Language controversy in Bengaluru : ಬೆಂಗಳೂರಲ್ಲಿ ನಿಲ್ಲದ ಭಾಷಾ ವಿವಾದ : ಕನ್ನಡ ಬರಲ್ಲ ಎಂದ ಚಾಲಕನೊಂದಿಗೆ ವಿಚಿತ್ರವಾಗಿ ವರ್ತಿಸಿದ ಟ್ರಾಫಿಕ್ ಪೊಲೀಸ್..!

Language controversy in Bengaluru : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾರು ಚಾಲಕನೋರ್ವ ಕನ್ನಡದಲ್ಲಿ (Language controversy in Bengaluru)  ಮಾತನಾಡದಿದ್ದಕ್ಕೆ ಟ್ರಾಫಿಕ್ ಪೊಲೀಸ್ ಒಬ್ಬರು ಚಾಲಕನ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.

 

ಕಾರು ಚಾಲಕ ವಿಕ್ರಮ್ ಅನ್ಸಾರಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಾರು ಪಾರ್ಕಿಂಗ್ ವಿಚಾರಕ್ಕೆ ಚಾಲಕ ಹಾಗೂ ಟ್ರಾಫಿಕ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ರಸ್ತೆ ಬದಿಯಲ್ಲಿ ವಿಕ್ರಮ್ ಅನ್ಸಾರಿ ಕಾರು ಪಾರ್ಕ್ ಮಾಡಿದ್ದು, ಈ ವೇಳೆ ಅಲ್ಲಿಗೆ ಬಂದ ಟ್ರಾಫಿಕ್ ಪೊಲೀಸ್ ಇಲ್ಲಿ ಎಲ್ಲಾ ಕಾರು ಪಾರ್ಕ್ ಮಾಡಬಾರದು, ಇದಕ್ಕೆ ನೀವು ಫೈನ್ ಕಟ್ಟಿ ಎಂದಿದ್ದಾರೆ, ಇದಕ್ಕೆ ವಿಕ್ರಮ್ ಅನ್ಸಾರಿ ಇಲ್ಲಿ ನೋ ಪಾರ್ಕಿಂಗ್ ಕೂಡ ಇಲ್ಲ, ನಾನು ದಂಡ ಕಟ್ಟಲ್ಲ ಎಂದಿದ್ದಾರೆ.

ಈ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಪೊಲೀಸ್ ಮೊದಲು ನೀನು ಕನ್ನಡದಲ್ಲಿ ಮಾತನಾಡು ಎಂದು ಗರಂ ಆಗಿದ್ದಾರೆ. ಹೀಗೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅವರು ನನಗೆ ದಂಡ ಹಾಕಿದರು ಎಂದು ವಿಕ್ರಮ್ ಅನ್ಸಾರಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನು ಓದಿ : Bigg Boss Divya Suresh : ಮತ್ತೆ ಪ್ರೀತಿಯ ಬಲೆಯಲ್ಲಿ ಬಿದ್ದ ದಿವ್ಯಾ ಸುರೇಶ್! ಯಾರೀತ? 

Leave A Reply

Your email address will not be published.