Dream Interpretation: ಸ್ವಪ್ನದಲ್ಲಿ ಇವುಗಳನ್ನು ಕಂಡರೆ ನಿಮ್ಮ ಅದೃಷ್ಟ ಖುಲಾಯಿಸುವುದು ಪಕ್ಕಾ!

Dream Interpretation: ಕನಸು(Dream) ಕಾಣುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಎಷ್ಟೋ ಬಾರಿ ನಮ್ಮ ಅರಿವಿಗೆ ಬಾರದೆ ನಾವು ಆಲೋಚನೆ ಮಾಡುವ ಎಷ್ಟೋ ಸಂಗತಿಗಳು ಸ್ವಪ್ನದ ರೂಪದಲ್ಲಿ ಗೋಚರಿಸುತ್ತವೆ. ನಮಗೆ ಬೀಳುವ ಕನಸುಗಳು (Dream Interpretation) ಭವಿಷ್ಯದ ಬಗ್ಗೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳ ಬಗ್ಗೆ ತಿಳಿಸುತ್ತದೆ. ಇದರ ಜೊತೆಗೆ ನಮ್ಮ ಭವಿಷ್ಯದ ಘಟನೆಗಳನ್ನು ಹೇಳುತ್ತವೆ ಎಂಬುದು ಬಲ್ಲವರ ಮಾತು. ಹಾಗಿದ್ರೆ ನಿಮಗೂ ಈ ರೀತಿಯ ಕನಸು ಬೀಳುತ್ತಾ? ನಿಮಗೆ ಈ ಕನಸು ಬಿದ್ದರೆ ನಿಮ್ಮ ಅದೃಷ್ಟ ಖುಲಾಯಿಸೋದು ಪಕ್ಕಾ! ಯಾವುದೆಲ್ಲ ಅಂತೀರಾ ಹಾಗಿದ್ರೆ ಈ ಕುರಿತ ಮಾಹಿತಿ ನಿಮಗಾಗಿ.

 

#ಚಂದ್ರ
ಕನಸಿನಲ್ಲಿ ಚಂದ್ರನನ್ನು (Moon)ನೋಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆ ಪ್ರವೇಶ ಮಾಡುತ್ತಾಳೆ ಎಂಬುದನ್ನು ಸೂಚಿಸುತ್ತದೆ ಎಂಬ ನಂಬಿಕೆಯಿದೆ. ಸಪ್ನ ಶಾಸ್ತ್ರದಲ್ಲಿ ಕನಸಿನ ಅರ್ಥಗಳ ಬಗ್ಗೆ ಉಲ್ಲೇಖವಿದ್ದು, ಕನಸಿನ ಜ್ಯೋತಿಷ್ಯ ಶಾಸ್ತ್ರದ ಅನುಸಾರ, ಯಾವುದೇ ವ್ಯಕ್ತಿಯ ಕನಸಿನಲ್ಲಿ ಕಾಣುವ ಕೆಲವು ಘಟನೆಗಳು ಮುಂದಾಗುವ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತದೆ ಎನ್ನಲಾಗಿದೆ.

#ಮಳೆ
ಮಳೆ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಮೊದಲ ಮಳೆ, ಆ ಮಳೆಗೆ ನೆನೆದ ಮಣ್ಣಿನ ಪರಿಮಳ ಆಸ್ವಾದಿಸುವ ಮಂದಿಗೆ ಅದುವೇ ಸೊಗಸು. ಇದೇ ಮಳೆ ಕನಸಲ್ಲಿ ಕಂಡರೆ ಏನರ್ಥ ಗೊತ್ತಾ?ನೀವು ಕನಸಿನಲ್ಲಿ ಜೋರು ಮಳೆ (Rain)ಬರುತ್ತಿರುವುದನ್ನು ಕಂಡರೆ ನಿಮ್ಮ ಹಳೆ ಸಾಲಗಳಿಂದ ಮುಕ್ತಿ ಸಿಗುತ್ತದೆ ಎಂಬುದನ್ನು ಸೂಚಿಸುತ್ತದಂತೆ.ಅಷ್ಟೆ ಅಲ್ಲದೆ, ನೀವು ಆರ್ಥಿಕವಾಗಿ ಸದೃಢರಾಗುತ್ತೀರಿ ಎಂಬುದನ್ನು ಕೂಡ ಸೂಚಿಸುತ್ತದೆ.

#ಹಣ್ಣುಗಳಿಂದ ತುಂಬಿದ ಮರ
ಹಣ್ಣುಗಳಿಂದ ತುಂಬಿದ ಮರವನ್ನು ಕನಸಿನಲ್ಲಿ ಕಂಡರೆ ನಿಮ್ಮ ಅದೃಷ್ಟ ಶೀಘ್ರದಲ್ಲೇ ಖುಲಾಯಿಸಲಿದೆ. ನೀವು ನಿರಂತವಾಗಿ ಶ್ರಮಿಸಿದ ಕಠಿಣ ದಿನಗಳ ಪರಿಶ್ರಮದ ಫಲವನ್ನು ಪಡೆಯಲಿದ್ದೀರಿ ಎಂಬುದನ್ನು ಸೂಚಿಸುತ್ತದೆ.

#ಕೆಂಪು ಗುಲಾಬಿ
ಎಲ್ಲರ ಗಮನ ಸೆಳೆಯುವ ಪುಷ್ಪ ರಾಶಿಯಲ್ಲಿ ಗುಲಾಬಿ ಮೊದಲ ಸ್ಥಾನದಲ್ಲಿರುತ್ತೆ. ಪ್ರೀತಿ ನಿವೇದನೆಗೆ ಬಳಕೆ ಮಾಡುವ ಮಹಿಳಾಮಣಿಗಳ ಅತೀ ಪ್ರಿಯ ಹೂವಾದ ಕೆಂಗುಲಾಬಿ(RedRose) ಕನಸಿನಲ್ಲಿ ಕಂಡರೆ ಶುಭ ಎನ್ನಲಾಗುತ್ತದೆ. ಅತೀ ಶೀಘ್ರದಲ್ಲಿ ಯೇ ಸಂಪತ್ತಿನ ಅಧಿದೇವತೆಯಾದ ತಾಯಿ ಲಕ್ಷ್ಮಿಯ ದಯೆ, ಆಶೀರ್ವಾದ ನಿಮ್ಮ ಮೇಲಿದೆ ಎಂಬುದನ್ನು ಸೂಚಿಸುತ್ತದೆ.

#ಪೊರಕೆ
ಕಸವನ್ನು ಸ್ವಚ್ಚ ಮಾಡಲು ಬಳಕೆ ಮಾಡುವ ಪೊರಕೆಯನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಪೊರಕೆಯನ್ನು ಧರ್ಮ ಗ್ರಂಥಗಳಲ್ಲಿ ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಪೊರಕೆಯನ್ನು ಕಂಡರೆ ಶೀಘ್ರದಲ್ಲೇ ನಿಮಗೆ ಶ್ರೀಮಂತಿಕೆಯ ಭಾಗ್ಯ ಒಲಿದು ಬರಲಿದೆ ಎಂಬುದನ್ನು ಸೂಚಿಸುತ್ತದೆ.

#ದೇವರು
ಕನಸಿನ ಶಾಸ್ತ್ರದ ಅನುಸಾರ, ನೀವು ಕನಸಿನಲ್ಲಿ ದೇವರನ್ನು ಕಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಕೆಲಸದಲ್ಲಿ ನೀವು ಖಂಡಿತವಾಗಿಯೂ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಸುತ್ತದೆ. ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ ಎಂಬುದರ ಸಂಕೇತವಾಗಿದೆ.

 

ಇದನ್ನು ಓದಿ : Telugu actor Allu Ramesh: ತೆಲುಗು ನಟ ಅಲ್ಲು ರಮೇಶ್ ಹೃದಯ ಸ್ತಂಭನದಿಂದ ನಿಧನ 

Leave A Reply

Your email address will not be published.