Government scheme: ಈ ಯೋಜನೆಯಿಂದ ಮಹಿಳೆ ಮತ್ತು ಮಕ್ಕಳಿಗೆ ಸಿಗಲಿದೆ ತಿಂಗಳಿಗೆ ರೂ. 1500 ; ಹೆಚ್ಚಿನ ಮಾಹಿತಿ ಇಲ್ಲಿದೆ

Government scheme : ಸರ್ಕಾರ ಜನರ ಆರ್ಥಿಕ ನೆರವಿಗಾಗಿ ಹಲವು ಯೋಜನೆಗಳನ್ನು (Government scheme) ಜಾರಿಗೆ ತಂದಿದೆ. ಮಹಿಳೆ (women) ಹಾಗೂ ಮಕ್ಕಳಿಗೂ (child) ಹಲವು ಯೋಜನೆಗಳಿವೆ. ಸದ್ಯ ಈ ಯೋಜನೆಯೂ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಇರುವಂತಹ ಯೋಜನೆಯಾಗಿದೆ. ಸರ್ಕಾರದ ಈ ಯೋಜನೆಯಿಂದ ಮಹಿಳೆಯರು ಮತ್ತು ಮಕ್ಕಳು ತಿಂಗಳಿಗೆ 1500 ಪಡೆಯಬಹುದು. ಈ ಯೋಜನೆಯ ಬಗೆಗಿನ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.

 

ಈ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿ ಅವರು ಪ್ರಾರಂಭಿಸಿದ್ದು, ಪ್ರಸ್ತುತ ಬಿಹಾರದಲ್ಲಿ ಜಾರಿಗೆ ತರಲಾಗಿದೆ. ಅಂಗನವಾಡಿ ಲಾಭರ್ತಿ ಯೋಜನೆಯ ಪ್ರಯೋಜನವನ್ನು 1 ರಿಂದ 6 ವರ್ಷದೊಳಗಿನ ಮಕ್ಕಳು, ಹಾಲುಣಿಸುವ ತಾಯಂದಿರು ಹಾಗೂ ಗರ್ಭಿಣಿಯರು ಪಡೆಯಬಹುದಾಗಿದೆ.

ಈ ಯೋಜನೆಯ ಮೂಲಕ ಮಹಿಳೆ‌ ಹಾಗೂ ಮಕ್ಕಳಿಗೆ ಸರ್ಕಾರವು
ಬೇಯಿಸಿದ ಆಹಾರ ಮತ್ತು ಪಡಿತರವನ್ನು ಒದಗಿಸುತ್ತಿತ್ತು. ಆದರೆ ಕಳೆದ ವರ್ಷದ ಕೊರೋನಾ ಹಾವಳಿಯಿಂದಾಗಿ ಅಂಗನವಾಡಿ, ಶಾಲೆಗಳು ಮುಚ್ಚಿದ್ದು, ಇದರಿಂದಾಗಿ ಮಕ್ಕಳು ಹಾಗೂ ಗರ್ಭಿಣಿಯರು ಈ ಯೋಜನೆಯ ಲಾಭ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಹಾಗಾಗಿ ಈ ಬಾರಿ ಸರ್ಕಾರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಒಣ ಪಡಿತರ ಮತ್ತು ಬೇಯಿಸಿದ ಆಹಾರದ ಬದಲಿಗೆ ಹಣವನ್ನು ಕಳುಹಿಸಲು ಪ್ರಾರಂಭಿಸಿದೆ. 1500 ರೂ ಮೊತ್ತವನ್ನು ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ. ಇನ್ನು ಈ ಯೋಜನೆಯ ಲಾಭ ಪಡೆಯಲು ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲೆಗಳು :
ಬ್ಯಾಂಕ್ ಖಾತೆ ವಿವರಗಳು, ಆಧಾರ್ ಕಾರ್ಡ್ (Aadhar card), ಶಾಶ್ವತ ನಿವಾಸ ಪ್ರಮಾಣಪತ್ರ, ನೋಂದಾಯಿತ ಮೊಬೈಲ್ ಸಂಖ್ಯೆ, ಫಲಾನುಭವಿ ಮಗುವಿನ ಜನನ ಪ್ರಮಾಣಪತ್ರ, ಪಾಸ್ಪೋರ್ಟ್ ಸೈಜ್ ಫೋಟೋ

 

ಇದನ್ನು ಓದಿ : Watering Tulasi plant : ಯಾವುದೇ ಕಾರಣಕ್ಕೂ 2 ದಿನಗಳ ಕಾಲ ತುಳಸಿಗೆ ನೀರು ಹಾಕಬೇಡಿ! ಕಾರಣ ಏನು ಗೊತ್ತಾ?

Leave A Reply

Your email address will not be published.