Karnataka Election 2023: ಚುನಾವಣಾ ಕರ್ತವ್ಯ ನಿರ್ವಹಿಸುವವರಿಗೆ ಗುಡ್ ನ್ಯೂಸ್ ; ಭತ್ಯೆ ಹೆಚ್ಚಳಕ್ಕೆ ಸರ್ಕಾರ ಆದೇಶ!!

Karnataka Election 2023: ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಯ (Karnataka Election 2023) ಅಧಿಕೃತ ಪ್ರಕ್ರಿಯೆ ಶುರುವಾಗಿದೆ. ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ.13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಈ ಹಿನ್ನಲೆಯಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಚುನಾವಣಾ ಕರ್ತವ್ಯಕ್ಕೆ (Election Duty) ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು (Police Officer, Worker) ನಿಯೋಜಿಸಲಾಗಿದೆ. ಸದ್ಯ ಚುನಾವಣಾ ಕರ್ತವ್ಯ ನಿರ್ವಹಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ರಾಜ್ಯ ಸರ್ಕಾರವು ಚುನಾವಣೆಯ ಕಾರ್ಯನಿರ್ವಹಣೆಗೆ ನಿಯೋಜನೆಗೊಂಡ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಭತ್ಯೆಯನ್ನು ಪರಿಷ್ಕರಣೆ ಮಾಡಿದೆ.

 

ಈ ಬಗ್ಗೆ ಒಳಾಡಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಅರಕ್ಷಕ ಮಹಾ ನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ಪ್ರಸ್ತಾವನೆಯಲ್ಲಿ 2023ನೇ ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆ ನೇಮಿಸಲ್ಪಡುವ ವಿವಿಧ ಹುದ್ದೆಯ ಅಧಿಕಾರಿ, ಸಿಬ್ಬಂದಿಗಳ ಸಂಭಾವನೆ, ಚುನಾವಣಾ ಭತ್ಯೆಯನ್ನು ಪರಿಷ್ಕರಿಸಬೇಕಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹುದ್ದೆ ಮತ್ತು ಅದಕ್ಕಿಂತ ಮೇಲ್ಪಟ್ಟ ಹುದ್ದೆಯಲ್ಲಿರುವ ಅಧಿಕಾರಿಗಳಿಗೆ 7,000 ರೂ. ನಿಗದಿ ಮಾಡಲಾಗಿದೆ. ಈ ಮೊದಲು 5000 ರೂ. ಭತ್ಯೆ ನಿಗದಿ ಮಾಡಲಾಗಿದ್ದು, ಇದೀಗ ಅದನ್ನು ಪರಿಷ್ಕರಿಸಲಾಗಿದೆ.

ಪೊಲೀಸ್ ಇನ್ಸೆಕ್ಟರ್ ಗಳಿಗೆ ಪ್ರತಿದಿನದಂತೆ 500 ರೂ ನಿಂದ 700
ರೂಪಾಯಿಗೆ ಭತ್ಯೆ ಏರಿಕೆಯಾಗಿದೆ. ಪೋಲಿಸ್ ಸಬ್ ಇನ್ಸ್‌ಕ್ಟ‌ರ್, ಎಎಸ್‌ಐ, ಹೆಡ್ ಕಾನ್ಸ್ಟೇಬಲ್, ಕಾಸ್ಟೇಬಲ್ ಗಳಿಗೆ 350 ರೂಪಾಯಿಯಿಂದ 500 ರೂಪಾಯಿಗೆ ಭತ್ಯೆ ಪರಿಷ್ಕರಣೆಯಾಗಿದೆ.

ಹೋಂ ಗಾರ್ಡ್, ಗ್ರಾಮ ರಕ್ಷಾ ದಳ, ಎನ್ ಸಿಸಿ, ಫಾರೆಸ್ಟ್ ಗಾರ್ಡ್‌ ಸೇರಿದಂತೆ ಇತರೆ ಸಿಬ್ಬಂದಿಗೆ ಚುನಾವಣಾ ಭತ್ಯೆಯು ಪ್ರತಿದಿನದಂತೆ 150 ರೂ.ನಿಂದ 250 ರೂ.ಗೆ ಪರಿಷ್ಕರಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಪರಿಷ್ಕರಿಸಿದ ದರಗಳನ್ನು ಚುನಾವಣೆಯ ಪ್ರತಿ ಹಂತದ 5 ದಿನಗಳಿಗೆ ಮಾತ್ರ ಅನ್ವಯಿಸಿ ಪಾವತಿ ಮಾಡಲು ಕ್ರಮ ವಹಿಸಲು ತಿಳಿಸಿದ್ದಾರೆ.

 

ಇದನ್ನು ಓದಿ : Karnataka 2nd PUC Result 2023: ವಿದ್ಯಾರ್ಥಿಗಳೇ ಗಮನಿಸಿ, ಏಪ್ರಿಲ್ ಕೊನೆಯ ವಾರದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!! 

Leave A Reply

Your email address will not be published.