Election Nomination : ವಿಧಾನಸಭೆ ಚುನಾವಣೆ! ನಾಳೆಯೇ( ಎ.13) ನಾಮಪತ್ರ ಸಲ್ಲಿಕೆ ಆರಂಭ!

Election Nomination :ಕರ್ನಾಟಕ ವಿಧಾನಸಭೆಯಲ್ಲಿ ಚುನಾವಣೆಯ (election) ಸಿದ್ಧತೆ ಭರದಿಂದ ಸಾಗುತ್ತಿದ್ದು, ಬರುವ ಮೇ ತಿಂಗಳಿನಲ್ಲಿ ನಡೆಯಬೇಕಾಗಿರುವ ಚುನಾವಣೆಯಲ್ಲಿ ಜನರ ಆಯ್ಕೆ ಯ ಪಾತ್ರವು ಪ್ರಮುಖವಾಗಿದೆ.

ಸದ್ಯ ರಾಜ್ಯ ವಿಧಾನಸಭೆ ಚುನಾವಣೆಗೆ ನಾಳೆ ಅಧಿಸೂಚನೆ (Election Nomination)ಪ್ರಕಟವಾಗಲಿದ್ದು, ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಏ 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಏಪ್ರಿಲ್ 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನವು ಮೇ 10ರಂದು ನಡೆಯಲಿದ್ದು, ಮೇ 13ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಮುಖ್ಯವಾಗಿ ಏಪ್ರಿಲ್ 13ಕ್ಕೆ ಅಂದರೆ ನಾಳೆ ಅಧಿಸೂಚನೆ ಪ್ರಕಟವಾಗಲಿದೆ.

ಒಟ್ಟಿನಲ್ಲಿ ಚುನಾವಣಾ ಆಯೋಗದಿಂದ ಪಾರದರ್ಶಕ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 2.63 ಕೋಟಿ ಪುರುಷರು, 2.60 ಮಹಿಳಾ ಮತದಾರರು ಸೇರಿ 5.24 ಕೋಟಿ ಮತದಾರರಿದ್ದಾರೆ.

ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ನಾಳೆ ಅಧಿಸೂಚನೆ ಪ್ರಕಟಿಸುವುದರೊಂದಿಗೆ ವಿಧಾನಸಭೆ ಚುನಾವಣೆ ರಂಗೇರಲಿದೆ.

ಸದ್ಯ ಸರ್ವ ಪಕ್ಷಗಳೂ ಭರದಿಂದಲೇ ಅಖಾಡಕ್ಕೆ ಇಳಿದಿವೆ. ಈ ಮಧ್ಯೆ ಈ ಬಾರಿ ರಾಜ್ಯದ ಪೀಠ ಏರಲಿರುವ ಪಕ್ಷ ಯಾವುದು ಎನ್ನುವ ಕುತೂಹಲ ಮತದಾರಲ್ಲೂ ಇದೆ.

 

ಇದನ್ನು ಓದಿ : Vastu Tips : ಮನೆಯ ಮುಖ್ಯ ದ್ವಾರವು ಪಶ್ಚಿಮ ಭಾಗದಲ್ಲಿದೆಯೇ? ಆದರೆ ಈ ವಾಸ್ತು ಸಲಹೆಗಳನ್ನು ಅನುಸರಿಸಿ

Leave A Reply

Your email address will not be published.