Chikkanna: ಕಾಮಿಡಿ ಸ್ಟಾರ್ ಚಿಕ್ಕಣ್ಣ ಓದಿರೋದು ಎಷ್ಟನೇ ಕ್ಲಾಸ್‌ ಗೊತ್ತೇ?ಸ್ಕೂಲ್‌ ಯಾಕೆ ಮತ್ತೆ ಹೋಗಿಲ್ಲ ಚಿಕ್ಕಣ್ಣ?

Chikkanna : ಚಿಕ್ಕಣ್ಣ(Chikkanna) ನಟನೆಯ ಜೊತೆಗೆ ಹಾಸ್ಯ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆಯ ಸಂದರ್ಭ ಯಶ್ ಕಣ್ಣಿಗೆ ಬಿದ್ದ ಚಿಕ್ಕಣ್ಣ ಅವರ ಬದುಕಿನ ಶೈಲಿಯೇ ಬದಲಾಗುತ್ತದೆ ಎಂದು ಅವರು ಕೂಡ ಊಹಿಸಿರಲಿಕ್ಕಿಲ್ಲ. ಆ ಬಳಿಕ ಚಿಕ್ಕಣ್ಣ ಯಶ್‌ ನಟನೆಯ `ಕಿರಾತಕ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹಾಸ್ಯನಟನಾಗಿ ಪಾದಾರ್ಪಣೆ ಮಾಡಿದರು. ಆ ಬಳಿಕ ತೆರೆಕಂಡ `ರಾಜಾ ಹುಲಿ’,`ಅಧ್ಯಕ್ಷ’ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಹಾಸ್ಯ ಕಲಾವಿದನಾಗಿ, ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರರಾಗಿಯು ಖ್ಯಾತಿ ಪಡೆದಿದ್ದಾರೆ.

 

ಖ್ಯಾತ ಕಾಮಿಡಿ ಕಲಾವಿದ ಆಗಿರುವಂತಹ ಚಿಕ್ಕಣ್ಣ ಅವರು ನಡೆದು ಬಂದ ಹಾದಿಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಕಡುಬಡತನದ ಕುಟುಂಬದಿಂದ ಬಂದು ಚಿತ್ರರಂಗದಲ್ಲಿ ಬಹು ಬೇಡಿಕೆಯ ಕಾಮಿಡಿ ಕಲಾವಿದನಾಗಿ ಬೆಳೆದು ಬಂದ ಹಾದಿಯು ಸುಲಭವಾಗಿರಲಿಲ್ಲ. ಚಿಕ್ಕಣ್ಣ ನಡೆದು ಬಂದ ಹಾದಿಯು ಉಳಿದವರಿಗೆ ಸ್ಪೂರ್ತಿಯಾಗಿದೆ. ಝೀ ಕನ್ನಡದ ವೀಕೆಂಡ್ ವಿತ್ ರಮೇಶ್ (Weekend With Ramesh Season 4) ಕಾರ್ಯಕ್ರಮದಲ್ಲಿ ತಾವು ನಡೆದು ಬಂದ ಹಾದಿಯ ಬಗ್ಗೆ ಮಾತನಾಡಿರುವ (Actor Chikkanna) ಒಂದು ಕಾಲದಲ್ಲಿ ಗಾರಿ ಕೆಲಸವನ್ನು ಮಾಡುತ್ತಿದ್ದರಂತೆ. ಚಿಕ್ಕಣ್ಣ ಅವರು 10ನೇ ತರಗತಿ(SSLC) ಮುಗಿಸಿ ಪಿಯುಸಿಗೆ ಕಾಲಿಟ್ಟ ಕೆಲವೇ ತಿಂಗಳುಗಳಲ್ಲಿ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ ಬಿಟ್ಟರಂತೆ.

ಒಂದೆಡೆ ತಾನು ಪಿಯುಸಿ ಓದುತ್ತಿರುವಂತೆ ಮತ್ತೊಂದೆಡೆ ಅವರ ತಾಯಿ ಹಾಗೂ ಅಕ್ಕ ಇಬ್ಬರೂ ಜೀವನ ನಿರ್ವಹಣೆಗೆ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನು ಕಂಡು ಮನೆಯ ಗಂಡು ಮಗನಾಗಿ ನಾನು ವಿದ್ಯಾಭ್ಯಾಸವನ್ನು ಮಾಡಿ ಅಕ್ಕ ಹಾಗೂ ಸಹೋದರಿ ಇಬ್ಬರು ಕೂಡ ಕೆಲಸ ಮಾಡುತ್ತಿರುವುದು ಯಾಕೋ ಸರಿಯಲ್ಲ ಎಂದೆನಿಸಿ ಚಿಕ್ಕಣ್ಣ ಓದಿಗೆ ತಿಲಾಂಜಲಿ ಹೇಳಿ, ಕೆಲಸಕ್ಕೆ ಸೇರಿದ ಕುರಿತಂತೆ ಚಿಕ್ಕಣ್ಣ ಅವರು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದರು. ಆ ಬಳಿಕ ಬಣ್ಣದ ಲೋಕದಲ್ಲಿ ನಟಿಸುವ ಅವಕಾಶ ದೊರೆತು ಅವಕಾಶಗಳ ಬಾಗಿಲು ತೆರೆದುಕೊಂಡು ಇಂದು ಎಲ್ಲರೂ ಗುರುತಿಸುವ ಮಟ್ಟಿಗೆ ಸಾಧನೆ ಮಾಡಿದ್ದಾರೆ.

Leave A Reply

Your email address will not be published.