KPSC Karnataka Co Operative Department Job : ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು 100 ಹುದ್ದೆಗಳಿಗೆ ಅರ್ಜಿ ಆಹ್ವಾನ!

KPSC Recruitment 2023 notification : ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕರು 100 ಹುದ್ದೆಗಳ ಭರ್ತಿ ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಇಲ್ಲಿದೆ. ಕರ್ನಾಟಕ ಲೋಕಸೇವಾ ಆಯೋಗವು (KPSC Recruitment 2023 notification) ಕರ್ನಾಟಕ ಸಹಕಾರ ಇಲಾಖೆಯಲ್ಲಿನ ಗ್ರೂಪ್‌ ʼಸಿʼ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಸಹಕಾರ ಇಲಾಖೆಯ 100 ʼಸಹಕಾರ ಸಂಘಗಳ ನಿರೀಕ್ಷಕರʼ ( Co-Operative Inspectors-CI) ಹುದ್ದೆಗಳ ಭರ್ತಿ ನಡೆಯಲಿದೆ.

ಅರ್ಜಿ ಸಲ್ಲಿಕೆ ಸಲ್ಲಿಸಬೇಕಾದ ಆರಂಭಿಕ ದಿನಾಂಕ ಮಾರ್ಚ್‌ 30ರಿಂದ ಪ್ರಾರಂಭವಾಗಿದೆ. ಎಪ್ರಿಲ್‌ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಅರ್ಜಿ ನಮೂನೆಯಲ್ಲಿ ಕರ್ನಾಟಕ ಉಳಿಕೆ ಮೂಲಕ ವೃಂದದ 47 ಹುದ್ದೆಗಳು, ಕರ್ನಾಟಕ ವೃಂದದ 53 ಹುದ್ದೆಗಳು ಸೇರಿ ಒಟ್ಟು 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಎರಡಕ್ಕೂ ಪ್ರತ್ಯೇಕ ಅಧಿಸೂಚನೆ ನೀಡಲಾಗಿದೆ.

ವಿದ್ಯಾರ್ಹತೆ :ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಿ.ಎಸ್ಸಿ (ಕೃಷಿ), ಬಿ.ಎಸ್ಸಿ (ಮಾರ್ಕೆಟಿಂಗ್), ಬಿ.ಎಸ್ಸಿ ಕೋಆಪ್‌ರೇಟಿವ್, ಬಿ.ಕಾಂ, ಬಿಬಿಎ/ಬಿಬಿಎಂ ಪದವಿಗಳಲ್ಲಿ ಯಾವುದಾದರೂ ಒಂದನ್ನು ಬೇಸಿಕ್ ವಿದ್ಯಾರ್ಹತೆಯಾಗಿ ಹೊಂದಿರಬೇಕು.

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗರಿಷ್ಠ 752 ಸಾವಿರದವರೆಗೆ ವೇತನ ಶ್ರೇಣಿ ಇದೆ. ಸರ್ಕಾರ ಕಾಲಕಾಲಕ್ಕೆ ನೀಡುವ ಇತರೆ ಭತ್ಯೆಗಳು ಸೇರುತ್ತವೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸಂದರ್ಶನ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ಪದವಿ ಮಟ್ಟದ ಪಠ್ಯಮಗಳನ್ನು ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗಿರುತ್ತದೆ. ದಕ್ಕೂ ಮುನ್ನ ಅಭ್ಯರ್ಥಿಗಳು ಕನ್ನಡ ಕಡ್ಡಾಯ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಈಗಾಗಲೇ ಕೆಪಿಎಸ್‌ಸಿಯ ಕನ್ನಡ ಕಡ್ಡಾಯ ಪರೀಕ್ಷೆ ಪಾಸಾದವರು ಮತ್ತೆ ಇದನ್ನು ಬರೆಯುವ ಅಗತ್ಯ ಇಲ್ಲ.

ಸ್ಪರ್ಧಾತ್ಮಕ ಪರೀಕ್ಷೆಗೆ ಎರಡು ಪತ್ರಿಕೆಗಳಿರುತ್ತವೆ. ಪ್ರತಿ ಪತ್ರಿಕೆಯಲ್ಲಿ 100 ಅಂಕಗಳ 100 ಬಹು ಆಯ್ಕೆಯ ಪ್ರಶ್ನೆಗಳಿರುತ್ತವೆ. ಮೊದಲ ಪತ್ರಿಕೆಗೆ ಒಂದೂವರೆ ಗಂಟೆ, ಎರಡನೇ ಪತ್ರಿಕೆ 2 ಗಂಟೆ ಸಮಯ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿ-600ರೂ.
2ಎ,2 ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ರೂ. 300
ಮಾಜಿ ಸೈನಿಕ ಅಭ್ಯರ್ಥಿಗಳಿಗೆ 500ರೂ.
ಎಸ್‌ಸಿ, ಎಸ್‌ಟಿ, ಅಂಗವಿಕಲ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ವಯೋಮಿತಿ : ಅಭ್ಯರ್ಥಿಗಳ ವಯಸ್ಸು ಕನಿಷ್ಠ ವರ್ಷ- ಗರಿಷ್ಠ 35 ವರ್ಷಗಳು.
2ಎ, 2ಬಿ 3ಎ, 3ಬಿ ವರ್ಗದ ಅಭ್ಯರ್ಥಿಗಳಿಗೆ 38 ವರ್ಷ
ಎಸ್‌ಸಿ, ಎಸ್‌ಟಿ, ಅಂಗವಿಕಲ
ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷದವರೆಗೆ ವಯೋಮಿತಿ ವಿಸ್ತರಿಸಲಾಗಿದೆ.

ಸಹಕಾರಿ ಸಂಘಗಳ ನಿರೀಕ್ಷಕರ ಹುದ್ದೆಗಳ ವರ್ಗೀಕರಣ ಹಾಗೂ ವಿವರವಾದ ಅಧಿಸೂಚನೆ ಪರಿಶೀಲನೆ ಹಾಗೂ ಅರ್ಜಿ ಸಲ್ಲಿಸಲು Www.kpsc.kar.nic.in ಗೆ ಭೇಟಿ ನೀಡಿ.

 

ಇದನ್ನು ಓದಿ : Vinod Raj Secret Marriage : ವಿನೋದ್‌ ರಾಜ್‌ ಸೀಕ್ರೇಟ್‌ ಮದುವೆ ಬಗ್ಗೆ ತಾಯಿ ಲೀಲಾವತಿ ನೀಡಿದ್ರು ಶಾಕಿಂಗ್‌ ಮಾಹಿತಿ! ಏನಂದ್ರು ಗೊತ್ತಾ? 

Leave A Reply

Your email address will not be published.