M.S.Dhoni: RCB ವಿರುದ್ಧ ಬ್ಯಾಟಿಂಗ್‌ ಮಾಡಲು ಬಂದ ಧೋನಿ! ಜನರ ಕರತಾಡನಕ್ಕೆ ಬೆಚ್ಚಿ ವಿಸ್ಮಯದ ನೋಟ ಬೀರಿದ ಅನುಷ್ಕಾ ಶರ್ಮಾ!

Share the Article

RCB vs CSK : ಕ್ರಿಕೆಟ್ ಎಂದರೆ ಎಲ್ಲರೂ ಇಷ್ಟ ಪಡುವ ಮನೋರಂಜನ ಕ್ರೀಡೆ ಅಂದರೆ ತಪ್ಪಾಗಲಾರದು. ಇನ್ನು ವಿಶೇಷ ಗಣ್ಯರು ಕ್ರಿಕೆಟ್ ವೀಕ್ಷಿಸಲು ಬಂದಾಗ ಕ್ಯಾಮರಾ ಅವರ ಕಡೆ ಒಂದು ಕಣ್ಣು ಇರಿಸಿರುವುದು ಸಹಜವೇ ಸರಿ. ಈಗಾಗಲೇ ಬೆಂಗಳೂರಿನ ಎಂ.ಎ. ಚಿನ್ನಸ್ವಾಮಿ ಸ್ಟೇಡಿಯಂ ಏಪ್ರಿಲ್ 17 ರಂದು ಸೋಮವಾರ RCB vs CSK ನಡುವಿನ ಪಂದ್ಯದ ವೇಳೆ ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಅನುಷ್ಕಾ ಶರ್ಮಾ ಹಾಜರಿದ್ದರು.

ವಿರಾಟ್ ಕೊಹ್ಲಿಯ ಮುದ್ದಿನ ಪತ್ನಿಯೂ ಪಂದ್ಯದ ವಿವಿಧ ಹಂತಗಳಲ್ಲಿ ಅನುಷ್ಕಾ ಶರ್ಮಾ ಅವರ ಪ್ರತಿಕ್ರಿಯೆಯನ್ನು ಸೆರೆಹಿಡಿಯುವ ಹಲವಾರು ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ.

ಅದರಲ್ಲಿ ಒಂದು ವಿಡಿಯೊ ಪ್ರಸ್ತುತ ವೈರಲ್ ಆಗುತ್ತಿದೆ. ಚೆನ್ನೈ ತಂಡದ ಮಹೇಂದ್ರ ಸಿಂಗ್ ಧೋನಿ ಕೊನೆಯ ಎರಡು ಬಾಲ್ ಗಳಿದ್ದಾಗ ಬ್ಯಾಟಿಂಗ್‌ಗೆ ಬಂದಾಗ ಪ್ರೇಕ್ಷಕರ ಉದ್ಘಾರ, ಚಪ್ಪಾಳೆ ಮತ್ತು ಧೋನಿ ಪರ ಬೆಂಬಲದ ಕೂಗಿನ ಸದ್ದಿಗೆ ಅನುಷ್ಕಾ ಶರ್ಮ ಪ್ರತಿಕ್ರಿಯಿಸಿರೋ ವಿಡಿಯೋ ವೈರಲ್ ಆಗಿದೆ.

https://twitter.com/cricket_country/status/1648033704277852160?ref_src=twsrc%5Etfw%7Ctwcamp%5Etweetembed%7Ctwterm%5E1648033704277852160%7Ctwgr%5Eaa874abd19c960b90182546456b7b497cb7645af%7Ctwcon%5Es1_c10&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadadunia-epaper-dh29e00a9127c54509981c2950cc20f885%2Frcbviruddhabyaatinggeilidhadhoniparaharshodgaaraanushkasharmavismayadhavidiyovairal-newsid-n491445238

 

ಒಂದು ಕ್ಷಣ ಅನುಷ್ಕಾ ಶರ್ಮಾ ಸಂಪೂರ್ಣವಾಗಿ ಪ್ರೇಕ್ಷಕರ ಗುಂಪಿನ ಪ್ರತಿಕ್ರಿಯೆಯನ್ನು ನೋಡುತ್ತಾ ಎಂಎಸ್ ಧೋನಿಗಾಗಿ ನೆರೆದಿದ್ದ ಪ್ರೇಕ್ಷಕರನ್ನು ನೋಡಿ ಖುಷಿ ಪಡುತ್ತಿದ್ದರು.

ಅದಲ್ಲದೆ ಪ್ರೇಕ್ಷಕರು ಧೋನಿ ಪರ ಬೆಂಬಲಕ್ಕೆ ನಿಂತ ರೀತಿಗೆ ಖುಷಿಗೊಂಡು ಅನುಷ್ಕಾ ಶರ್ಮಾ ನಗುತ್ತಾ ತಮ್ಮ ಪಕ್ಕದಲ್ಲಿದ್ದವರಿಗೆ “ಅವರು ಅವನನ್ನು ಇಷ್ಟ ಪಡುತ್ತಾರೆ ” ಎಂದು ಸನ್ನೆ ಮಾಡುವುದು ವೀಡಿಯೊ ತೋರಿಸುತ್ತದೆ.

ಸದ್ಯ ಸೋಮವಾರ ನಡೆದ ಪಂದ್ಯದಲ್ಲಿ 227 ರನ್‌ಗಳ ಬೃಹತ್ ಟಾರ್ಗೆಟ್ ನಲ್ಲಿ ಆರ್‌ಸಿಬಿ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು. RCB ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ರನ್ ನಿಂದ ಭರ್ಜರಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: ಲಕ್ಷ ಲಕ್ಷ ದಂಡ ಕಕ್ಕಿದ ವಿರಾಟ್ ಕೊಹ್ಲಿ: IPL ನೀತಿ ಸಂಹಿತೆ ಉಲ್ಲಂಘಿಸಿದ ಹಿನ್ನೆಲೆ, ಅಂತದ್ದು. ಎನ್ಮಾಡಿದ್ರು ಕೊಹ್ಲಿ ?!

Leave A Reply

Your email address will not be published.