Nandini Gupta : ರಾಜಸ್ಥಾನ ಮೂಲದ 19ರ ತರುಣಿಗೆ ಒಲಿದ ʼಫೆಮಿನಾ ಮಿಸ್‌ ಇಂಡಿಯಾʼ ಪಟ್ಟ! ಅಷ್ಟಕ್ಕೂ ಈಕೆ ಯಾರು ಗೊತ್ತೇ?

Nandini Gupta : ಝಗಮಗಿಸುವ ಅಲಂಕಾರ, ಕಣ್ಣು ಕುಕ್ಕುವ ಲೈಟಿಂಗ್ ಇದರ ನಡುವೆ ವಿಭಿನ್ನ ವಸ್ತ್ರ ವಿನ್ಯಾಸ ಧರಿಸಿ ರ್ಯಾಂಪ್ ವಾಕ್ ಮಾಡುವ ಸುಂದರಿಯರು. ಮೋಹಕ ಮೈ ಮಾಟದ ಜೊತೆಗೆ ತಮ್ಮ ಬುದ್ದಿವಂತಿಕೆಯ ಪ್ರದರ್ಶನಗೈಯುತ್ತ ಹೆಜ್ಜೆ ಹಾಕುವ ಮಹಿಳಾಮಣಿಗಳು ಒಬ್ಬರಿಗೊಬ್ಬರು ಪೈಪೋಟಿ ನೀಡುತ್ತಾ ಸಾಗುತ್ತಾರೆ. ಈ ಸೊಬಗು ನೋಡುವುದೇ ಕಣ್ಣಿಗೆ ಹಬ್ಬ. ಇತ್ತೀಚೆಗೆ ನಡೆದ 59ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧೆ ನೀಡಿದ್ದರು. ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ 2023 (Miss India 2023) ಪಟ್ಟವನ್ನು ರಾಜಸ್ಥಾನದ ಕೋಟಾ ಮೂಲದ ಯುವತಿ ನಂದಿನಿ ಗುಪ್ತಾ (Rajasthan’s Nandini Gupta wins Miss India 2023)ಮುಡಿಗೇರಿಸಿಕೊಂಡಿದ್ದಾರೆ.

ಈ ಬಾರಿಯ ಮಿಸ್ ಇಂಡಿಯಾ 2023 ವಿಜೇತರಾಗಿರುವ ನಂದಿನಿ ಗುಪ್ತಾ(Nandini Gupta) ಅವರು ಈ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ. ಇವರು ಸದ್ಯ, ವಿದ್ಯಾರ್ಥಿನಿಯಾಗಿದ್ದು(Student)ಬ್ಯುಸಿಸೆನ್‌ ಮ್ಯಾನೆಜ್‌ಮೆಂಟ್‌ ವಿದ್ಯಾಭ್ಯಾಸ ಮಾಡುತ್ತಿದ್ದು ಜೊತೆಗೆ ಮಾಡೆಲ್ ಕೂಡ ಆಗಿದ್ದಾರೆ. ಭಾನುವಾರ ರಾತ್ರಿ ಮಣಿಪುರದ ಇಂಫಾಲದಲ್ಲಿ ನಡೆದ ಇವೆಂಟ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಹಲವು ಸಿನಿರಂಗದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಕೇವಲ 19ರ ಹರೆಯದಲ್ಲೇ ತನ್ನ ಸೌಂದರ್ಯದ (Beauty)ಮೂಲಕ ಮಿಸ್‌ ಇಂಡಿಯಾ ಆಗಿರುವ ಪ್ರತಿಭೆ ನಂದಿನಿ ಅವರ ಈ ಸಾಧನೆಗೆ ರತನ್‌ ಟಾಟಾ (Rathan Tata)ಅವರು ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ. ತಮ್ಮ ಸೌಂದರ್ಯದ ಜೊತೆಗೆ ಬುದ್ದಿವಂತಿಕೆಯ ಉತ್ತರಗಳಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜನರ ಜೊತೆಗೆ ತೀರ್ಪುಗಾರರ (Judge)ಮನ ಗೆದ್ದಿದ್ದಾರೆ.

ಈ ವರ್ಷ ತೆಲುಗು ರಾಜ್ಯಗಳ ಗೋಮತಿ (AP) ಮತ್ತು ಊರ್ಮಿಳಾ ಚೌಹಾಣ್ (Telangana) ಅವರು ನಂದಿನಿ ಅವರಿಗೆ ಟಫ್ ಕಾಂಪೇಟಿಶನ್ ನೀಡಿದ್ದರು ಎನ್ನಲಾಗಿದೆ. ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಇದರ ಜೊತೆಗೆ ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆಗಿ ಮಿಂಚಿದ್ದಾರೆ.

Leave A Reply

Your email address will not be published.