8th Pay Commission : ಡಿಎ ಮಾತ್ರವಲ್ಲದೇ ಈ ಭತ್ಯೆಯಲ್ಲಿ ಭಾರೀ ಹೆಚ್ಚಳ! ಸರಕಾರಿ ನೌಕರರ ವೇತನ ದುಪ್ಪಟ್ಟು !

8th Pay Commission update : ಕೇಂದ್ರ ನೌಕರರು ಮತ್ತು ಪಿಂಚಣಿದಾರಿಗೆ ಸರಕಾರದ ವತಿಯಿಂದ ಸಿಹಿ ಸುದ್ದಿಯೊಂದು(Good News) ಅತಿ ಶೀಘ್ರದಲ್ಲಿಯೆ ಬರಲಿದೆ. ಡಿಎ ಮಾತ್ರವಲ್ಲದೇ ಭತ್ಯೆಯಲ್ಲಿ ಕೂಡ ಭಾರೀ ಹೆಚ್ಚಳವಾಗಲಿದ್ದು, ಸರಕಾರಿ ನೌಕರರ ವೇತನ ದುಪ್ಪಟ್ಟು ಆಗುವ ಸಾಧ್ಯತೆ ದಟ್ಟವಾಗಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಜುಲೈ 2023 ರಲ್ಲಿ, ಕೇಂದ್ರ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆಯಲ್ಲಿ ಏರಿಕೆಯಾಗಲಿದೆ. ಇದರ ಜೊತೆಗೆ ಪ್ರಯಾಣ ಭತ್ಯೆ (TA) ಕೂಡಾ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ಜುಲೈ ತಿಂಗಳಲ್ಲಿ ಹೆಚ್ಚಳವಾಗುವ ತುಟ್ಟಿ ಭತ್ಯೆಯನ್ನು ಅಕ್ಟೋಬರ್ ತಿಂಗಳ ವೇತನದಲ್ಲಿ ನೀಡುವ ಸಾಧ್ಯತೆ ದಟ್ಟವಾಗಿದೆ. 3 ತಿಂಗಳ ಡಿಎ ಬಾಕಿಯೊಂದಿಗೆ ವೇತನ ನೀಡಲಾಗುತ್ತದೆ. ಇದರೊಂದಿಗೆ ಜುಲೈ 2023ರ ನಂತರ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಲಿದೆ.

ಬೆಲೆ ಏರಿಕೆಯನ್ನು ಸಮತೋಲನ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central Government) ತನ್ನ ಉದ್ಯೋಗಿಗಳಿಗೆ (Central Government Employees) ಮತ್ತು ಪಿಂಚಣಿದಾರರಿಗೆ ಡಿಎ ನೀಡುತ್ತದೆ. ಕೇಂದ್ರ ಸರ್ಕಾರವು ತನ್ನ ಸರ್ಕಾರಿ ಉದ್ಯೋಗಿಗಳ(Central Govt Employees) ತುಟ್ಟಿಭತ್ಯೆಯನ್ನು (DA) ಶೇ.4 ರಷ್ಟು 2023ರ ಮಾರ್ಚ್‌ನಲ್ಲಿ ಹೆಚ್ಚಳ ಮಾಡಿದ್ದು, ನೌಕರರು (Government Workers) ತಮ್ಮ ಮೂಲ ವೇತನದ ಮೇಲೆ 4 ಪ್ರತಿಶತ ಡಿಎ ಪಡೆಯಬಹುದಾಗಿದೆ. ಈ ಹೆಚ್ಚಳ ಜನವರಿಯಿಂದಲೇ ಅನ್ವಯವಾಗಲಿದ್ದು, ಇನ್ನು ಜುಲೈಯಲ್ಲಿ ಕೂಡಾ ಶೇಕಡಾ 4 ರಷ್ಟೇ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಜುಲೈನಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ ಮಾತ್ರವಲ್ಲದೆ ಪ್ರಯಾಣ ಭತ್ಯೆ ಮತ್ತು ನಗರ ಭತ್ಯೆಯಲ್ಲಿ ಕೂಡ ಹೆಚ್ಚಳ ವಾಗಲಿದೆ. ಡಿಎ ಹೆಚ್ಚಳದಿಂದಾಗಿ ಪಿಂಚಣಿ ಪ್ರಯೋಜನಗಳು(8th Pay Commission update ), ಭವಿಷ್ಯ ನಿಧಿ ಮತ್ತು ಗ್ರಾಚ್ಯುಟಿಯಲ್ಲಿ (Gratuity)ದೊಡ್ಡ ಮಟ್ಟದ ಏರಿಕೆ ಕಂಡುಬರಲಿದೆ ಎನ್ನಲಾಗುತ್ತಿದೆ. ಅಕ್ಟೋಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಿಸುವ ಸಾಧ್ಯತೆಯಿದ್ದು, ಇದು ಜುಲೈನಿಂದ ಅನ್ವಯವಾಗಲಿದೆ. ಹೀಗಾಗಿ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಾಕಿಯೂ (ಡಿಎ ಬಾಕಿ) ನೌಕರರಿಗೆ ಲಭ್ಯವಾಗಲಿದ್ದು, ಈ ಮೂಲಕ ನೌಕರರ ಖಾತೆಗೆ ಭಾರೀ ದೊಡ್ಡ ಮೊತ್ತ ಜಮೆ ಆಗಲಿದೆ. ಮುಂದಿನ ದಿನಗಳಲ್ಲಿ, ಸಿಪಿಐ-ಐಡಬ್ಲ್ಯೂ ಸೂಚ್ಯಂಕ ಸಂಖ್ಯೆಗಳ ಆಧಾರದ ಅನುಸಾರ ಡಿಎ ಎಷ್ಟು ಹೆಚ್ಚಳವಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಜನವರಿ 2023 ರಿಂದ ಜೂನ್ 2023 ರವರೆಗಿನ ಅಂಕಿಅಂಶಗಳ ಆಧಾರದ ಮೇಲೆ ತುಟ್ಟಿ ಭತ್ಯೆಯನ್ನು ಏರಿಕೆ ಮಾಡಲಾಗುತ್ತದೆ.

 

ಇದನ್ನು ಓದಿ : Most Criminal Countries Ranking : ವಿಶ್ವದ ಅತ್ಯಂತ ‘ಅಪರಾಧ ದೇಶ’ ಗಳ ಪಟ್ಟಿ ಬಿಡುಗಡೆ! ಭಾರತಕ್ಕೆ ಸಿಕ್ಕ ಸ್ಥಾನ ಎಷ್ಟು?

Leave A Reply

Your email address will not be published.