Rishi Sunak: ಪತ್ನಿಯಿಂದಲೆ ಬಂದ ಕುತ್ತು, ರಿಷಿ ಸುನಕ್ ಮೇಲೆ ತನಿಖೆ ನಡೆಸಲಿದೆ ಬ್ರಿಟನ್ ಸಂಸತ್ತು

British Prime-Minister Rishi Sunak : ಭಾರತೀಯ ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಸುಪುತ್ರಿಯಾಗಿರುವ ಅಕ್ಷತಾ ಮೂರ್ತಿ ಅವರಿಗೆ ಸಮಸ್ಯೆಯೊಂದು ಎದುರಾಗಿದೆ .ಬ್ರಿಟನ್ ಪ್ರಧಾನಿ ರಿಷಿ ಸುನಕ್ (British Prime-Minister Rishi Sunak) ಅವರ ಪತ್ನಿ ಅಕ್ಷತಾಮೂರ್ತಿ (Akshata Murthy) ಅವರ ಉದ್ಯಮ ಚಟುವಟಿಕೆಗೆ ಸಂಬಂಧಿಸಿದಂತೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಸಂಸದೀಯ ಮಾನದಂಡಗಳ ಆಯುಕ್ತರು ತನಿಖೆ (Investigation)ಮಾಡುವ ಸಾಧ್ಯತೆ ದಟ್ಟವಾಗಿದೆ ಎಂದು ತಿಳಿದುಬಂದಿದೆ.

ಅಕ್ಷತಾಮೂರ್ತಿ ಚೈಲ್ಡ್​​ಕೇರ್ ಸಂಸ್ಥೆಯಲ್ಲಿ(Childcare company) ಪಾಲನ್ನು ಹೊಂದಿದ್ದು, ಮಾರ್ಚ್ನಲ್ಲಿ ಮಂಡನೆ ಮಾಡಿದ್ದ ಬಜೆಟ್ ವೇಳೆ ಆ ಚೈಲ್ಡ್ಕೇರ್ ಸಂಸ್ಥೆಗೆ ಬ್ರಿಟನ್ ಸರ್ಕಾರ ಅನುದಾನ ಘೋಷಿಸಿದೆ. ಹೀಗಾಗಿ ಹೊಸ ಆರೈಕೆ ಯೋಜನೆಯನ್ನು ಘೋಷಿಸುವಾಗ, ರಿಷಿ ಪ್ರಕಟಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಕ್ಕಳ ಆರೈಕೆ ಕಂಪನಿಯಲ್ಲಿ ರಿಷಿ ಅಕ್ಷತಾ ಮೂರ್ತಿ ಹೂಡಿಕೆದಾರರಾಗಿರುವುದರಿಂದ ರಿಷಿ ಸುನಕ್ ಅವರಿಗೆ ಸಂಕಷ್ಟ ಎದುರಾಗಿದ್ದು,ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರು ಸುಮಾರು $600 ಮಿಲಿಯನ್ ಮೌಲ್ಯದ ಕಂಪನಿಯಲ್ಲಿ 0.9% ಪಾಲನ್ನು( Company Share)ಹೊಂದಿದ್ದಾರೆ. ಲಿಬರಲ್ ಡೆಮಾಕ್ರಟ್​​ ಪಕ್ಷದ ನಾಯಕರು ಮಾಧ್ಯಮ ವರದಿಗಳ ಬಗ್ಗೆ ತನಿಖೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.

ರಿಜಿಸ್ಟರ್ ಆಫ್ ಇಂಟರೆಸ್ಟ್ ಸಮಯದಲ್ಲಿ, ರಿಷಿ ಸುನಕ್ ತನ್ನ ಪತ್ನಿಯ ಆಸ್ತಿಯನ್ನು ಬಿಡುಗಡೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಬ್ರಿಟನ್‌ನ ಸಂಸತ್ತಿನಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಿ ಆರೋಪ ಮಾಡಿದೆ. ಹೀಗಾಗಿ, ಕಮಿಷನರ್ ಡೇನಿಯಲ್ ಗ್ರೀನ್‌ಬರ್ಗ್ ಏಪ್ರಿಲ್ 13 ರಂದು ಪ್ರಧಾನ ಮಂತ್ರಿಯ ವಿರುದ್ಧ ತನಿಖೆಯನ್ನು ಪ್ರಾರಂಭಿಸಿರುವ ಬಗ್ಗೆ ಆಯುಕ್ತರ ವೆಬ್‌ಸೈಟ್ (Website) ಮಾಹಿತಿಯನ್ನು ಹಂಚಿಕೊಂಡಿದೆ.

ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಅನುಸಾರ, ವಿಚಾರಣೆಯನ್ನು ಸಂಸದರಿಗೆ ಸಂಬಂಧಿಸಿದ ನೀತಿ ಸಂಹಿತೆಯ ಪ್ಯಾರಾ 6 ಗೆ ಸಂಬಂಧಿಸಿದಂತೆ ಮಾತ್ರ ತನಿಖೆ ಮಾಡಲಾಗುತ್ತದೆ. ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿಯವರು ಶಿಶುಪಾಲನಾ ಸಂಸ್ಥೆಯಲ್ಲಿ ಹೂಡಿಕೆದಾರರಾಗಿರುವ ಹಿನ್ನೆಲೆ ಸರ್ಕಾರದಿಂದ (Government)ಈ ಕಂಪನಿ ಲಾಭವನ್ನ( Company Profit)ಪಡೆಯುತ್ತದೆ. ಹೀಗಿರುವಾಗ ಶಿಶುಪಾಲನಾ ಕಂಪನಿಯಲ್ಲಿ ಅವರ ಪತ್ನಿಯ ಪಾಲನ್ನು ಸರಿಯಾಗಿ ಘೋಷಿಸಲಾಗಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಿಷಿಯವರು ಕೂಡ ಯಾವುದಾದರೂ ವಿಷಯದಲ್ಲಿ ನಿಯಮ ಉಲ್ಲಂಘಿಸಿದ್ದಾರೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಸುನಕ್ ತಪ್ಪಿತಸ್ಥರೆಂದು ರುಜುವಾತು ಆದ ಪಕ್ಷದಲ್ಲಿ ಇವರ ವಿರುದ್ಧ ಕ್ರಮ ಸಮಿತಿಯು ಕ್ರಮ ಕೈಗೊಳ್ಳಲಿದ್ದು, ರಿಷಿ ಅವರನ್ನು ಸದಸ್ಯತ್ವದಿಂದ ಅಮಾನತು ಮಾಡುವ ಸಂಭವ ಕೂಡ ಹೆಚ್ಚಿದೆ.

 

 

ಇದನ್ನು ಓದಿ : Illustration: 5 ಸೆಕೆಂಡಿನೊಳಗೆ ಈ ಪುಸ್ತಕ ರಾಶಿಯಲ್ಲಿರುವ ಒಂದು ಮೇಣದ ಬತ್ತಿಯನ್ನು ಹುಡುಕಿ!

Leave A Reply

Your email address will not be published.