲ್ಲದೆ, ಅವರು ಟಿವಿ ಕಾರ್ಯಕ್ರಮವನ್ನು ಸಹ ಆಯೋಜಿಸುತ್ತಾರೆ. ಎರಿನ್ ಹಾಲೆಂಡ್ ಕೂಡ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹೊಂದಿದ್ದು, ಕ್ರೀಡಾ ಆ್ಯಂಕರಿಗ್​ ಮಾಡುವುದನ್ನು ಹೆಚ್ಚಾಗಿ ಕಾಣಬಹುದು.

ಇನ್ನು ನಮ್ಮ ಟೀಮ್ ಇಂಡಿಯಾ ಆಟಗಾರ ಮನೀಶ್ ಪಾಂಡೆ ಪತ್ನಿ. ಪಾಂಡೆ ವೃತ್ತಿಪರ ಬ್ಯಾಟ್ಸ್‌ಮನ್ ಮತ್ತು ಅವರ ಪತ್ನಿ ಆಶ್ರಿತಾ ಶೆಟ್ಟಿ ದಕ್ಷಿಣದ ಪ್ರಸಿದ್ಧ ನಟಿ. ಇಂದ್ರಜಿತ್, ಒರು ಮುಂತಾದ ದೊಡ್ಡ ಚಿತ್ರಗಳಲ್ಲಿ ನಟಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ತಮ್ಮ ಅತ್ಯುತ್ತಮ ಬೌಲಿಂಗ್‌ನಿಂದ ಗಮನ ಸೆಳೆದಿದ್ದರು. ಇರ್ಫಾನ್ ಪಠಾಣ್ ಅವರ ಪತ್ನಿ ಸಫಾ ಬೇಗ್ ಇರ್ಫಾನ್ ಯಾವಾಗಲೂ ಬುರ್ಖಾದಲ್ಲಿ ಕಾಣಿಸಿಕೊಳ್ಳುತ್ತಾರೆ ಆದರೆ ಅವರು ನಿಜ ಜೀವನದಲ್ಲಿ ತುಂಬಾ ಸುಂದರವಾಗಿದ್ದಾರೆ. ಅಲ್ಲದೆ ವಿಶೇಷವೆಂದರೆ ಅವರು ಮಧ್ಯಪ್ರಾಚ್ಯ ಏಷ್ಯಾ ಪ್ರದೇಶದ ಪ್ರಸಿದ್ಧ ಮಾಡೆಲ್. ಆಕೆಯ ಫೋಟೋಗಳು ಅನೇಕ ಪ್ರಸಿದ್ಧ ಫ್ಯಾಷನ್ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿವೆ.

ಭಾರತದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಸರೂ ಕೂಡ ಈ ಪಟ್ಟಿಯಲ್ಲಿ ಇದೆ. ಅನುಷ್ಕಾ ಜೋಡಿಯನ್ನು ಅವರ ಅಭಿಮಾನಿಗಳು ‘ವಿರುಷ್ಕಾ’ ಎಂದು ಕರೆಯುತ್ತಾರೆ. ಅನುಷ್ಕಾ ಶರ್ಮಾ ಮಾಡೆಲ್ ಮತ್ತು ಬಾಲಿವುಡ್​ನ ಖ್ಯಾತ ನಟಿಯಾಗಿದ್ದಾರೆ.

ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ ಅವರ ಪತ್ನಿ ಕೂಡ ಸೌಂದರ್ಯದಲ್ಲಿ ಬಾಲಿವುಡ್​ ನಟಿಯರನ್ನೂ ಮೀರಿಸುವಂತಿದ್ದಾರೆ. ಅವರ ಪತ್ನಿಯ ಹೆಸರು ತಾರಾ ರಿಡ್ಗ್ವೇ ಮತ್ತು ಅವರು ಆಸ್ಟ್ರೇಲಿಯಾದವರಾಗಿದ್ದಾರೆ.

ಪಾಕಿಸ್ತಾನದ ವೇಗದ ಬೌಲರ್ ಹಸನ್ ಅಲಿ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರು. ಹಸನ್ ಅಲಿ ಪತ್ನಿ ಸಮಿಯಾ ಅರ್ಜು ಸೌಂದರ್ಯದ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಹರಿಯಾಣದ ಫರಿದಾಬಾದ್‌ನಲ್ಲಿ ಜನಿಸಿದ್ದಾರೆ.

ಇಂಗ್ಲೆಂಡ್‌ನ ಸ್ಟಾರ್ ಕ್ರಿಕೆಟಿಗ ಜೋ ರೂಟ್ ಅವರ ಪತ್ನಿ ಕ್ಯಾರಿ ಕಾಟ್ರೆಲ್‌ ಅತ್ಯಂತ ಸುಂದರವಾಗಿ ಕಾಣುಸುತ್ತಾರೆ. 2016ರ ಟಿ20 ವಿಶ್ವಕಪ್ ಸಮಯದಲ್ಲಿ, ರೂಟ್ ಕ್ಯಾರಿಗೆ ಲವ್​ ಪ್ರಪೋಸ್​ ಮಾಡಿದ್ದರು. ಬಳಿಕ ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದನ್ನೂ ಓದಿ: Vijayapriya Nityananda :ವೈರಲ್ ಆಯ್ತು ನಿತ್ಯಾನಂದ ಶಿಷ್ಯೆಯ ಹಾಟ್ ಫೋಟೋಸ್! ಕೋಟಿ ಕೋಟಿ ಬಿಟ್ಟ ಈಕೆ ನಿತ್ಯಾನಂದನ ಹಿಂದೆ ಯಾಕೆ ಬಂದ್ಲು?

Leave A Reply

Your email address will not be published.