Dusky beauty: ಕರ್ರಗಿದ್ದ ಕಾಜೋಲ್​ ಏಕಾಏಕಿ ಬೆಳ್ಳಗಾಗಿದ್ದು ಹೇಗೆ? ಬಿಳಿ ಬಣ್ಣದ ಗುಟ್ಟು ಬಿಚ್ಚಿಟ್ಟ ನಟಿ ಹೇಳಿದ್ದೇನು?

Dusky beauty : ಅದ್ಭುತ ಅಭಿನಯ, ಅದ್ಭುತ ನೃತ್ಯ ಕೌಶಲ, ಅನೇಕ ಬ್ಲಾಕ್​ಬಸ್ಟರ್​ (Blockbuster) ಸಿನಿಮಾ ಕೊಟ್ಟಿರುವ, ನೋಡಲು ಕಪ್ಪಾಗಿದ್ದರೂ ಎಂಥವರನ್ನೂ ಮರಳು ಮಾಡುವ ಸೌಂದರ್ಯ ಹೊಂದಿರುವ ಬಾಲಿವುಡ್ ತಾರೆ ಕಾಜೋಲ್ ಬಣ್ಣ ಬಿಳಿಯಾಗಿಲ್ಲ ಎನ್ನುವ ಕಾರಣಕ್ಕೆ ಸಾಕಷ್ಟು ನೋವು ಅನುಭವಿಸಿದ್ದಾರೆ. ಆದರೀಗ ಕೃಷ್ಣ ಸುಂದರಿ, ಡಸ್ಕಿ ಬ್ಯೂಟಿ (Dusky beauty) ಎಂದೆಲ್ಲಾ ಕರೆಸಿಕೊಳ್ಳುತ್ತಿದ್ದ ನಟಿ ಕಾಜೋಲ್​, ಇದೀಗ ಏಕಾಏಕಿ ಬೆಳ್ಳಗಾಗಿದ್ದಾರೆ. ಇದು ಹೇಗೆ ಸಾಧ್ಯ?

 

ಹೌದು, ಎಲ್ಲರೂ ಮೆಚ್ಚುವಂತ ಸಿನಿಮಾ ನಟಿಯಾಗಬೇಕು, ಹಿರೋಯಿನ್ ಆಗಬೇಕು ಎಂದರೆ ಕೇವಲ ನಟನೆಯೊಂದಿದ್ದರೆ ಸಾಲದು, ಆಕೆ ಗ್ಲಾಮರಸ್ ಲುಕ್ ಇರಬೇಕು. ಇದರೊಂದಿಗೆ ತೆಳ್ಳಗೆ, ಬೆಳ್ಳಗೆ ಇದರಷ್ಟೇ ಆಕೆಗೆ ಫ್ರಿಪರೆನ್ಸ್, ಇಲ್ಲದಿದ್ದರೆ ಗೇಟ್ ಪಾಸ್. ಸಾಮಾನ್ಯವಾಗಿ ನಡೆಯೋದು ಹೀಗೆಯೆ. ಆದರೆ ಇದಕ್ಕೆ ವಿರುದ್ಧವಾಗಿ ಕಪ್ಪಗಿದ್ದ ಕೆಲವು ನಟಿಯರು ಕೃಷ್ಣ ಸುಂದರಿ ಎನಿಸಿಕೊಂಡು ಬೆಳ್ಳಿತೆರೆ ಮೇಲೆ ಮಿಂಚಿದ್ದಾರೆ. ಮಿಂಚುತ್ತಿದ್ದಾರೆ. ಅಂತವರಲ್ಲಿ ನಮ್ಮ ಸ್ಯಾಂಡಲ್​ವುಡ್​ನ ಸರಿತಾ, ಬಾಲಿವುಡ್ನ ಕಾಜೋಲ್ ಅವರು ಮುಂಚೂಣಿಯಲ್ಲಿದ್ದಾರೆ.

1992 ರಲ್ಲಿ ಕೇವಲ 17ನೇ ವಯಸ್ಸಿನಲ್ಲಿ ‘ಬೇಕುದಿ’ ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ಈ ಕೃಷ್ಣ ಸುಂದರಿ ಕಾಜೋಲ್, 1993 ರಲ್ಲಿ ಶಾರುಖ್ ಖಾನ್ ಅವರೊಂದಿಗೆ ‘ಬಾಜಿಗರ್’ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಸೂಪರ್ ಡೂಪರ್ ಹಿಟ್ ಆದ ಬಳಿಕ ಕಾಜೋಲ್ ಇನ್ನು ಹಲವು ಹಿಟ್​ ಚಿತ್ರಗಳನ್ನು ನೀಡಿದ್ದರು. ಶಾರುಖ್​ ಖಾನ್ ಜೊತೆ ನಟಿಸಿದ ‘ದಿಲ್‌ವಾಲೆ ದುಲಾನಿಯಾ ಲೇ ಜಾಯೇಂಗೆ’ ಮಾತ್ರ ಇಂದಿಗೂ ಜನಜನಿತವೇ. ಆದರೆ ಎಂಥವರನ್ನೂ ಮರಳು ಮಾಡುವ ಸೌಂದರ್ಯ ಹೊಂದಿದ್ದರೂ ಬಣ್ಣ ಬಿಳಿಯಾಗಿಲ್ಲ ಎನ್ನುವ ಕಾರಣಕ್ಕೆ ಈಕೆ ಕೂಡ ಸಾಕಷ್ಟು ನೋವು ಅನುಭವಿಸಿದವರೇ.

ಹೌದು, ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಕೆಲ ದಿನಗಳ ಬಳಿಕ ತಮ್ಮ ಬಣ್ಣದಿಂದಾಗಿ ತಾವು ಅನುಭವಿಸಿದ್ದ ಕಷ್ಟದ ಬಗ್ಗೆ ನಟಿ ಕಾಜೋಲ್ ಈ ಹಿಂದೆ ಮಾತಾಡಿದ್ದರು. ಆದರೀಗ ಇವೆಲ್ಲವುಗಳ ನಡುವೆಯೇ ಕಾಜೋಲ್​ ಎಲ್ಲರಿಗೂ ಸರ್​ಪ್ರೈಸ್​ ಕೊಟ್ಟಿದ್ದಾರೆ. ಅದೇನೆಂದರೆ ಕೃಷ್ಣ ಸುಂದರಿ ಬಿಳಿ ಬಣ್ಣದ ಸುಂದರಿಯಾಗಿ ಬದಲಾಗಿದ್ದಾರೆ. ಮೇಕಪ್​ ಮೂಲಕ ಇಷ್ಟು ಬೆಳ್ಳಗೆ ಮಾಡಲು ಸಾಧ್ಯವಿಲ್ಲ ಎಂದು ಅರಿತವರು ಹಲವಾರು ರೀತಿಯಲ್ಲಿ ನಟಿಯ ಬಣ್ಣದ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಡಸ್ಕಿ ಬ್ಯೂಟಿ ಎನಿಸಿಕೊಂಡಿದ್ದ ಕಾಜೋಲ್ ಈಗ ಸಿಕ್ಕಾಪಟ್ಟೆ ಫೇರ್ ಆಗಿ ಕಾಣಿಸ್ತಾರಲ್ಲ. ಏನಿದರ ಔಚಿತ್ಯ ಎಂದು ಹೋದಲ್ಲಿ, ಬಂದಲ್ಲಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ.

ಇನ್ನು ಸೆಲೆಬ್ರಿಟಿಗಳು ಎಂದ ಮೇಲೆ ಕೇಳಬೇಕೆ? ತಮ್ಮ ಅಂಗಾಂಗ ಸರಿ ಪಡಿಸಿಕೊಳ್ಳಲು ಕೋಟಿ ಕೋಟಿ ರೂಪಾಯಿ ಶಸ್ತ್ರ ಚಿಕಿತ್ಸೆಗಾಗಿ ಸುರಿಯುವವರು (Operation) ಇದ್ದಾರೆ. ಅದರಲ್ಲಿಯೂ ನಟಿಯರು ಎಂದ ಮೇಲೆ ಅವರ ಕಣ್ಣು, ಮೂಗು, ಬಾಯಿ ಮಾತ್ರವಲ್ಲದೇ ಸ್ತನದ ಗಾತ್ರ ಎಲ್ಲವೂ ಹೀಗೆಯೇ ಇರಬೇಕು ಎಂಬ ಸಿದ್ಧ ಮಾದರಿ ಇರುವ ಕಾರಣ, ಸಿನಿಮಾದಲ್ಲಿ ನೆಲೆಯೂರಲು ಬೇಕು-ಬೇಡದ ಶಸ್ತ್ರಚಿಕಿತ್ಸೆಯ ಮೊರೆ ಹೋಗುವುದು ಉಂಟು. ಅದೇ ರೀತಿ ಕಾಜೋಲ್​ ಕೂಡ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಎಂದವರೇ ಹೆಚ್ಚು.

ಆದರೆ ಈ ಎಲ್ಲಾ ಗುಸುಗುಸುಗಳಲ್ಲಿ ಕಾಜೋಲ್​ ತೆರೆ ಎಳೆದಿದ್ದಾಳೆ. ‘ನಾನು ಬೆಳ್ಳಗೆ ಬದಲಾಗಲು ಸಾಕಷ್ಟು ಚಿಕಿತ್ಸೆಗಳನ್ನು ಪಡೆದುಕೊಂಡಿದ್ದೇನೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಅದು ಶುದ್ಧ ತಪ್ಪು’ ಎಂದಿರುವ ನಟಿ, ಹಿಂದೆಲ್ಲಾ ‘ಕಪ್ಪಗಿದ್ದಾಳೆ. ದಪ್ಪ ಇದ್ದಾಳೆ. ಯಾವಾಗಲೂ ಕನ್ನಡಕ ಹಾಕಿಕೊಂಡಿರುತ್ತಾಳೆ’ ಎಂದೆಲ್ಲಾ ಆಡಿಕೊಳ್ಳುತ್ತಿದ್ದರು. ಆದರೆ ನಾನು ನನ್ನ ಬಣ್ಣದ ಬಗ್ಗೆ ಯಾವಾಗಲೂ ಅಷ್ಟು ತಲೆಕೆಡಿಸಿಕೊಂಡಿರಲಿಲ್ಲ, ಆಡಿಕೊಳ್ಳುವವರ ಬಾಯನ್ನು ಮುಚ್ಚಿಸಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತಿತ್ತು, ಅಂಥ ಟೀಕೆ ಟಿಪ್ಪಣಿಗಳಿಗೆ ತಲೆ ಕೆಡಿಸಿಕೊಂಡರೆ ಬದುಕಲು ಆಗುವುದಿಲ್ಲ. ಆದರೆ ಈಗ ಬೆಳ್ಳಗಾಗಲು ಕಾರಣವೂ ಇದೆ. ಆದರೆ ಅದು ಶಸ್ತ್ರಚಿಕಿತ್ಸೆಯಂತೂ ಅಲ್ಲವೇ ಅಲ್ಲ ಎಂದಿದ್ದಾರೆ.

10-12 ವರ್ಷಗಳ ಹಿಂದೆ ನಾನು ಹೆಚ್ಚು ಹೆಚ್ಚು ಸಿನಿಮಾ ಚಿತ್ರೀಕರಣದಲ್ಲಿ (Shooting) ಭಾಗವಹಿಸುತ್ತಿದ್ದೆ. ಅದಕ್ಕಾಗಿ ಹೊರಗಡೆ ಸುತ್ತಾಡುತ್ತಿದ್ದೆ. ಬಿಸಿಲು- ಧೂಳು ಎನ್ನಲೇ ಶೂಟಿಂಗ್​ನಲ್ಲಿ ಪಾಲ್ಗೊಳ್ಳಬೇಕಿತ್ತು. ಹಾಗಾಗಿ ನನ್ನ ಚರ್ಮ ಕಪ್ಪಗಾಗಿತ್ತು. ಆದರೆ ಕಳೆದ 10 ವರ್ಷಗಳಿಂದ ನಾನು ಮನೆಯಲ್ಲಿ ಇದ್ದೇನೆ. ಸೂರ್ಯನ ಕಿರಣಗಳಿಂದ ದೂರ ಇರುವುದರಿಂದ ಸ್ಕಿನ್ ಕಲರ್ ಬಂದಿದೆ. ಅಷ್ಟೇ, ಅದು ಬಿಟ್ಟು ನಾನು ಯಾವುದೇ ಸರ್ಜರಿ ಮಾಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

ಅಂದಹಾಗೆ 1999ರಲ್ಲಿ ಅಜೆಯ್​ ದೇವಗನ್​ (Ajay Devagan) ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಜೋಲ್ 23 ವರ್ಷಗಳ ಖುಷಿಯ ಸಂಸಾರಿಕ ಜೀವನ ನಡೆಸುತ್ತಿದ್ದಾರೆ. 1975 ಆಗಸ್ಟ್​ 5ರಂದು ಜನಿಸಿರುವ ಕಾಜೋಲ್​ ಅವರಿಗೆ ಈಗ 47 ವರ್ಷ ಪೂರ್ಣಗೊಂಡಿದೆ. 23 ವರ್ಷಗಳ ಈ ದಾಂಪತ್ಯ ಜೀವನದಲ್ಲಿ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗನ ಹೆಸರು ಯುಗ್, ಮಗಳ ಹೆಸರು ನ್ಯಾಸಾ.

Leave A Reply

Your email address will not be published.