Home Breaking Entertainment News Kannada Radhika Kumaraswamy : ಎಲೆಕ್ಷನ್ ಹತ್ತಿರ ಬಂದಾಗಲೇ ಹೊಸ ವೇಷದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ!

Radhika Kumaraswamy : ಎಲೆಕ್ಷನ್ ಹತ್ತಿರ ಬಂದಾಗಲೇ ಹೊಸ ವೇಷದಲ್ಲಿ ಕಾಣಿಸಿಕೊಂಡ ರಾಧಿಕಾ ಕುಮಾರಸ್ವಾಮಿ!

Hindu neighbor gifts plot of land

Hindu neighbour gifts land to Muslim journalist

Radhika Kumaraswamy: ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ರಾಧಿಕಾ ಕುಮಾರಸ್ವಾಮಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು ಹೀಗಾಗಿ, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.

ರಾಧಿಕಾ ಕುಮಾರಸ್ವಾಮಿ(Actress Radhika Kumaraswamy) ಇಂದು ಕನ್ನಡ ಚಿತ್ರರಂಗದಿಂದ ಕೊಂಚ ಅಂತರ ಕಾಯ್ದುಕೊಂಡರು ಕೂಡ ಮತ್ತೆ ಕಂಬ್ಯಾಕ್ ಆಗಿದ್ದು, ಅಭಿಮಾನಿಗಳನ್ನು ಮೋಡಿ ಮಾಡಲು ರೆಡಿಯಾಗಿದ್ದಾರೆ. ರಾಧಿಕಾ ಕುಮಾರಸ್ವಾಮಿ (Radhika Kumaraswamy),ಸೋಷಿಯಲ್ ಮೀಡಿಯಾದಲ್ಲಿ(Social Media) ಹೆಚ್ಚು ಆಕ್ಟೀವ್ ಇಲ್ಲದೆ ಇದ್ದರೂ ಕೂಡ ಅಪರೂಪಕ್ಕೆ ಒಮ್ಮೆಯಾದರೂ ವಿಡಿಯೋ ಹಾಕುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ಪಕ್ಷದ ಮುಖಂಡರಾಗಿರುವಂತಹ ಕುಮಾರಸ್ವಾಮಿಯವರ(Kumaraswamy) ಪತ್ನಿ ಎಂಬ ಕಾರಣಕ್ಕೆ ನಟಿ ರಾಧಿಕಾ ಹೆಚ್ಚು ಸುದ್ದಿಯಾಗುವುದು ಇದೆ.

ಇದೀಗ, ಚುನಾವಣೆ (Election)ಸಂದರ್ಭದಲ್ಲಿ ನಟಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇನಾದರೂ ಎಲೆಕ್ಷನ್ ಗಿಮಿಕ್ಕಾ ಎಂದು ನೀವು ಅಂದುಕೊಂಡರೆ ಖಂಡಿತ ಅಲ್ಲಾ!!ಎಲೆಕ್ಷನ್ಗೂ ಹಾಗೂ ರಾಧಿಕಾ ಕುಮಾರಸ್ವಾಮಿ ಅವರು ಸದ್ದು ಮಾಡುವುದಕ್ಕೂ ಕೂಡ ಯಾವುದೇ ಸಂಬಂಧವಿಲ್ಲ. ರಾಧಿಕಾ ಕುಮಾರಸ್ವಾಮಿ(Radhika Kumaraswamy) ಅವರು ಸದ್ದು ಮಾಡುತ್ತಿರುವುದು ತಮ್ಮ ಹೊಸ ಸಿನಿಮಾದ ವಿಚಾರದ ಕುರಿತಂತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಪೂರ್ಣಪ್ರಮಾಣದಲ್ಲಿ ಅದರಲ್ಲೂ ಥಿಯೇಟರ್ ನಲ್ಲೇ ಅಭಿಮಾನಿಗಳ ಜೊತೆ ಮುಖಾಮುಖಿ ಆಗಲು ಭರ್ಜರಿ ಸಿದ್ಧತೆ ಮಾಡುತ್ತಿದ್ದಾರೆ.

ರಾಧಿಕಾ ನಟನೆಯ ಭೈರಾದೇವಿ (Bhairadevi) ಸಿನಿಮಾ ಸಂಪೂರ್ಣ ಚಿತ್ರೀಕರಣ ಮುಗಿಸಿಕೊಂಡಿದ್ದು, ಶೂಟಿಂಗ್ ನಂತರದ ಕೆಲಸಗಳು ನಡೆಯುತ್ತಿದೆ ಎನ್ನಲಾಗಿದೆ. ಡೈರೆಕ್ಟರ್ ಶ್ರೀಜೈ ಈ ಚಿತ್ರದ ಎಲ್ಲ ಕೆಲಸ ಪೂರ್ಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಧಿಕಾ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದು,ಭೈರಾದೇವಿಯಾಗಿ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಕೂಡ ಮಾಡಿಕೊಂಡಿದ್ದು, ಇದೊಂದು ವಿಶೇಷ ಅವತಾರದ ಪಾತ್ರವಾಗಿರುವ ಹಿನ್ನೆಲೆ ರಾಧಿಕಾ ಅವರ ವೃತ್ತಿ ಜೀವನದ ಮಹತ್ವದ ಪಾತ್ರವಾಗಲಿದೆ.ರಾಧಿಕಾ ಕುಮಾರ​​ಸ್ವಾಮಿ (Bhairadevi Movie Release Soon) ಅವರು ಈ ಚಿತ್ರದ ಮೂಲಕ ಅಘೋರಿ ಪಾತ್ರವನ್ನು ಮಾಡಿದ್ದು, ಈ ಚಿತ್ರದಲ್ಲಿ ನಟ ರವಿಶಂಕರ್ (Actor Ravi shankar Special Role) ಕೂಡ ಮಹತ್ವದ ಅಘೋರಿ ಪಾತ್ರವನ್ನ ನಿರ್ವಹಿಸಿದ್ದಾರೆ. ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟು ಹಾಕಿದೆ.