Actress Soundarya: ನಟಿ ಸೌಂದರ್ಯ ಸಾಯೋ ವಿಷ್ಯ ಆಕೆಯ ತಂದೆಗೆ ಮೊದ್ಲೇ ಗೊತ್ತಿತ್ತಾ ? ಶಾಕಿಂಗ್ ಸತ್ಯ ಬಿಚ್ಚಿಟ್ಟ ಡೈರೆಕ್ಟರ್ !

Actress Soundarya : ಸೌಂದರ್ಯದ ಗಣಿ ಎಂದೇ ಕರೆಸಿಕೊಳ್ಳುವ ನಟಿ ಸೌಂದರ್ಯ (Actress Soundarya) ತಮ್ಮ ನೈಜ ನಟನೆ ಮತ್ತು ಸೌಂದರ್ಯದಿಂದ ಎಲ್ಲರ ಗಮನ ಸೆಳೆದಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ನಟಿ ಏಪ್ರಿಲ್‌ 17ಕ್ಕೆ ಕಣ್ಮರೆಯಾಗಿ 19 ವರ್ಷಗಳು ತುಂಬಿದೆ. ಆದರೆ, ನಟಿ ಸಾಯೋ ವಿಷ್ಯ ಆಕೆಯ ತಂದೆಗೆ ಮೊದ್ಲೇ ಗೊತ್ತಿತ್ತಂತೆ. ಹೌದಾ? ಈ ಬಗ್ಗೆ ಡೈರೆಕ್ಟರ್ ಏನು ಹೇಳಿದ್ರು? ಇಲ್ಲಿದೆ ನೋಡಿ ನಟಿ ಸೌಂದರ್ಯಳ ಸಾವಿನ ರಹಸ್ಯ.

 

ಈಕೆಯ ಹೆಸರು ಕೆ.ಎಸ್. ಸೌಮ್ಯ, ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಂತರ ಸೌಂದರ್ಯವಾಗಿ ಬದಲಾದರು. ತಂದೆ ಕೆ. ಸತ್ಯನಾರಾಯಣ ಚಿತ್ರರಂಗದಲ್ಲಿ ಬರಹಗಾರನಾಗಿ, ನಿರ್ಮಾಪಕನೂ ಆಗಿದ್ದಾರೆ. ಈಕೆಯ ಕನಸು ತಾನು ವೈದ್ಯೆಯಾಗಬೇಕೆಂಬದು (doctor). ಆದರೆ ಆಕಸ್ಮಿಕವಾಗಿ ಸಿನಿಮಾರಂಗಕ್ಕೆ (film industry) ಕಾಲಿಟ್ಟರು.

ನಟಿ ಸೌಂದರ್ಯಾ ಎಸ್ ಸಿದ್ದಲಿಂಗಯ್ಯ ನಿರ್ದೇಶಿಸಿದ ‘ಬಾ ನನ್ನ ಪ್ರೀತಿಸು’ (baa nanna prithisu) ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸುಮಾರು 12 ವರ್ಷಗಳ ಅಂತರದಲ್ಲಿ ನಟಿ ಸೌಂದರ್ಯ 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದರು. ಅದರಲ್ಲೂ ಸೌಂದರ್ಯ ನಟನೆಯ ಆಪ್ತಮಿತ್ರ (apatamithra) ಸಿನಿಮಾ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ನಟಿಯ ನಟನೆ ರೋಮಾಂಚನಕಾರಿಯಾಗಿದೆ, ಅತ್ಯದ್ಭುತವಾಗಿ ನಟಿಸಿದ್ದಾರೆ. ಆದರೆ, ನಂತರ ಕೇವಲ 31 ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು.

ಸೌಂದರ್ಯ 2003 ರಲ್ಲಿ ರಘು ಎಂಬವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಇದಾದ ಒಂದು ವರ್ಷದ ನಂತರ ಅವರು ರಾಜಕೀಯಕ್ಕೆ ಕಾಲಿಟ್ಟರು. 17 ಏಪ್ರಿಲ್ 2004 ರಂದು ಆಂಧ್ರಪ್ರದೇಶದ ಕರೀಂನಗರದಲ್ಲಿ ನಡೆಯಲಿರುವ ಬಿಜೆಪಿ (bjp) ಚುನಾವಣಾ ಪ್ರಚಾರಕ್ಕಾಗಿ ಸೌಂದರ್ಯ ಬೆಂಗಳೂರಿನಿಂದ (banglore) ವಿಮಾನದ ಮೂಲಕ ಹೊರಟರು. 4 ಆಸನಗಳ ಈ ವಿಮಾನದಲ್ಲಿ ಸೌಂದರ್ಯ ಅವರ ಸಹೋದರ ಅಮರನಾಥ್ (Amaranath) ಮತ್ತು ಇತರರು ಇದ್ದರು. ಜಕ್ಕೂರು ಏರ್‌ಫೀಲ್ಡ್‌ನಿಂದ 11.5 ನಿಮಿಷಕ್ಕೆ ಟೇಕಾಫ್ ಆದ ವಿಮಾನ 100 ಅಡಿ ಎತ್ತರಕ್ಕೆ ತಲುಪುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬಿದ್ದಿತು. ಈ ದುರಂತದಲ್ಲಿ ಸೌಂದರ್ಯಾ ಜೊತೆಗೆ ಸಹೋದರ ಅಮರ್‌ನಾಥ್ ಕೂಡ ಸಾವನ್ನಪ್ಪಿದರು‌.

ಕಳೆದ ವರ್ಷ ತೆಲುಗು ನಿರ್ದೇಶಕ ತ್ರಿಪುರನೇನಿ ಚಿಟ್ಟಿಬಾಬು ಸಂದರ್ಶನವೊಂದರಲ್ಲಿ ನಟಿ ಸೌಂದರ್ಯ ಬಗ್ಗೆ ಮಾತನಾಡಿದ್ದು, “ನಾನು ‘ರೈತುಭಾರತಂ’ ಸಿನಿಮಾ ಮಾಡುವಾಗ ಮೂವರು ನಾಯಕರಿಗೆ ಇಬ್ಬರು ನಾಯಕಿಯರು ಫಿಕ್ಸ್‌ ಆಗಿದ್ದರು. ಮತ್ತೊಬ್ಬ ನಾಯಕನಿಗೆ ರೋಜಾ ಅವರನ್ನು ನಾಯಕಿಯಾಗಿ ಕರೆ ತರಬೇಕು ಎಂದುಕೊಂಡಿದ್ದೆ. ಆದರೆ ನಾನು ಆಕೆಯ ಜೊತೆಗೆ ಆ ಬಗ್ಗೆ ಮಾತನಾಡಿರಲಿಲ್ಲ. ಅಷ್ಟರಲ್ಲಿ ಬೆಂಗಳೂರಿನ ಆಪ್ತರೊಬ್ಬರಿಂದ
ನನಗೆ ಕರೆ ಬಂತು. ನಿಮ್ಮ ಚಿತ್ರಕ್ಕೆ ಚೆನ್ನಾಗಿ ಹೊಂದುವ ನಟಿ ಸಿಕ್ಕಿದ್ದಾರೆ. ಒಮ್ಮೆ ಬೆಂಗಳೂರಿಗೆ ಬನ್ನಿ, ಆಕೆಯನ್ನು ಭೇಟಿಯಾಗಿ ಎಂದರು. ನನಗೆ ಆ ಹುಡುಗಿಯನ್ನು ನ್ಯಾಚುರಲ್ ಲುಕ್ ನಲ್ಲಿ ನೋಡಬೇಕಿತ್ತು. ಹಾಗಾಗಿ ಬೆಳಗ್ಗೆ 6 ಗಂಟೆಗೆ ಅವರ ಮನೆಗೆ ಹೋದೆ.
ಸೌಂದರ್ಯ ಅವರನ್ನು ನೋಡಿದ್ದೇ ತಡ ನನ್ನ ಸಿನಿಮಾಗೆ ಇವರೇ ನಾಯಕಿ ಎಂದು ನಿರ್ಧಾರ ಮಾಡಿಬಿಟ್ಟೆ. ಸೌಂದರ್ಯ ಮುಂದೆ ರೋಜಾ ಕೂಡಾ ಮರೆತುಹೋದರು. ನಂತರ ಅವರ ತಂದೆಯನ್ನು ಹೋಟೆಲ್‌ ರೂಮ್‌ಗೆ ಬರುವುದಕ್ಕೆ ಹೇಳಿ ಅಲ್ಲಿಂದ ಹೊರಟು ಹೋದೆ. ಅಲ್ಲದೆ, ಆ ಚಿತ್ರಕ್ಕೆ ಸೌಂದರ್ಯಗೆ 25 ಸಾವಿರ ರೂಪಾಯಿ ಸಂಭಾವನೆ ನಿಗದಿ ಮಾಡಿ ಅಡ್ವಾನ್ಸ್‌ ಆಗಿ 5 ಸಾವಿರ ಚೆಕ್‌ ರೆಡಿ ಮಾಡಿದೆ. ನಾನು ಸೌಂದರ್ಯ ತಂದೆಗೆ ಅದನ್ನು ನೀಡಲು ಹೋದೆ, ಆದರೆ ಅವರು ಒಂದು ಮಾತು ಹೇಳಿದರು” ಎಂದು ನಿರ್ದೇಶಕರು ಹೇಳಿದರು.

ಸೌಂದರ್ಯ ಅವರ ತಂದೆ ಏನು ಹೇಳಿದ್ರು ಗೊತ್ತಾ? ನೀವು ಇಂದು, ನಾಳಿನ ಅಗ್ರನಟಿಗೆ ಚೆಕ್‌ ಕೊಡಲು ಹೊರಟಿದ್ದೀರ ಅಂತ ಹೇಳಿದ್ರು.
ಅಷ್ಟೇ ಅಲ್ಲ, ನಾನು ನನ್ನ ಮಗಳನ್ನು ಹೊಗಳುತ್ತಿಲ್ಲ. ಅವಳ ಜಾತಕದಲ್ಲೇ ಇದೆ, ಮುಂದಿನ 12 ವರ್ಷಗಳ ಕಾಲ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡುತ್ತಾಳೆ ಎಂದು. ಆದರೆ, ದುರಾದೃಷ್ಟವೆಂದರೆ,
12 ವರ್ಷಗಳ ನಂತರ ಆಕೆ ಮದುವೆಯಾಗಿ ಚಿತ್ರರಂಗದಿಂದ ದೂರಾಗಬಹುದು ಎಂದು ಹೇಳಿದರು. ಸತ್ಯನಾರಾಯಣ ಅವರು ಅಂದು ಹೇಳಿದ ಅರ್ಥ, ಸೌಂದರ್ಯ ಚಿತ್ರರಂಗ ಮಾತ್ರವಲ್ಲ ಈ ಪ್ರಪಂಚವನ್ನೇ ಬಿಟ್ಟು ಹೋಗುತ್ತಾರೆ ಎಂಬುದು ಎಂದು ಈಗ ಅರ್ಥವಾಗಿದೆ ಎಂದು ಚಿಟ್ಟಿಬಾಬು ಭಾವುಕರಾಗಿ ನುಡಿದರು.

 

ಇದನ್ನು ಓದಿ : Rishi Sunak : ಪತ್ನಿಯಿಂದಲೆ ಬಂದ ಕುತ್ತು, ರಿಷಿ ಸುನಕ್ ಮೇಲೆ ತನಿಖೆ ನಡೆಸಲಿದೆ ಬ್ರಿಟನ್ ಸಂಸತ್ತು

Leave A Reply

Your email address will not be published.