Weekend with Ramesh : ಈವರೆಗಿನ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಯಾರ ಸಂಚಿಕೆಗೆ ಅತಿ ಹೆಚ್ಚು TRP ಬಂದಿತ್ತು ಗೊತ್ತಾ? ಮಾಹಿತಿ ತಿಳಿದರೆ ಖಂಡಿತ ಖುಷಿ ಪಡ್ತೀರಾ!!.

Weekend with Ramesh program : ಕಿರುತೆರೆಯ ಜನಪ್ರಿಯ ಶೋಗಳಲ್ಲಿ ‘ವೀಕೆಂಡ್ ವಿಥ್ ರಮೇಶ್’ (Weekend with Ramesh program) ಕೂಡ ಒಂದು. ಈಗಾಗಲೇ ವೀಕೆಂಡ್ ವಿಥ್ ರಮೇಶ್ ಸೀಸನ್ 5 (Weekend with Ramesh season 5) ಆರಂಭವಾಗಿ, ಜೀ ಕನ್ನಡ ವಾಹಿನಿಯಲ್ಲಿ (Zee kannada) ಪ್ರಸಾರವಾಗುತ್ತಿದೆ. ಮೊದಲ ಸಂಚಿಕೆಗೆ ಸ್ಯಾಂಡಲ್ ವುಡ್ ಮೋಹಕ ತಾರೆ ರಮ್ಯಾ (actress ramya) ಆಗಮಿಸಿದ್ದು, ನಂತರ ಪ್ರಭುದೇವ (prabhudeva), ಹಿರಿಯ ನಟ ದತ್ತಣ್ಣ, ಖ್ಯಾತ ಹೃದ್ರೋಗ ತಜ್ಞ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿ. ಎನ್ ಮಂಜುನಾಥ್ (dr. C.N. manjunath) ಅವರು ಅತಿಥಿಯಾಗಿ ಬಂದಿದ್ದು ತಮ್ಮ ಜೀವನ ಚರಿತ್ರೆಯನ್ನು ಜನರಿಗೆ ಪರಿಚಯಿಸಿದ್ದಾರೆ. ಈ ವಾರ ಡಾಲಿ ಧನಂಜಯ ಅತಿಥಿಯಾಗಿ ಬರ್ತಿದ್ದಾರೆ ಎನ್ನಲಾಗಿದೆ.

 

‘ವೀಕೆಂಡ್ ವಿತ್ ರಮೇಶ್’ ಕಳೆದ 9 ವರ್ಷಗಳಲ್ಲಿ 5 ಸೀಸನ್‌ಗಳಾಗಿ ಪ್ರಸಾರವಾಗಿದೆ. ಜನಪ್ರಿಯ ಶೋ ವೀಕೆಂಡ್ ವಿಥ್ ರಮೇಶ್ ಗೆ ಹಲವು ಸಾಧಕರು ಆಗಮಿಸಿದ್ದು, ಅವರ ಜೀವನಚರಿತ್ರೆಯನ್ನು ಕೇಳಲು ಜನರು ಮುಗಿಬೀಳುತ್ತಾರೆ. ಆದರೆ, ಈ ಜನಪ್ರಿಯ ಶೋ ನ ಟಿಆರ್‌ಪಿ ರೇಟಿಂಗ್ ನಿರ್ಧರಿಸುತ್ತದೆ ಆದರ ಯಶಸ್ಸನ್ನು. ಹಾಗಿದ್ದಾಗ
ಈವರೆಗೆ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಯಾರ ಸಂಚಿಕೆಗೆ ಅತಿ ಹೆಚ್ಚು TRP (weekend with Ramesh highest trp) ಬಂದಿರಬಹುದು?

ವೀಕೆಂಡ್ ವಿತ್ ರಮೇಶ್ ಮೊದಲ ಸೀಸನ್‌ನಲ್ಲಿ 20 ಸಾಧಕರ 26 ಸಂಚಿಕೆ, ಎರಡನೇ ಸೀಸನ್‌ನಲ್ಲಿ 24 ಸಾಧಕರ 34 ಸಂಚಿಕೆ, ಮೂರನೇ ಸೀಸನ್‌ನಲ್ಲಿ 21 ಸಾಧಕರ 28 ಸಂಚಿಕೆ, ನಾಲ್ಕನೇ ಸೀಸನ್‌ನಲ್ಲಿ 18 ಜನ ಸಾಧಕರ 22 ಸಂಚಿಕೆಗಳು ಹಾಗೂ ಈ ಬಾರಿಯ 5 ಸೀಸನ್‌ನಲ್ಲಿ 6 ಸಂಚಿಕೆಗಳಲ್ಲಿ 4 ಜನ ಸಾಧಕರ ಜೀವನ ಚರಿತ್ರೆಯನ್ನು ಹೇಳಲಾಗಿದೆ. ಆದರೆ ಇಷ್ಟು ಸಂಚಿಕೆಯಲ್ಲಿ ಯಾರ ಸಂಚಿಕೆಗೆ ಅತಿ ಹೆಚ್ಚು TRP ಬಂದಿತ್ತು ಗೊತ್ತಾ? ಇಷ್ಟು ಸಂಚಿಕೆಯಲ್ಲಿ ನಟ ದರ್ಶನ್ ಅವರ ಸಂಚಿಕೆಗೆ ಹೆಚ್ಚು ಟಿಆರ್‌ಪಿ ಬಂದಿತ್ತು ಎನ್ನಲಾಗಿದೆ.

ಈ ಬಗ್ಗೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು (ragavendra hunsur) ಅವರು ಸುದ್ಧಿಗೋಷ್ಟಿಯಲ್ಲಿ, ”ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ ಅತಿಹೆಚ್ಚು ಟಿ.ಆರ್.ಪಿ ಗಳಿಸಿರುವುದು ದರ್ಶನ್ ರವರ (darshan) ಎಪಿಸೋಡ್” ಎಂದು ಹೇಳಿದ್ದರು.
ಈ ವಿಡಿಯೋ ಸಖತ್ ವೈರಲ್ ಆಗಿ, ದರ್ಶನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

2016, ಜನವರಿ 30 ಹಾಗೂ 31ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ (challenging star darshan) ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು. ಮೊದಲು ಕಾರ್ಯಕ್ರಮಕ್ಕೆ ಬರಲು ಒಪ್ಪದ ದರ್ಶನ್ ನಂತರ ಒಂದು ಷರತ್ತಿನ ಮೇರೆಗೆ ಭಾಗವಹಿಸಿದ್ದರು. ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ಪಯಣದ ಕಥೆಯನ್ನು ಬಿಚ್ಚಿಟ್ಟಿದ್ದರು. ನೆಚ್ಚಿನ ನಟನ ಜೀವನದ ಬಗ್ಗೆ ತಿಳಿಯಲು ಅಭಿಮಾನಿಗಳು ಮುಗಿಬಿದ್ದಿದ್ದು ಸಂಚಿಕೆ ನೋಡಿದ್ದರು. ಹಾಗಾಗಿ ಟಿ.ಆರ್.ಪಿ ಹೆಚ್ಚು ಬಂದಿತ್ತು.

ಅಷ್ಟಕ್ಕೂ ದರ್ಶನ್ ಶೋ ನಲ್ಲಿ ಭಾಗವಹಿಸಲು ಹಾಕಿದ ಷರತ್ತು ಏನು ಗೊತ್ತಾ? ಎಲ್ಲರಿಗೂ ಗೊತ್ತಿರುವ ಹಾಗೆ ದರ್ಶನ್ ಯಾವುದೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದು ಕಡಿಮೆ. ಶೋ ಗಳಿಗೆ ಹೋಗಲು ನಿರಾಕರಿಸುತ್ತಾರೆ. ಅದೇ ರೀತಿ ರಿಯಾಲಿಟಿ ಶೋ ಹೋಸ್ಟ್ ಮಾಡುವ ಅವಕಾಶವನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ, WWR ಶೋ ನಲ್ಲಿ ಒಂದು ಷರತ್ತಿನ ಮೇರೆಗೆ ಭಾಗವಹಿಸಿದರು. ಯಾವ ಷರತ್ತು? ರೈತರ ಸರಣಿ ಆತ್ಮಹತ್ಯೆಯಿಂದ ನೊಂದಿದ್ದ ದರ್ಶನ್, “ಯಾವುದೇ ರಿಯಾಲಿಟಿ ಶೋ ಇರಲಿ, ಅದರಿಂದ ಒಂದು ಲಕ್ಷ ರೂಪಾಯಿಯನ್ನು ರೈತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡುವುದಾದರೆ, ಮಾತ್ರ ನಾನು ರಿಯಾಲಿಟಿ ಶೋನಲ್ಲಿ ಭಾಗವಹಿಸಲು ಸಿದ್ದ”ಎಂದು ಹೇಳಿದ್ದರಂತೆ. ಈ ಷರತ್ತಿಗೆ ಒಪ್ಪಿ ಜೀ ಕನ್ನಡ ವಾಹಿನಿ ದರ್ಶನ್ ಅವರನ್ನು ಕರೆತಂದಿತ್ತು.

ಅಂತೆಯೇ ‘ವೀಕೆಂಡ್ ವಿತ್ ರಮೇಶ್’ ಶೋನಿಂದ ಬಂದ ಗೌರವಧನವನ್ನು ಮೃತ ರೈತರ (died former) ಕುಟುಂಬಕ್ಕೆ ನೀಡಿದ್ದರು. “ನಟ ದರ್ಶನ್ ಹಾಗೂ ಪುನೀತ್ ರಾಜ್ ಕಮಾರ್ (puneeth Rajkumar) ಅವರು ತಮ್ಮ ಗೌರವಧನದ ಹಣವನ್ನು ಮೃತ ರೈತ ಕುಟುಂಬಗಳಿಗೆ ಹಾಗೂ ಮೈಸೂರಿನ ಶಕ್ತಿಧಾಮಕ್ಕೆ ನೀಡಿದ್ದಾರೆ” ಎಂದು ರಾಘವೇಂದ್ರ ಹುಣಸೂರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

 

ಇದನ್ನು ಓದಿ : Byjus Recruitment: ಬ್ಯುಸಿನೆಸ್ ಡೆವಲಪ್ಮೆಂಟ್ ಅಸೋಸಿಯೇಟ್‌ ಹುದ್ದೆಗೆ ಅರ್ಜಿ ಆಹ್ವಾನ!! ಭರ್ಜರಿ 8 ಲಕ್ಷ ಸಂಬಳ : ಇಂದೇ ಅಪ್ಲೈ ಮಾಡಿ! 

Leave A Reply

Your email address will not be published.