Education loan: ಈ ಬ್ಯಾಂಕ್‌ ಗಳಲ್ಲಿ ಕಡಿಮೆ ಬಡ್ಡಿಗೆ ಶಿಕ್ಷಣ ಸಾಲ ದೊರೆಯುತ್ತದೆ ; ಸಂಪೂರ್ಣ ಮಾಹಿತಿ ಇಲ್ಲಿದೆ

Education loan : ಎಲ್ಲರಿಗೂ ಗೊತ್ತಿರುವ ಹಾಗೆ ಹಲವು ಬ್ಯಾಂಕ್ ಗಳಲ್ಲಿ ಶಿಕ್ಷಣ ಸಾಲ (Education loan) ಸಿಗುತ್ತದೆ. ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯ ಕಾರಣದಿಂದ ತಮ್ಮ ಹೆಚ್ಚಿನ ಓದಿಗೆ ಶಿಕ್ಷಣ ಸಾಲವನ್ನೇ ಅವಲಂಬಿಸುತ್ತಾರೆ. ಆದರೆ, ಯಾವ ‘ಬ್ಯಾಂಕ್‌’ಗಳಲ್ಲಿ ಕಡಿಮೆ ಬಡ್ಡಿಗೆ ಶಿಕ್ಷಣ ಸಾಲ ನೀಡಲಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ಕೆನರಾ ಬ್ಯಾಂಕ್‌ ಶೈಕ್ಷಣಿಕ ಸಾಲ (canara bank educational loan) : ಈ ಬ್ಯಾಂಕ್ ಶೇಕಡಾ 8.3 ಬಡ್ಡಿದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡುತ್ತಿದೆ. ಏಳು ವರ್ಷಗಳ ಅವಧಿಯೊಂದಿಗೆ ರೂ. 20 ಲಕ್ಷದವರೆಗೆ ಕೆನರಾ ಬ್ಯಾಂಕ್‌ (canara bank) ಶೈಕ್ಷಣಿಕ ಸಾಲವನ್ನು ನೀಡುತ್ತದೆ. ಇಎಂಐ 31,472 ರೂ. ಆಗಿದೆ.

ಸ್ಟೆಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಶಿಕ್ಷಣ ಸಾಲ ನೀತಿ:
SBI ವಿದ್ಯಾರ್ಥಿಗಳಿಗೆ 7.5% ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು
ಸಾಲವನ್ನು ನೀಡುತ್ತದೆ. EMI ಗೆ 30,677 ರೂ. ಆಗಿದೆ. ಹಾಗೆಯೇ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಡಿಬಿಐ (IDBI) ಬ್ಯಾಂಕ್‌ಗಳು ಕೂಡ ಇದೇ ಬಡ್ಡಿ ದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡುತ್ತವೆ.

ಇಂಡಿಯನ್ ಬ್ಯಾಂಕ್‌ ಮತ್ತು ಬ್ಯಾಂಕ್ ಆಫ್ ಬರೋಡಾ ಶಿಕ್ಷಣ ಸಾಲ ನೀತಿ : ಇಂಡಿಯನ್ ಬ್ಯಾಂಕ್‌ (Indian Bank) ಮತ್ತು ಬ್ಯಾಂಕ್ ಆಫ್ ಬರೋಡಾ (bank of baroda) ಏಳು ವರ್ಷಗಳ ಅವಧಿಯೊಂದಿಗೆ ರೂ. 20 ಲಕ್ಷದವರೆಗೆ ಶೈಕ್ಷಣಿಕ ಸಾಲವನ್ನು ನೀಡುತ್ತವೆ. ಈ ಎರಡು ಬ್ಯಾಂಕ್‌ಗಳ ಬಡ್ಡಿದರವು 7.9% ಆಗಿದೆ. ಅಲ್ಲದೆ, ಇವುಗಳ ಇಎಂಐ ಶುಲ್ಕವು ತಿಂಗಳಿಗೆ, 31,073 ರೂ. ಆಗಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶೈಕ್ಷಣಿಕ ಸಾಲ : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ಬಡ್ಡಿದರವು ಪ್ರಸ್ತುತ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಇದು 6.95% ಬಡ್ಡಿದರದಲ್ಲಿ ಶೈಕ್ಷಣಿಕ ಸಾಲವನ್ನು ನೀಡುತ್ತದೆ. ಈ ಸಾಲವನ್ನು ಏಳು ವರ್ಷಗಳ ಅವಧಿಯೊಂದಿಗೆ ರೂ 20 ಲಕ್ಷದ ವರೆಗೆ ಶೈಕ್ಷಣಿಕ ಸಾಲವನ್ನು ನೀಡುತ್ತದೆ.

​ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (Punjab national bank) ಶೈಕ್ಷಣಿಕ ಸಾಲ : ಇದು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲ ನೀಡುವ ಎರಡನೇ ಬ್ಯಾಂಕ್ ಆಗಿದೆ. ಶೇಕಡಾ 7.45 ಬಡ್ಡಿದರ ಇದ್ದು, EMI 30,627 ರೂ. ಆಗಿದೆ.

 

ಇದನ್ನು ಓದಿ : Taller surgery : ಪ್ರಿಯತಮೆಗಾಗಿ 5 ಇಂಚು ಎತ್ತರವಾಗಲು ಈ ಪುಣ್ಯಾತ್ಮ ಏನು ಮಾಡಿದ್ದಾನೆ ನೀವೇ ನೋಡಿ!

 

Leave A Reply

Your email address will not be published.