PM Kisan: ವರ್ಷಕ್ಕೆ 6000 ರೂಪಾಯಿ ದುಡ್ಡು ಬೇಕಾ? ಮನೆಯಿಂದಲೇ ಕೂತು ಅಪ್ಲೈ ಮಾಡಿ

PM Kisan Samman Yojana: ದೇಶದ ರೈತರನ್ನು(Farmers)ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಾಗಿ, ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ (Agriculture Activity)ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ(PM Kisan Samman Yojana) ಮೂಲಕ ಆರ್ಥಿಕ ನೆರವನ್ನು ಕೂಡ ನೀಡುತ್ತಿರುವುದು ಗೊತ್ತಿರುವ ಸಂಗತಿ.

2019ರ ಫೆಬ್ರವರಿಯಲ್ಲಿ ಜಾರಿ ಮಾಡಿದ ಅನುಸಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದ್ದು, ಈ ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದರ ಜೊತೆಗೆ ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದೆ. ಸದ್ಯ, ದೇಶದ ಕೋಟ್ಯಂತರ ಬಡ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

ಸರ್ಕಾರವು ಶೀಘ್ರದಲ್ಲೇ 14 ನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಬಹುದು. ಮಾಧ್ಯಮ ವರದಿಗಳ ಅನುಸಾರ, 14 ನೇ ಕಂತಿನ ಹಣವನ್ನು ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೀವು ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ವಿಧಾನ ಅತೀ ಸುಲಭ ಹಾಗೂ ಸರಳವಾಗಿದೆ.
# ಮೊದಲಿಗೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು, ನೀವು ಪಿಎಂ ಕಿಸಾನ್ https://pmkisan.gov.in/ ಅಧಿಕೃತ ವೆಬ್ಸೈಟ್ ಅನ್ನು ತೆರೆದುಕೊಳ್ಳಬೇಕು.
# ಆ ಬಳಿಕ, ನೀವು ಫಾರ್ಮರ್ ಕಾರ್ನರ್ ನಲ್ಲಿ ಹೊಸ ರೈತ ನೋಂದಣಿಯ ಆಯ್ಕೆಯನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಪರದೆಯ ಮೇಲೆ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ನಿಮ್ಮ ಎಲ್ಲಾ ಅವಶ್ಯಕ ವಿವರಗಳನ್ನು ನಮೂದಿಸಬೇಕು.

# ಮುಂದಿನ ಹಂತದಲ್ಲಿ ಇಮೇಜ್ ಕೋಡ್ ನಮೂದಿಸಿದ ಬಳಿಕ, ನೀವು ಒಟಿಪಿ ಬಟನ್ ಅನ್ನು ಕ್ಲಿಕ್ ಮಾಡಿಕೊಂಡು ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ ಒಟಿಪಿಯನ್ನು ನಮೂದಿಸಿದರೆ ಅರ್ಜಿ ಪ್ರಕ್ರಿಯೆ ಮುಗಿಯುತ್ತದೆ.

ಬ್ಯಾಂಕಿನ ಖಾತೆಗೆ ಹಣವು ಯಾವಾಗ ಜಮಾ ಆಗುವ ಕುರಿತು ಮಾಹಿತಿ ಅರಿಯುವ ವಿಧಾನ ಹೀಗಿದೆ:
# ಮೊದಲಿಗೆ, https://pmkisan.gov.in/BeneficiaryStatus.aspx ಲಿಂಕ್ ಅನ್ನು ತೆರೆಯಬೇಕು.
# ಆನಂತರ, Farmers corner “ಫಾರ್ಮರ್ ಕಾರ್ನರ್” ನಲ್ಲಿ “Beneficiaries status” ಮೇಲೆ ಕ್ಲಿಕ್ ಮಾಡಬೇಕು. ನಂತರ, ಮೊಬೈಲ್ ನಂಬರ್ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅನ್ನು ನೋಂದಾಯಿಸಬೇಕು. ಆ ಬಳಿಕ, ಕ್ಯಾಪ್ಟ ( Captcha ) ಮೇಲೆ ಪ್ರೆಸ್ ಮಾಡಿ get data ಮೇಲೆ ಕ್ಲಿಕ್ ಮಾಡಬೇಕು.

# ನೀವು ಮೊಬೈಲ್ ನಂಬರ್ ಹಾಕಲು ಸಮಸ್ಯೆ ಉಂಟಾದರೆ, ಫಾರ್ಮಸ್ ರಿಜಿಸ್ಟ್ರೇಷನ್ ಐಡಿಯನ್ನು (Farmer Registration )ಬಳಸಿ ನೀವು ಮಾಹಿತಿಯನ್ನು ತೆಗೆದುಕೊಳ್ಳಬಹುದು.

# ಒಂದು ವೇಳೆ, ನಿಮಗೆ ಫಾರ್ಮರ್ ರಿಜಿಸ್ಟ್ರೇಷನ್ ಐಡಿ ತಿಳಿದಿಲ್ಲ ಎಂದಾದರೆ ಚಿಂತಿಸಬೇಕಾಗಿಲ್ಲ. Cick here to know your registration ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಮೊಬೈಲ್ ನಂಬರ್ ಅನ್ನು ನೋಂದಾಯಿಸಿದರೆ ನಿಮಗೆ ಫಾರ್ಮರ್ ರೆಜಿಸ್ಟ್ರೇಷನ್ ಐಡಿ ಲಭ್ಯವಾಗುತ್ತದೆ.

Leave A Reply

Your email address will not be published.