Home Education Second Puc Results: ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್ 24,25 ರಂದು ಪ್ರಕಟವಾಗಲಿದೆಯೇ? ಇಲ್ಲಿದೆ ಉತ್ತರ!

Second Puc Results: ದ್ವಿತೀಯ ಪಿಯುಸಿ ಫಲಿತಾಂಶ ಎಪ್ರಿಲ್ 24,25 ರಂದು ಪ್ರಕಟವಾಗಲಿದೆಯೇ? ಇಲ್ಲಿದೆ ಉತ್ತರ!

Second Puc Results

Hindu neighbor gifts plot of land

Hindu neighbour gifts land to Muslim journalist

Second PUC Result: ದ್ವಿತೀಯ ಪಿಯುಸಿ(2nd PUC) ವಿದ್ಯಾರ್ಥಿಗಳಿಗೆ ಬಹು ಮುಖ್ಯ ಮಾಹಿತಿ ಪ್ರಕಟವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ(KARNATAKA SCHOOL EXAMINATION AND ASSESSMENT BOARD) ಮಾರ್ಚ್ 2023 ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು(Second Puc Exams) ದಿನಾಂಕ 09-03-2023 ರಿಂದ 29-03-2023 ರ ವರೆಗೆ ನಡೆಸಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಘಟ್ಟವಾಗಿದ್ದು, ಉತ್ತಮ ಅಂಕಗಳನ್ನು ಗಳಿಸಿ ತಮ್ಮ ನೆಚ್ಚಿನ ವ್ಯಾಸಂಗ ಮಾಡುವತ್ತ ವಿದ್ಯಾರ್ಥಿಗಳು ಗಮನ ಹರಿಸುತ್ತಿದ್ದಾರೆ. ಈ ನಡುವೆ ವಿದ್ಯಾರ್ಥಿಗಳಲ್ಲಿ ಫಲಿತಾಂಶದ (Second PUC Result)ಬಗ್ಗೆ ಭಯ ಆತಂಕ ಮನೆ ಮಾಡಿರುವುದು ಸಹಜ. ಸದ್ಯ, ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾಹಿತಿಯೊಂದು ಹೊರಬಿದ್ದಿದೆ.

ಈಗಾಗಲೇ ಪರೀಕ್ಷೆಗಳು ಮುಗಿದು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಫಲಿತಾಂಶ ಪ್ರಕಟವಾಗುವುದನ್ನು ಎದುರು ನೋಡುತ್ತಿದ್ದಾರೆ. ಈ ಕುರಿತ ಮುಖ್ಯ ಮಾಹಿತಿ ಪ್ರಕಟವಾಗಿದ್ದು, ಈಗಾಗಲೇ ಉತ್ತರ ಪತ್ರಿಕೆಗಳ ಮೌಲ್ಯಮಾಪನ (Answer Sheet Valuation)ಅಂಕಗಳ ಕೂಡಿಕೆ ಕಾರ್ಯಗಳು ಮುಗಿದಿವೆ ಎಂದು ತಿಳಿದುಬಂದಿದೆ. ಇದರ ಜೊತೆಗೆ ಏಪ್ರಿಲ್ 24 ಅಥವಾ 25 ರಂದು ಫಲಿತಾಂಶ ಪ್ರಕಟವಾಗಲಿದೆ.

2022 – 23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1,109 ಕೇಂದ್ರಗಳಲ್ಲಿ ನಡೆದಿದ್ದು, ಮಾರ್ಚ್ 9 ರಿಂದ ಮಾರ್ಚ್ 29 ರವರೆಗೆ ನಡೆದ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆ ಬರೆಯಲು 7,27,387 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಮೌಲ್ಯಮಾಪನ ಕಾರ್ಯ ಶುರುವಾಗುವ ಸಂದರ್ಭದಲ್ಲೇ ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಘೋಷಣೆಯಾಗಿರುವ ಹಿನ್ನೆಲೆ ಉಪನ್ಯಾಸಕರನ್ನು ಚುನಾವಣಾ ಕಾರ್ಯಕ್ಕೆ ತೊಡಗಿಸಿಕೊಂಡರೆ ಫಲಿತಾಂಶ ತಡವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿತ್ತು. ಆದರೆ ನಿಗದಿತ ಸಮಯದೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಂಡಿದ್ದು, ಹೀಗಾಗಿ, ಇನ್ನೇನು ಕೆಲವೇ ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:CBSC 10, 12 ನೇ ತರಗತಿ ಫಲಿತಾಂಶ ಒಂದೇ ದಿನದಲ್ಲಿ ಬರಲಿದೆಯೇ?