ODI World Cup : BCCI 5 ಸ್ಟೇಡಿಯಂ ದುರಸ್ಥಿಗೆ ಬರೋಬ್ಬರಿ 500 ಕೋಟಿ ನೀಡಲಿದೆ! ಏನಿದು ಹೊಸ ಪ್ಲಾನ್!!
ODI World Cup : ಏಕದಿನ ವಿಶ್ವಕಪ್‌ಗೆ (ODI World Cup) ಭರ್ಜರಿ ತಯಾರಿ ನಡೆಸಲಿದ್ದು, ಈ ವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಶುರುವಾಗಲಿರುವ ಏಕದಿನ ವಿಶ್ವಕಪ್‌ಗೆ ಭಾರತವೇ ಜವಾಬ್ದಾರಿ ವಹಿಸುತ್ತಿದೆ. ಪ್ರಸ್ತುತ 16ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದ್ದು, ಇದರ ಬಳಿಕ ಟೀಮ್ ಇಂಡಿಯಾ (Team India) ರಾಷ್ಟ್ರೀಯ ಸೇವೆಯಲ್ಲಿ ನಿರತವಾಗಲಿದೆ. ಅದಕ್ಕೂ ಮುನ್ನ ಮೂಲ ಸೌಕರ್ಯಗಳಿಂದ ದೂರವಿರುವ ಕ್ರೀಡಾಂಗಣಗಳ ನವೀಕರಣಕ್ಕೆ ಬಿಸಿಸಿಐ (BCCI) ನಿರ್ಧಾರ ಮಾಡಿದೆ .
ಇನ್ನು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಬಿಸಿಸಿಐ ಕನಸಿನ ಕೂಸು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಜಗತ್ತಿನ ರಿಚೆಸ್ಟ್ ಕ್ರಿಕೆಟ್ ಲೀಗ್ ಎಂದು ಖ್ಯಾತಿ ಪಡೆದಿದೆ. ಈಗಾಗಲೇ 15 ವರ್ಷಗಳನ್ನು ಪೂರ್ಣಗೊಳಿಸಿರುವ ಐಪಿಎಲ್, ಪ್ರಸ್ತುತ ಯಶಸ್ವಿ 16ನೇ ಆವೃತ್ತಿ ನಡೆಯುತ್ತಿದೆ. 2008ರಲ್ಲಿ ಜನ್ಮ ತಾಳಿದ ಮಿಲಿಯನ್ ಡಾಲರ್ ಟೂರ್ನಿ ಅತಿ ದೊಡ್ಡ ಕ್ರಿಕೆಟ್ ಲೀಗ್ ಎಂದೇ ಬಿಂಬಿಸಿಕೊಂಡಿದೆ. ಇದರ ನಡುವೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ T20 ಲೀಗ್ ಆಯೋಜಿಸಲು ಸೌದಿ ಅರೇಬಿಯಾ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಪ್ರಸ್ತುತ ಐಪಿಎಲ್‌ನ (IPL) ಪಂದ್ಯಗಳು 12 ಮೈದಾನಗಳಲ್ಲಿ ನಡೆಯುತ್ತಿದೆ. ಆದರೆ ಈ ವೇಳೆ ಮತ್ತು ಅದಕ್ಕೂ ಹಿಂದಿನ ಸರಣಿಗಳಲ್ಲಿ ಪ್ರೇಕ್ಷಕರಿಂದ ದೂರು ಕೇಳಿ ಬಂದಿದ್ದು, ಪ್ರೇಕ್ಷಕರ ನೀಡಿದ ದೂರಿನ ಹಿನ್ನೆಲೆಯಲ್ಲಿ ನವೀಕರಣಕ್ಕಾಗಿ ಬಿಸಿಸಿಐ ಒಟ್ಟು ಐದು ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡಿದೆ. ಈ 5 ಕ್ರೀಡಾಂಗಣಗಳ ಮರು ಅಭಿವೃದ್ಧಿಗೆ ಒಟ್ಟು 500 ಕೋಟಿ ರೂಪಾಯಿಗೂ ಖರ್ಚು ಮಾಡಲು ಬಿಸಿಸಿಐ ಮುಂದಾಗಿದೆ. ಏಕದಿನ ವಿಶ್ವಕಪ್ ಆರಂಭವಾಗುವುದರೊಳಗೆ ಹೊಸ ಟಚ್ ಕೊಡಲು ನಿರ್ಧರಿಸಿದೆ.
ಸದ್ಯ ಬಿಸಿಸಿಐ ನವೀಕರಣ ಮಾಡಲು ಬಯಸಿರುವ ಕ್ರೀಡಾಂಗಣಗಳ ಪೈಕಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವೂ ಒಂದು. ಫೆಬ್ರವರಿ – ಮಾರ್ಚ್‌ನಲ್ಲಿ ಭಾರತ – ಆಸ್ಟ್ರೇಲಿಯಾ ಮಧ್ಯೆ ನಡೆದ ಬಾರ್ಡರ್- ಗವಾಸ್ಕರ್ ಸರಣಿಯ ಸಂದರ್ಭದಲ್ಲಿ ಕ್ರಿಕೆಟರ್ ಪ್ರಿಯರು ಸ್ಟೇಡಿಯಂಗಳ ಶೌಚಾಲಯಗಳ ಬಗ್ಗೆ ದೂರು ನೀಡಿದ್ದರು. ಅದಕ್ಕಾಗಿ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ದುರಸ್ಥಿತಿಗೆ ಬಿಸಿಸಿಐ 100 ಕೋಟಿ ಮೀಸಲಿಟ್ಟಿದೆ.
ಇನ್ನು ಮುಂಬೈನ ವಾಂಖೆಡೆಗೆ ಮೈದಾನದ ನವೀಕರಣಕ್ಕೆ 78 ಕೋಟಿ 82 ಲಕ್ಷ ಮೀಸಲಿಡಲಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಮೈದಾನದ ಅಭಿವೃದ್ಧಿಗೆ 117 ಕೋಟಿ 17 ಲಕ್ಷ ಅನುದಾನ ಕೊಡಲಾಗಿದೆ.
ವರದಿ ಪ್ರಕಾರ, ಮರು ನವೀಕರಣಕ್ಕೆ ಆಯ್ಕೆಯಾದ ಕ್ರೀಡಾಂಗಣಗಳಲ್ಲಿ ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನವೂ ಇದೆ. ಈಡನ್ ಗಾರ್ಡನ್ ದುರಸ್ತಿಗೆ 127.82 ಕೋಟಿ ರೂಪಾಯಿಗಳನ್ನು ಪಾವತಿಸುತ್ತಿದೆ.
ಅದಲ್ಲದೆ ಪಂಜಾಬ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣಕ್ಕೆ 79.46 ಕೋಟಿ ನೀಡುತ್ತಿದೆ. ಐಸಿಸಿ ಏಕದಿನ ವಿಶ್ವಕಪ್‌ಗೆ ಒಟ್ಟು 12 ಕ್ರೀಡಾಂಗಣಗಳನ್ನು ಗುರುತಿಸಲಾಗಿದೆ. ಐದು ಮೈದಾನಗಳ ಹೊರತಾಗಿ ಚೆಪಾಕ್ ಮೈದಾನ, ಧರ್ಮಶಾಲಾ, ಗುವಾಹಟಿ, ಚಿನ್ನಸ್ವಾಮಿ ಮೈದಾನ, ಲಕ್ಲೋ, ಇಂದೋರ್ ಮೈದಾನದಲ್ಲೂ ಏಕದಿನ ವಿಶ್ವಕಪ್ ಟೂರ್ನಿಯ ಪಂದ್ಯಗಳೂ ನಡೆಯಲಿವೆ.
ಮುಖ್ಯವಾಗಿ ಸ್ಟೇಡಿಯಂಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡುತ್ತಿದೆ. ಶೌಚಾಲಯ, ಆಸನ, ಲೈಟಿಂಗ್ ವ್ಯವಸ್ಥೆ ಸೇರಿದಂತೆ ಪ್ರಮುಖ ಸಮಸ್ಯೆಗಳಿಂದ ಕಿರಿಕಿರಿ ಉಂಟಾಗಿದೆ ಎಂದು ಕ್ರಿಕೆಟ್ ಪ್ರಿಯರು ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡಿದ್ದಾರೆ. ಈ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ ಎಂದು ಈ ಮೂಲಕ ಕ್ರಿಕೆಟ್ ಪ್ರಿಯರು ಭರವಸೆ ಇಡಬಹುದಾಗಿದೆ.