RajiniKanth: ಸೌಂದರ್ಯದ ಗಣಿ ಸಿಲ್ಕ್​ ಸ್ಮಿತಾಳೊಂದಿಗೆ ಸಂಬಂಧ ಹೊಂದಿದ್ರಂತೆ ಸೂಪರ್​ಸ್ಟಾರ್​ ರಜನೀಕಾಂತ್!​

Superstar Rajinikanth : ಚಿತ್ರರಂಗದಲ್ಲಿ ಡೇಟಿಂಗ್​, ಮದುವೆ, ವಿಚ್ಛೇದನದ ಜೊತೆಗೆ ಅವರಿವರ ಹೆಸರಿನ ಜೊತೆ ನಟ-ನಟಿಯರ ಹೆಸರು ಥಳಕು ಹಾಕುವುದು ಮಾಮೂಲು. ಅಂತೆಯೇ ಸೆಕ್ಸ್ ಬಾಂಬ್​ ಎಂದೇ ಖ್ಯಾತಿ ಪಡೆದಿದ್ದ ಸೌಂದರ್ಯದ ಗಣಿ ನಟಿ ಸಿಲ್ಕ್​ ಸ್ಮಿತಾ ಹಾಗೂ ರಜನಿಕಾಂತ್ (Superstar Rajinikanth )  ಬಗ್ಗೆ ಇದೀಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಹೌದು, ಹಿಂದೊಮ್ಮೆ ನಟ ರಜನೀಕಾಂತ್​ ಹಾಗೂ ಸ್ಮಿತ ಇಬ್ಬರೂ ಸಂಬಂಧ ಹೊಂದಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದ್ದು ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಸುದ್ದಿ ಮಾಡ್ತಿದೆ.

ನಟಿ ಮನಿಷಾ ಕೊಯಿರಾಲಾ ಅವರು ಇತ್ತೀಚೆಗೆ ತಮ್ಮ ಸೌತ್​ ಇಂಡಸ್ಟ್ರಿ ಪಯಣ ಹಾಳಾಗಿದ್ದೇ ನಟ ರಜನೀಕಾಂತ್​ ಅವರಿಂದ ಎಂಬ ಶಾಕಿಂಗ್​ ಹೇಳಿಕೆ ನೀಡಿದ್ದರು. ಅಷ್ಟಕ್ಕೂ ನಟಿ ಮಾಡಿದ್ದ ಆರೋಪ ಎಂದರೆ 2002ರಲ್ಲಿ ತೆರೆಕಂಡ ಸುರೇಶ್‌ ಕೃಷ್ಣ ನಿರ್ದೇಶನದಲ್ಲಿ ಮೂಡಿ ಬಂದ, ತಾವು ನಾಯಕಿಯಾಗಿ, ರಜನಿಕಾಂತ್‌ ನಾಯಕನಾಗಿ ನಟಿಸಿದ ಬಹಳ ನಿರೀಕ್ಷೆ ಹುಟ್ಟಿಸಿದ್ದ ಬಾಬಾ (Baba) ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ (Box Office) ಹೀನಾಯವಾಗಿ ಸೋತಿತ್ತು. ಅಲ್ಲಿಂದ ತಮಗೆ ಕೆಲಸವೇ ಇಲ್ಲದಂತಾಗಿತ್ತು ಎಂದು ಕಿಡಿಕಾರಿದ್ದರು. ಆದರೆ ಇದೀಗ ರಜನೀಕಾಂತ್​ ಅವರ ಇನ್ನೊಂದು ಸುದ್ದಿ ಈಗ ಬಹಳ ಸದ್ದು ಮಾಡುತ್ತಿದೆ.

ಹೌದು, ಸೌಂದರ್ಯದ ಗಣಿ ನಟಿ ಸಿಲ್ಕ್​ ಸ್ಮಿತಾ ಹಾಗೂ ರಜನಿಕಾಂತ್ ಬಗ್ಗೆ ಇದೀಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದ್ದು ಹಿಂದೊಮ್ಮೆ ಇವರಿಬ್ಬರು ಸಂಬಂಧ ಹೊಂದಿದ್ದರು ಎನ್ನುವ ಅಂಶ ಇದೀಗ ಬೆಳಕಿಗೆ ಬಂದಿದೆ. ದೇಶ ಕಂಡ ದೊಡ್ಡ ನಟನ ಜೊತೆಯಲ್ಲಿ ಸೈಡ್​ ಆ್ಯಕ್ಟ್ರೆಸ್​ ಅನಿಸಿಕೊಂಡಿದ್ದ ಸಿಲ್ಕ್​ ಸ್ಮಿತಾ ಹೆಸರು ಬಹಳ ದೊಡ್ಡ ಮಟ್ಟದಲ್ಲಿಯೇ ಚರ್ಚೆಯಾಗಿತ್ತು. ಈ ಜೋಡಿ ‘ಶಿವಪ್ಪು ಸೂರಿಯನ್’, ‘ಜೀತ್ ಹುಮಾರಿ’, ‘ತಂಗ ಮಗನ್’ ಮತ್ತು ‘ಪಾಯುಂ ಪುಲಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿತ್ತು. ಕಮಲ್ ಹಾಸನ್ ಅಭಿನಯದ ಸದ್ಮಾ ಬಿಡುಗಡೆಯಾದ ನಂತರ ನಟಿ ರಾತ್ರೋರಾತ್ರಿ ಸೆನ್ಸೇಷನ್ ಆಗಿದ್ದರು. ಸಿಲ್ಕ್ ಸ್ಮಿತಾ ಅವರೊಂದಿಗಿನ ವಿವಾದಾತ್ಮಕ ಡ್ಯಾನ್ಸ್ ಸೀಕ್ವೆನ್ಸ್‌ಗಳಿಂದ ರಜನಿಕಾಂತ್ ಕೂಡ ಸುದ್ದಿ ಮಾಡಿದ್ದಾರೆ.

ರಜನಿ ಅವರು ಸಿಲ್ಕ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದ್ದು, ಅವರಿಬ್ಬರ ಮಧ್ಯೆ ಸಂಬಂಧವಿತ್ತು (Relation) ಎನ್ನುವ ತನಕವೂ ಅಂದು ಜನರು ಚರ್ಚಿಸುತ್ತಿದ್ದರು. ಇಂತಹ ಅನೇಕ ವರದಿಗಳ ಹೊರತಾಗಿಯೂ, ರಜನಿಕಾಂತ್ ಮತ್ತು ಸಿಲ್ಕ್ ಸ್ಮಿತಾ ಸಂಬಂಧದ ವದಂತಿಗಳಿಗೆ ಪ್ರತಿಕ್ರಿಯಿಸದೆ ಪರಸ್ಪರ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದ್ದರು. ಕೊನೆಯವರೆಗೂ ಈ ಸಂಬಂಧದ ಗುಟ್ಟು ಅವರು ಬಿಟ್ಟುಕೊಟ್ಟಿರಲಿಲ್ಲ. ಆದರೆ ಇದರ ನಡುವೆಯೇ ಸಿಲ್ಕ್​ ಸ್ಮಿತಾ ದಾರುಣವಾಗಿ ಅಂತ್ಯ ಕಂಡರು.

ಕುಟುಂಬದ ಆರ್ಥಿಕ ಅಡಚಣೆಗಳಿಂದಾಗಿ ನಾಲ್ಕನೇ ತರಗತಿಯ ನಂತರ ಶಾಲೆಯನ್ನು ತೊರೆದಿದ್ದ ಸ್ಮಿತಾರನ್ನು ಚಿಕ್ಕ ವಯಸ್ಸಿನಲ್ಲಿಯೇ ಮದುವೆ ಮಾಡಲಾಗಿತ್ತು. ಆಕೆಯ ಪತಿ ಮತ್ತು ಕುಟುಂಬಸ್ಥರು ಕೆಟ್ಟದಾಗಿ ನಡೆಸಿಕೊಂಡಿದ್ದರಿಂದ ಮನೆ ಬಿಟ್ಟು ಓಡಿ ಹೋಗಿದ್ದರು. ಹಾಗೂ ಹೀಗೂ ಸಿನಿಮಾದಲ್ಲಿ (Cinema) ಸ್ಥಾನ ಗಿಟ್ಟಿಸಿಕೊಂಡರು. ಒಂದೆರಡು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರೂ, ನಂತರ ಅವರ ದೇಹ ಸೌಂದರ್ಯವೇ ಮುಳುವಾಗಿ ಅವರನ್ನು ಬಿ ಗ್ರೇಡ್​ ಕಲಾವಿದೆಯಾಗಿ ಬಳಸಿಕೊಳ್ಳಲಾಯಿತು.

ಜೀವನದಲ್ಲಿ ಆರ್ಥಿಕ ಹಿನ್ನಡೆ ಮತ್ತು ಹದಗೆಟ್ಟ ಸಂಬಂಧಗಳಿಂದ ನಟಿ 1996 ರಲ್ಲಿ 35ನೇ ವಯಸ್ಸಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು. ಚೆನ್ನೈನ ಫ್ಲಾಟ್‌ನಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. 2011 ರಲ್ಲಿ, ವಿದ್ಯಾ ಬಾಲನ್ ದಿ ಡರ್ಟಿ ಪಿಕ್ಚರ್ ನಲ್ಲಿ ಸಿಲ್ಕ್ ಸ್ಮಿತಾ ಪಾತ್ರವನ್ನು ಮಾಡಿದರು. ಇದರಲ್ಲಿ ನಟಿ ನಸರುದ್ದೀನ್​ ಶಾ (Nasaruddeen Shah) ಅವರೊಂದಿಗೆ ತುಂಬಾ ಬೋಲ್ಡ್ ದೃಶ್ಯಗಳನ್ನು ನೀಡಿದರು. ನಾಸಿರುದ್ದೀನ್ ಶಾ ಅವರ ಪಾತ್ರವು ರಜನಿಕಾಂತ್ ಅವರಿಂದ ಪ್ರೇರಿತವಾಗಿದೆ ಎಂದು ಹಲವಾರು ವರದಿಗಳು ಬಂದಿದ್ದವು.

ಅಂದಹಾಗೆ ನಟನೆ, ಸೌಂದರ್ಯ ಮಾತ್ರವಲ್ಲದೇ ನೃತ್ಯದಿಂದ ಮೋಡಿ ಮಾಡುತ್ತಿದ್ದವರು ಸಿಲ್ಕ್​ ಸ್ಮಿತಾ (Silk Smitha). ಈಗಿನಂತೆ ಆಗ ನಟಿಯರು ಅಂಗಾಂಗ ಪ್ರದರ್ಶನಕ್ಕೆ ಮುಗಿ ಬೀಳುತ್ತಿಲ್ಲವಾದ ಹಿನ್ನೆಲೆಯಲ್ಲಿ, ದೇಹ ಪ್ರದರ್ಶನಕ್ಕೆಂದೇ ಸೀಮಿತವಾಗಿದ್ದ ಸಿಲ್ಕ್ ಸ್ಮಿತಾರಂಥ ನಟಿಯರನ್ನು ಬಿ-ಗ್ರೇಡ್ ನಟಿ (B Grade Artist) ಎಂದು ಕರೆಯಲಾಗುತ್ತಿತ್ತು. ವಿಜಯಲಕ್ಷ್ಮಿ ವಡ್ಲಪಾಟಿ ಎಂಬುದು ಇವರ ಹುಟ್ಟು ಹೆಸರು. 1979 ರ ತಮಿಳು ಚಲನಚಿತ್ರ ವಂದಿಚಕ್ಕರಂನಲ್ಲಿ ‘ಸಿಲ್ಕ್’ ಪಾತ್ರಕ್ಕಾಗಿ ಮೊದಲ ಬಾರಿಗೆ ಗಮನ ಸೆಳೆದರು. ನಂತರ ಅವರ ಹೆಸರು ಸ್ಮಿತಾ ಎಂದು ಬದಲಾಗಿ ಎಲ್ಲರೂ ಸಿಲ್ಕ್​ ಸ್ಮಿತಾ ಎಂದೇ ಕರೆಯತೊಡಗಿದರು. ಇಂಥ ನಟಿಯ ಹೆಸರು ನಟ ರಜನೀಕಾಂತ್​ ಜೊತೆ ಚರ್ಚೆಯಾಗಿತ್ತು.

 

ಇದನ್ನು ಓದಿ : Actress Shobana : ಮಳೆಯ ಸೀನ್ ನಲ್ಲಿ ರಜನಿ ಸರ್ ಎತ್ತಿಕೊಂಡಾಗ ಒಳ ಉಡುಪು ಇರಲಿಲ್ಲ: ಶೋಭನ ನೋವಿನ ಮಾತು ವೈರಲ್!

Leave A Reply

Your email address will not be published.