Cracked Heels Treatment: ನಿಮ್ಮ ಹಿಮ್ಮಡಿಗಳು ಬಿರುಕು ಬಿಟ್ಟಿದೆಯೇ? ಇಲ್ಲಿದೆ ನೋಡಿ ಪರ್ಫೆಕ್ಟ್‌ ಸೊಲ್ಯೂಷನ್‌

Cracked Heels Treatment: ಶುಷ್ಕತೆ ಹೆಚ್ಚಿದಾಗ ಮತ್ತು ಚಳಿಗಾಲದಲ್ಲಿ ಒಡೆದ ಹಿಮ್ಮಡಿ ಸಮಸ್ಯೆ ಹೆಚ್ಚು. ಆದರೆ ಕೆಲವೊಮ್ಮೆ ಕಳಪೆ ಪಾದದ ನೈರ್ಮಲ್ಯ ಅಥವಾ ನಿರ್ಜಲೀಕರಣ ಚರ್ಮವನ್ನು ಮತ್ತಷ್ಟು ಹಾಳು ಮಾಡುತ್ತದೆ. ಇದು ಮಾನ್ಸೂನ್ ಅಥವಾ ಬೇಸಿಗೆಯಲ್ಲೂ ನಿಮ್ಮನ್ನು ತೊಂದರೆ ಉಂಟು ಮಾಡಬಹುದು.

ಒಡೆದ ಹಿಮ್ಮಡಿಗೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಗಳೆಂದರೆ ಬೊಜ್ಜು, ಸರಿಯಾಗಿ ಹಾಕದ ಬೂಟು, ದೀರ್ಘಕಾಲದ ಒಣ ಚರ್ಮ ಮತ್ತು ಸರಿಯಾದ ಆರೈಕೆ ಮತ್ತು ನೈರ್ಮಲ್ಯದ ಕೊರತೆ, ಹಾಗೆಯೇ ಒಡೆದ ಹಿಮ್ಮಡಿಯಲ್ಲಿ ಧೂಳಿನಂಶ ಕುಳಿತುಕೊಂಡು ತೊಂದರೆಯನ್ನುಂಟು ಮಾಡುತ್ತದೆ ಇದಕ್ಕಾಗಿ ಇಲ್ಲಿ ಪರಿಹಾರ (Cracked Heels Treatment) ತಿಳಿಸಲಾಗಿದೆ.

ಮುಖ್ಯವಾಗಿ ಚಳಿಗಾಲದ ಶುಷ್ಕತೆಯನ್ನು ತಪ್ಪಿಸಲು ಹಾಲಿನ ಪರಿಣಾಮಕಾರಿ ಮನೆಮದ್ದುಗಳನ್ನು ಇಲ್ಲಿ ತಿಳಿಸಲಾಗಿದೆ.

ಹಾಲಿನಲ್ಲಿ ಆಂಟಿಫಂಗಲ್, ಬ್ಯಾಕ್ಟಿರಿಯಾ ವಿರೋಧಿ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಇರುವುದರಿಂದ ಚರ್ಮಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿ ಪರಿಣಾಮ ಬೀರಬಹುದು. ಅಲ್ಲದೆ ಹಾಲು ಒಡೆದ ಹಿಮ್ಮಡಿಯನ್ನು ಗುಣಪಡಿಸುತ್ತದೆ. ಚಳಿಗಾಲದಲ್ಲಿ ಕಂಡುಬರುವ ಚರ್ಮದಲ್ಲಿನ ಉರಿಯೂತವನ್ನು ತೆಗೆದುಹಾಕುತ್ತದೆ. ಡೆಡ್ ಸ್ಕಿನ್’ಗಳನ್ನು ತೆಗೆದುಹಾಕಿ, ಪಾದವನ್ನು ಮೃದುವನ್ನಾಗಿಸುತ್ತದೆ.ಹೀಗಾಗಿ ರಾತ್ರಿ ಮಲಗುವ ಮೊದಲು ಪಾದಕ್ಕೆ ಹಾಲನ್ನು ಹಚ್ಚಿ ಮಲಗಿ. ಆದರೆ ಅದನ್ನು ಹೇಗೆ ಹಚ್ಚಬೇಕೆಂದು ಇಲ್ಲಿ ತಿಳಿಸಲಾಗಿದೆ.

ಹಾಲಿನ ಲೆಗ್ ಮಾಸ್ಕ್ ಮಾಡಿ ಹಚ್ಚಿರಿ :
ಹಾಲಿನ ಲೆಗ್ ಮಾಸ್ಕ್ ತಯಾರಿಸಲು ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ. ಸ್ವಲ್ಪ ಕುದಿ ಬಂದ ತಕ್ಷಣ ಇವೆರಡನ್ನು ಮಿಕ್ಸ್ ಮಾಡಿ. (1 ಕಪ್ ಹಾಲಿಗೆ 1 ಚೊಂಬು ನೀರಿನ ಪ್ರಮಾಣ)

ಈ ಮಿಶ್ರಣವನ್ನು ಒಂದು ಟಬ್’ಗೆ ಹಾಕಿ. ಅದಕ್ಕೆ 1 ಟೀಸ್ಪೂನ್ ತೆಂಗಿನ ಎಣ್ಣೆಯನ್ನು ಸೇರಿಸಿ ಮಿಶ್ರಣ ಮಾಡಿ. ಇದರಲ್ಲಿ ನಿಮ್ಮ ಪಾದಗಳನ್ನು ಅದ್ದಿ 5 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ.

ನಂತರ ನಿಮ್ಮ ಪಾದಗಳನ್ನು ಹೊರತೆಗೆದು, ಟವೆಲ್’ನಿಂದ ನಿಧಾನವಾಗಿ ಒರೆಸಿ. ಈ ಪ್ರಕ್ರಿಯೆ ಮುಗಿದ ಕೆಲ ಸಮಯದವರೆಗೆ ಸಾಕ್ಸ್ ಧರಿಸಿ. ಮಲಗುವ ಸಂದರ್ಭದಲ್ಲಿ ಸಾಕ್ಸ್ ತೆಗೆಯಿರಿ. ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿದರೆ ಉತ್ತಮ ಫಲಿತಾಂಶ ಸಿಗಲಿದೆ.

ಇದನ್ನು ಹೊರತು ಒಡೆದ ಹಿಮ್ಮಡಿಗೆ ಇತರ ಪರಿಹಾರ ಕ್ರಮ ಇಲ್ಲಿದೆ :

ಬಾಳೆಹಣ್ಣು :
ಎರಡು ಮಾಗಿದ ಬಾಳೆಹಣ್ಣುಗಳನ್ನು ಹಿಸುಕಿ ನಯವಾದ ಪೇಸ್ಟ್ ಮಾಡಿ. ಉಗುರು ಮತ್ತು ಕಾಲ್ಬೆರಳುಗಳ ಬದಿ ಸೇರಿದಂತೆ ಸಂಪೂರ್ಣ ಪಾದಕ್ಕೆ ಈ ಪೇಸ್ಟ್ ಹಚ್ಚಿರಿ . 20 ನಿಮಿಷ ನಂತರ ಪಾದಗಳನ್ನು ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಮಲಗುವ ಮುನ್ನ ಕನಿಷ್ಠ 2 ವಾರ ಪುನರಾವರ್ತಿಸಿ.

ವ್ಯಾಸಲೀನ್ ಮತ್ತು ನಿಂಬೆ ಹಣ್ಣು :
ಪಾದಗಳನ್ನು 15 ನಿಮಿಷ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. ತೊಳೆದು ಒಣಗಿಸಿ. ಒಂದು ಟೀ ಚಮಚ ವ್ಯಾಸಲೀನ್ ಮತ್ತು ಕೆಲವು ಹನಿ ನಿಂಬೆ ರಸ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕಣಕಾಲುಗಳು ಮತ್ತು ಪಾದಗಳ ಇತರ ಭಾಗಗಳಿಗೆ ಸಂಪೂರ್ಣವಾಗಿ ಅನ್ವಯಿಸಿ. ರಾತ್ರಿಯಿಡೀ ಉಣ್ಣೆಯ ಸಾಕ್ಸ್ ಧರಿಸಿ ಮತ್ತು ಬೆಳಿಗ್ಗೆ ತೊಳೆಯಿರಿ. ನಿಯಮಿತವಾಗಿ ಮಾಡಿ.

ಜೇನುತುಪ್ಪ:
ಬೆಚ್ಚಗಿನ ನೀರಿನಲ್ಲಿ ಒಂದು ಕಪ್ ಜೇನುತುಪ್ಪ ಮಿಶ್ರಣ ಮಾಡಿ. ಪಾದಗಳಿಗೆ ಹಚ್ಚಿ 20 ನಿಮಿಷ ಮೃದುವಾಗಿ ಮಸಾಜ್ ಮಾಡಿ. ನಂತರ ಪಾದ ಒಣಗಿಸಿ ಮತ್ತು ಮಾಯಿಶ್ಚರೈಸರ್ ಅನ್ವಯಿಸಿ. ನಿಯಮಿತವಾಗಿ ಮಾಡಿ.

ಅಲೋವೆರಾ ಜೆಲ್ :
ಪಾದಗಳನ್ನು ತೊಳೆದು ಒಣಗಿಸಿಕೊಳ್ಳಿ.
ನಂತರ ಅಲೋವೆರಾ ಜೆಲ್ ಅನ್ವಯಿಸಿ, ಸಾಕ್ಸ್ ಧರಿಸಿ ಮಲಗಿ.
ಮುಂಜಾನೆ ಕಾಲನ್ನು ಶುದ್ಧಗೊಳಿಸಿ.
4-5 ದಿನಗಳ ಕಾಲ ನಿರಂತರವಾಗಿ ಅನ್ವಯಿಸಿ. ನಂತರ ಉತ್ತಮ ಬದಲಾವಣೆಯನ್ನು ಗಮನಿಸಿ .

ತೆಂಗಿನ ಎಣ್ಣೆ:
ಮಲಗುವ ಮೊದಲು ಒಡೆದಿರುವ ಪಾದಗಳನ್ನು ತೊಳೆದು, ಒರೆಸಿಕೊಂಡ ಬಳಿಕ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ. ಇದು ಒಣ ಚರ್ಮಕ್ಕೆ ಮೊಶ್ಚಿರೈಸ್ ನೀಡುವುದು ಮಾತ್ರವಲ್ಲದೆ, ಸತ್ತ ಚರ್ಮದ ಕೋಶಗಳನ್ನು ಕಿತ್ತು ಹಾಕುತ್ತವೆ. ಇದು ಚರ್ಮದಲ್ಲಿ ಆಳವಾಗಿ ನುಗ್ಗಿ ಪೋಷಣೆ ನೀಡುತ್ತವೆ. ಈ ರೀತಿಯಾಗಿ ಒಡೆದ ಹಿಮ್ಮಡಿ ಸಮಸ್ಯೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: ಹೊಳೆ ನರಸಿಪುರದಲ್ಲಿ ರೇವಣ್ಣ ವಿರುದ್ಧ ಪ್ರೀತಂ ಗೌಡ ಟಕ್ಕರ್ !

Leave A Reply

Your email address will not be published.