Best Selling Seven Seater Car: ಅತೀ ಹೆಚ್ಚು ಮಾರಾಟವಾಗುತ್ತಿರುವ 7ಸೀಟರ್ ಕಾರು ಯಾವುದು ಗೊತ್ತಾ? ಇದರ ಬೆಲೆ ಕೇವಲ 5.26ಲಕ್ಷ!

Best Selling Seven Seater Car: ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು (Vechicles)ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ (EV)ಮುಖ ಮಾಡುತ್ತಿದ್ದಾರೆ. ಕೆಲ ಕಾರು ತಯಾರಿಕಾ ಕಂಪನಿಗಳು ಆಗಾಗ ಹೊಸ ಮಾದರಿಗಳನ್ನು ಪರಿಚಯಿಸಿ ಜನರ ಗಮನ ಸೆಳೆಯುವತ್ತ ಲಕ್ಷ್ಯ ವಹಿಸುತ್ತವೆ. ಆದರೆ ಕೆಲ ಬ್ರಾಂಡ್ ಗಳ ಕಾರುಗಳು ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡು ಬಿಟ್ಟಿವೆ. ಸದ್ಯ ಈ ಲಿಸ್ಟಲ್ಲಿ ಮಾರುತಿ ಸುಜುಕಿಯ Eeco ಕೂಡ ಸೇರಿಕೊಂಡಿದೆ.

ದೇಶದಲ್ಲಿ 7 ಸೀಟರ್ ಕಾರುಗಳ(Best Selling Seven Seater Car) ಬೇಡಿಕೆ ಹೆಚ್ಚಾಗುತ್ತಿದೆ. ಮಾರ್ಚ್ ತಿಂಗಳ ಕಾರುಗಳ ಮಾರಾಟದ ಅಂಕಿಅಂಶಗಳು ಹೊರಬಿದ್ದಿವೆ. ಸಾಮಾನ್ಯವಾಗಿ ಮಾರುತಿ ಎರ್ಟಿಗಾ(Maruti Suzuki Ertiga) ಮತ್ತು ಟೊಯೊಟಾ ಇನ್ನೋವಾ(TOYOTA INNOVA) ಅತ್ಯಂತ ಜನಪ್ರಿಯ 7 ಸೀಟರ್ MPV ಗಳೆಂದು ಪ್ರಖ್ಯಾತಿ ಪಡೆದಿದೆ.ಮಾರುತಿ ಸುಜುಕಿಯ Eeco(Maruti Suzuki Eeco) ವಿಶೇಷತೆ ಕಡೆ ಗಮನ ಹರಿಸಿದರೆ, ಮಾರುತಿ ಸುಜುಕಿಯ Eeco ವ್ಯಾನ್ ಇಂಧನ ದಕ್ಷತೆ ಉತ್ತಮವಾಗಿದೆ. 1.2-ಲೀಟರ್ ಪೆಟ್ರೋಲ್ ಹಾಗೂ CNG ಎಂಜಿನ್ ಆಯ್ಕೆಯನ್ನು ಒಳಗೊಂಡಿದೆ. ಇದರ ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗುತ್ತದೆ. ಮಾರುತಿ ಸುಜುಕಿಯ ಎಂಟ್ರಿ ಲೆವೆಲ್ ಎಂಪಿವಿಯಾಗಿರುವ Eeco, ಹೆಚ್ಚಿನ ಖರೀದಿದಾರರ ಆಯ್ಕೆಗಳಲ್ಲಿ ಒಂದಾಗಿದೆ.

ಮಾರುತಿ ಸುಜುಕಿ Eeco ಸುರಕ್ಷತೆ ದೃಷ್ಟಿಯಿಂದ ನೋಡಿದರೆ ಉತ್ತಮ ಆಯ್ಕೆಯಾಗಿದ್ದು, ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಸೀಟ್ ಬೆಲ್ಟ್ ರೆಮಿಂಡರ್, ಸ್ವೀಡ್ ಅಲರ್ಟ್, ರೇರ್ ಪಾರ್ಕಿಂಗ್ ಸೆನ್ಸರ್ಸ್ ಒಳಗೊಂಡಂತೆ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಮ್ಯಾನುವಲ್ AC ಮತ್ತು 12V ಚಾರ್ಜಿಂಗ್ ಸಾಕೆಟ್ ಅನ್ನು ಹೊಂದಿದೆ. ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇ, ಪರ್ಲ್ ಮಿಡ್ ನೈಟ್ ಬ್ಲ್ಯಾಕ್, ಮೆಟಾಲಿಕ್ ಬ್ರಿಸ್ಕ್ ಬ್ಲೂ, ಮೆಟಾಲಿಕ್ ಸಿಲ್ಕಿ ಸಿಲ್ವರ್ ಹಾಗೂ ಸಾಲಿಡ್ ವೈಟ್ ಬಣ್ಣಗಳನ್ನು ಒಳಗೊಂಡಿವೆ. 7 ಸೀಟರ್ ಕಾರಿನ ಬೆಲೆ ಕೇವಲ 5.26 ಲಕ್ಷ ರೂಪಾಯಿಗಳಾಗಿದ್ದು, ಉತ್ತಮ ಮೈಲೇಜ್ ಅನ್ನು ನೀಡುತ್ತದೆ.

ಮಾರ್ಚ್ 2023 ರಲ್ಲಿ, Eeco ಮಾರಾಟದಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೋಟಾ ಇನ್ನೋವಾವನ್ನು ಹಿಂದಿಕ್ಕಿದೆ. ಮಾರುತಿ ಸುಜುಕಿಯ 7 ಸೀಟರ್ Eecoವನ್ನು ಮಾರ್ಚ್ ತಿಂಗಳಿನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆ ಪಡೆದಿದೆ. ಮಾರುತಿ ಇಕೋ ಬೆಲೆ 5.26 ಲಕ್ಷದಿಂದ ಪ್ರಾರಂಭವಾಗಿ 6.53 ಲಕ್ಷದವರೆಗೆ ಏರಲಿದೆ. ಮಾರುತಿ ಕಂಪೆನಿ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದ್ದು, ಫೈವ್ ಸೀಟರ್ ಸ್ಟ್ಯಾಂಡರ್ಡ್ (0), ಫೈವ್ ಸೀಟರ್ AC (0), ಫೈವ್ ಸೀಟರ್ AC CNG (0) ಮತ್ತು ಸೆವೆನ್ ಸೀಟರ್ ಸ್ಟ್ಯಾಂಡರ್ಡ್ (0). ಇದು 1.2-ಲೀಟರ್ ಪೆಟ್ರೋಲ್ ಎಂಜಿನ್ನಿಂದ (81PS/ 104.4Nm) ಪವರ್ ಹೊಂದಿದೆ.

ಮಾರುತಿ ಸುಜುಕಿ ತನ್ನ ಮಾರ್ಚ್ 2023 ರ ಮಾರಾಟದ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ಅಂಕಿ ಅಂಶದ ಪ್ರಕಾರ Eecoದ 11,995 ಯೂನಿಟ್ ಗಳು ಮಾರಾಟವಾಗಿದೆ. ಎರ್ಟಿಗಾ 9,028 ಯುನಿಟ್ಗಳ ಮಾರಾಟದೊಂದಿಗೆ ಎರಡನೇ ಸ್ಥಾನವನ್ನು ಬಾಚಿಕೊಂಡಿದೆ. ಟೊಯೊಟಾ ಇನ್ನೋವಾ 8,075 ಯುನಿಟ್ಗಳ ಮಾರಾಟ ಅಂಕಿಅಂಶಗಳೊಂದಿಗೆ ನಂತರದ ಸ್ಥಾನವನ್ನು ಪಡೆದುಕೊಂಡಿದೆ.

 

ಇದನ್ನು ಓದಿ : IRCTC Tour Package : ಮೇ.4 ರಿಂದ ಐಆರ್‌ಸಿಟಿಸಿಯಿಂದ ಅಗ್ಗದ ಬೆಲೆಯ ತೀರ್ಥಯಾತ್ರೆ! 

Leave A Reply

Your email address will not be published.