Home Breaking Entertainment News Kannada Ranvit Shetty Birthday: ಮಗನ ಬರ್ತ್‌ಡೇ ಗೋವುಗಳ ಜೊತೆ ಆಚರಿಸಿದ್ಯಾಕೆ ರಿಷಬ್‌ಶೆಟ್ಟಿ? ಇಲ್ಲಿದೆ ಸರಿಯಾದ ಕಾರಣ

Ranvit Shetty Birthday: ಮಗನ ಬರ್ತ್‌ಡೇ ಗೋವುಗಳ ಜೊತೆ ಆಚರಿಸಿದ್ಯಾಕೆ ರಿಷಬ್‌ಶೆಟ್ಟಿ? ಇಲ್ಲಿದೆ ಸರಿಯಾದ ಕಾರಣ

Ranvit Shetty Birthday

Hindu neighbor gifts plot of land

Hindu neighbour gifts land to Muslim journalist

Ranvit Shetty Birthday: ಕಾಂತಾರ’ ಸಿನಿಮಾ (Kantara Cinema) ರಿಷಬ್ ಶೆಟ್ಟಿ ವೃತ್ತಿ ಜೀವನದಲ್ಲಿ ದೊಡ್ದ ಮೈಲಿಗಲ್ಲು ಸೃಷ್ಟಿ ಮಾಡಿದ್ದು, ರಾತ್ರೋ ರಾತ್ರಿ ದೊಡ್ದ ಮಟ್ಟದ ನೇಮ್ ಫೇಮ್ ತಂದುಕೊಟ್ಟಿದೆ. ನಟನಾಗಿ, ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಿಷಬ್ ಶೆಟ್ಟಿ (Rishab Shetty)ಅವರು ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದು ಡಿವೈನ್ ಸ್ಟಾರ್ ಎಂಬ ಬಿರುದು ಪಡೆಯಲು ಕಾರಣವಾಗಿದ್ದು ಕಾಂತಾರ ಸಿನಿಮಾದ ನಟನೆ, ನಿರ್ದೇಶನ ಎಂದರೇ ತಪ್ಪಾಗದು. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಯಲ್ಲಿಯೂ ಹಿಟ್ ಆಗಿ ದಾಖಲೆ ಬರೆದದ್ದು ಗೊತ್ತೇ ಇದೆ. ಇದೀಗ, ಶೆಟ್ರ ಮನೆಯಲ್ಲಿ ಸಂಭ್ರಮದ ವಾತಾವರಣ ಕಳೆ ಕಟ್ಟಿದೆ.

ಕಳೆದ ತಿಂಗಳು ತಮ್ಮ ಮುದ್ದಿನ ಮಗಳು ರಾಧ್ಯಾ ಹುಟ್ಟುಹಬ್ಬದ ಸಂಭ್ರಮ ಅದ್ದೂರಿಯಾಗಿ ನಡೆದಿದ್ದು ನೆನಪಿರಬಹುದು. ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಯ ಮಗಳು ರಾಧ್ಯಾ ಮೊದಲ ಹುಟ್ಟುಹಬ್ಬ ಆಚರಣೆಗೆ ರವಿಚಂದ್ರನ್‌, ಉಪೇಂದ್ರ, ರಮೇಶ್‌ ಅರವಿಂದ್‌, ದರ್ಶನ್‌, ಅಭಿಷೇಕ್‌ ಅಂಬರೀಶ್‌, ಮನುರಂಜನ್‌ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ರಣ್ವಿತ್‌ಗೆ 4 ವರ್ಷಗಳು ತುಂಬಿದ್ದು, ಮಗ ಗೋವುಗಳೊಂದಿಗೆ ರಿಷಬ್‌ ಹುಟ್ಟುಹಬ್ಬ ಆಚರಿಸಿದ್ದು, ಮಗ ಬಹಳ ಇಷ್ಟಪಡುವ ಗೋವುಗಳೊಂದಿಗೆ ಈ ಬಾರಿ ರಿಷಬ್‌ ಶೆಟ್ಟಿ ಬರ್ತ್‌ಡೇ ಸೆಲಬ್ರೇಟ್(Ranvit Shetty Birthday)ಮಾಡಿದ್ದಾರೆ. ಆ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ (Social Media)ಹಂಚಿಕೊಂಡಿದ್ದಾರೆ.

ರಿಷಬ್‌ ಶೆಟ್ಟಿ, ಪ್ರಗತಿ ಶೆಟ್ಟಿ ಹಾಗೂ ಇಬ್ಬರು ಮಕ್ಕಳು ಹಳದಿ ಬಣ್ಣದ ಮ್ಯಾಚಿಂಗ್‌ ಡ್ರೆಸ್‌ ಧರಿಸಿ ಬರ್ತ್‌ಡೇ ಪಾರ್ಟಿಯನ್ನು ಸಂಭ್ರಮಿಸಿದ್ದಾರೆ. ರಿಷಬ್‌ ಹಾಗೂ ಕುಟುಂಬ ಗೋಶಾಲೆಯಲ್ಲಿ ಪೂಜೆ ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದಾಗಿದ್ದು, ಗೋಶಾಲೆ ಆವರಣದಲ್ಲೇ ಬರ್ತ್‌ಡೇ ಸ್ಟೇಜ್‌ ವ್ಯವಸ್ಥೆ ಮಾಡಿದ್ದು, ಮಗನ ಕೈಯ್ಯಲ್ಲಿ ಕೇಕ್‌ ಕತ್ತರಿಸಿದ್ದಾರೆ. ತಮ್ಮ ಮಗನ ಹುಟ್ಟುಹಬ್ಬವನ್ನು(Birthday celebration), ಮಗನ ಅತೀ ಪ್ರಿಯವಾದ ಗೋವುಗಳೊಂದಿಗೆ ಆಚರಿಸಿದ ಸಂತಸದ ಕ್ಷಣಗಳು ಎಂಬ ಕ್ಯಾಪ್ಷನ್‌ ನೀಡಿ ರಿಷಬ್‌ ವಿಡಿಯೋ(Video) ಹಂಚಿಕೊಂಡಿದ್ದಾರೆ.

ರಿಷಬ್‌ ಹಾಗೂ ಕುಟುಂಬ ಗೋಶಾಲೆಯಲ್ಲಿ ಪೂಜೆ ಮಾಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ರಿಷಬ್‌ ಶೆಟ್ಟಿ, ಪ್ರಗತಿ ಶೆಟ್ಟಿ ಹಾಗೂ ಇಬ್ಬರು ಮಕ್ಕಳು ಹಳದಿ ಬಣ್ಣದ ಮ್ಯಾಚಿಂಗ್‌ ಡ್ರೆಸ್‌ ಧರಿಸಿ ಬರ್ತ್‌ಡೇ ಪಾರ್ಟಿಯಲ್ಲಿ ಮಿಂಚುತ್ತಿದ್ದರು. ಕಾಂತಾರ ಸಿನಿಮಾದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಿಷಬ್ ಶೆಟ್ಟಿ (Rishab Shetty) ಮುಂದಿನ ಚಿತ್ರದ ಬಗ್ಗೆ ವಿಶೇಷ ಕುತೂಹಲ ವ್ಯಕ್ತವಾಗಿದೆ. ಸದ್ಯ , ಶೆಟ್ರು, ‘ಕಾಂತಾರ 2’ ಸಿನಿಮಾ (Kantara 2 Movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ಈ ಸಿನಿಮಾ ಸಿದ್ಧತೆಯ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಈ ಬಗ್ಗೆ ರಿಷಬ್ ಶೆಟ್ಟಿ ಅವರು ಮಾಹಿತಿ ನೀಡಿದ್ದಾರೆ.

 

ಇದನ್ನೂ ಓದಿ:  Maruti Super Carry: ಮಾರುತಿ ಬಿಡುಗಡೆ ಮಾಡಿದೆ ಜಬರ್ದಸ್ತ್ ಹೊಸ ಸೂಪರ್ ಕ್ಯಾರಿ ಕಾರು! ಏನಿದರ ವಿಶೇಷತೆ