Kiccha Sudeep: ಕಿಚ್ಚ ಸುದೀಪ್ BJP ಯಿಂದ ಸ್ಪರ್ಧೆ? ಪಟ್ಟಿ ಬಿಡುಗಡೆ ಮಾಡದೆ ಉಳಿದ ಈ 2 ಎರಡು ಕ್ಷೇತ್ರಗಳಲ್ಲಿ ತೊಡೆತಟ್ಟುವ ಸಾಧ್ಯತೆ

Share the Article

Election: ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ. ಸದ್ಯ ಮಾನ್ವಿ ಹಾಗೂ ಶಿವಮೊಗ್ಗ ಕ್ಷೇತ್ರಗಳಿಗೆ ಬಿಜೆಪಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೆ ಇರುವುದು ಜನರಲ್ಲಿ ಸಾಕಷ್ಟು ಗೊಂದಲ ಉಂಟು ಮಾಡಿದ್ದು, ಇದೇ ಸಂದರ್ಭದಲ್ಲಿ ದೊರೆತಿರುವ ಮಾಹಿತಿ ಪ್ರಕಾರ, ನಟ ಸುದೀಪ್( kiccha sudeep ) ಅವರನ್ನು ಚುನಾವಣೆಯ ಕಣಕ್ಕೆ ತರುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎನ್ನುವ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.

ಆದರೆ ಸುದೀಪ್ (Kiccha Sudeep) ಈಗಾಗಲೇ ತಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುತ್ತಿಲ್ಲ ಬದಲಾಗಿ ತಮ್ಮ ಬೆಂಬಲ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಮಾತ್ರ ಎಂದು ಸ್ಪಷ್ಟಪಡಿಸುವ ಮೂಲಕ ಸಕ್ರಿಯ ರಾಜಕೀಯ ಬರುವುದನ್ನು ಅಲ್ಲಗಳೆದಿದ್ದರು. ಒಟ್ಟಿನಲ್ಲಿ ಬಿಜೆಪಿಗೆ ಆಗಿರೋ ಡ್ಯಾಮೇಜ್ ಈ ರೀತಿಯಾಗಿ ಸರಿಪಡಿಸೊ ಲೆಕ್ಕಾಚಾರ ನಡೆದಿದ್ದು, ಹಾಗಾಗಿ ಈ ಎರಡು ಕ್ಷೇತ್ರಗಳನ್ನ ಕೊನೆ ಹಂತದವರೆಗೂ ಘೋಷಣೆ ಮಾಡಲು ಹಿಂದೇಟು ಹಾಕಲಾಗುತ್ತಿದೆ ಎಂಬ ಗಾಸಿಪ್ ಉಂಟಾಗಿದೆ.

ಮುಖ್ಯವಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿಲ್ಲ, ಇನ್ನೂ ಎಸ್ ಟಿ ಮೀಸಲು ಕ್ಷೇತ್ರವಾದ ಮಾನ್ವಿಯಲ್ಲಿ ನಾಯಕ ಸಮುದಾಯದ ಮತಗಳು ಹೆಚ್ಚಿರುವುದರಿಂದ ಈ ಎರಡು ಕ್ಷೇತ್ರದಲ್ಲಿ ಸುದೀಪ್ ಗೆ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲು ಮನವಿ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಬರುತ್ತಿದೆ .

ಇದನ್ನೂ ಓದಿ : ಅಕ್ರಮ ಗಣಿಗಾರಿಕೆ ಕಾರ್ಯಾಚರಣೆ ವೇಳೆ ʼಮಹಿಳಾಧಿಕಾರಿಯನ್ನು ಎಳೆದೊಯ್ದ ಆಘಾತಕಾರಿ Video Viral

Leave A Reply