KAPL Recruitment 2023 : ಡಿಗ್ರಿ ಪಾಸಾದವರಿಗೆ ಅದ್ಭುತ ಅವಕಾಶ! ಈ ಕೆಲಸಕ್ಕೆ ಅರ್ಜಿ ಸಲ್ಲಿಸಿ ತಿಂಗಳಿಗೆ ರೂ.65ಸಾವಿರ ಸಂಬಳ ಪಡೆಯಿರಿ!

KAPL Recruitment 2023 : ಉದ್ಯೋಗಾಂಕ್ಷಿಗಳಿಗೆ ಬಹು ಮುಖ್ಯ ಮಾಹಿತಿ ಇಲ್ಲಿದೆ. ಡಿಗ್ರಿ ಮುಗಿಸಿ ಕೆಲಸದ ಹುಡುಕಾಟ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಈ ಮಾಹಿತಿ ಪ್ರಯೋಜನವಾಗಬಹುದು. ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (Karnataka Antibiotics & Pharmaceuticals Limited ) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆಯುಷ್ ಸೇವಾ ಪ್ರತಿನಿಧಿಗಳು ಏರಿಯಾ ಮ್ಯಾನೇಜರ್‌ಗಳ ಪೋಸ್ಟ್‌ಗಳನ್ನು(KAPL Recruitment 2023) ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸಬಹುದು.

 

ತಮಿಳುನಾಡು – ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹುದ್ದೆ ಖಾಲಿ ಇದ್ದು, ಆಸಕ್ತರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಸಕ್ತರು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತ ಮಾಹಿತಿ ತಿಳಿದಿರುವುದು ಅವಶ್ಯಕ.

ಪೋಸ್ಟ್ ಹೆಸರು: ಆಯುಷ್ ಸೇವಾ ಪ್ರತಿನಿಧಿಗಳು, ಏರಿಯಾ ಮ್ಯಾನೇಜರ್‌
ಸಂಸ್ಥೆಯ ಹೆಸರು – ಕರ್ನಾಟಕ ಆಂಟಿಬಯೋಟಿಕ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ( KAPL )
ಪೋಸ್ಟ್‌ಗಳ ಸಂಖ್ಯೆ – 25
ಉದ್ಯೋಗ ಸ್ಥಳ – ಆಂಧ್ರ ಪ್ರದೇಶ – ತೆಲಂಗಾಣ – ತಮಿಳುನಾಡು – ಕರ್ನಾಟಕ
ವೇತನ ರೂ. – 26000-65000/- ಪ್ರತಿ ತಿಂಗಳು

ಯಾವ ರಾಜ್ಯದಲ್ಲಿ ಎಷ್ಟು ಹುದ್ದೆ?
ಆಂಧ್ರಪ್ರದೇಶ – 6
ತೆಲಂಗಾಣ- 6
ತಮಿಳುನಾಡು – 12
ಕರ್ನಾಟಕ- 1

ದಿನಾಂಕಗಳು
09-04-2023 ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನವಾಗಿದ್ದು,15-04-2023 ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಖಾಲಿ ಹುದ್ದೆಗಳು
ಆಯುಷ್ ಸೇವಾ ಪ್ರತಿನಿಧಿಗಳು- 20
ಆಯುಷ್ ಏರಿಯಾ ವ್ಯವಸ್ಥಾಪಕರು- 4
ಆಯುಷ್ ರೀಜನಲ್ ಸೇಲ್ಸ್ ಮ್ಯಾನೇಜರ್ – 1

ಅರ್ಜಿ ಹಾಕುವುದು ಹೇಗೆ?
ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳನ್ನು ಕೆಳಗೆ ನೀಡಿದ ಕಳುಹಿಸಬೇಕು.ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪದವಿ ಆಗಿರಬೇಕು.

ವಿಳಾಸ:
ಡೆಪ್ಯುಟಿ ಜನರಲ್ ಮ್ಯಾನೇಜರ್ – HRD, KAPL ಹೌಸ್, ಪ್ಲಾಟ್ ಸಂಖ್ಯೆ 37, ARKA ವ್ಯಾಪಾರ ಕೇಂದ್ರ, 2 ನೇ ಹಂತ, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ, ಬೆಂಗಳೂರು ಇಲ್ಲಿಗೆ ಕಳುಹಿಸಬೇಕು.

ವಯೋಮಿತಿ
ಆಯುಷ್ ಸೇವಾ ಪ್ರತಿನಿಧಿಗಳ ವಯೋಮಿತಿ 30ವರ್ಷಗಳಾಗಿದ್ದು, ಆಯುಷ್ ಏರಿಯಾ ವ್ಯವಸ್ಥಾಪಕ ಹುದ್ದೆಗೆ ವಯೋಮಿತಿ 35 ವರ್ಷವಾಗಿದೆ. ಆಯುಷ್ ರೀಜನಲ್ ಸೇಲ್ಸ್ ಮ್ಯಾನೇಜರ್ ಹುದ್ದೆಗೆ 40 ವರ್ಷವಾಗಿದೆ.

ವಯೋಮಿತಿ ಸಡಿಲಿಕೆ:
OBC ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಿಲಿಕೆ ಇರಲಿದ್ದು, SC/ST ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ.

ವೇತನ:
ಆಯುಷ್ ಸೇವಾ ಪ್ರತಿನಿಧಿಗಳು ಹುದ್ದೆಗೆ ವೇತನ ಮಾಸಿಕ ರೂ.26000/- ಇರಲಿದೆ.
ಆಯುಷ್ ಏರಿಯಾ ವ್ಯವಸ್ಥಾಪಕರು ಹುದ್ದೆಗೆ ವೇತನ ಮಾಸಿಕ ವಾಗಿ ರೂ.45000/- ಇರಲಿದೆ.
ಆಯುಷ್ ರೀಜನಲ್ ಸೇಲ್ಸ್ ಮ್ಯಾನೇಜರ್ ಹುದ್ದೆಗೆ ವೇತನ ಮಾಸಿಕವಾಗಿ ರೂ.65000/- ಆಗಿರಲಿದೆ.

ಆಯ್ಕೆ ಪ್ರಕ್ರಿಯೆ :
ಆಯ್ಕೆಯಾದ ಅಭ್ಯರ್ಥಿಗಳನ್ನ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನದ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ.

 

ಇದನ್ನು ಓದಿ : Benefits of Scheme: ನಿಮ್ಮ ಮಗಳ ಉಜ್ವಲ ಭವಿಷ್ಯಕ್ಕಾಗಿ ಈ ಯೋಜನೆ ಹೂಡಿಕೆ ಮಾಡಿ! ಸಿಗುತ್ತೆ ಬಂಪರ್ ಲಾಭ! 

Leave A Reply

Your email address will not be published.