Vivo X90: ಮಾರುಕಟ್ಟೆಯಲ್ಲಿ ಬೆಸ್ಟ್ ಕ್ಯಾಮೆರಾ ಸೆಟಪ್ ಜೊತೆಗೆ ಹವಾ ಸೃಷ್ಟಿ ಮಾಡಲು ಸಜ್ಜಾಗುತ್ತಿದೆ ಪ್ರೀಮಿಯಂ ವಿವೋ X90 ಫೋನ್!
Vivo X90 mobile : ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ (Smart Phone ) ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಇದೀಗ, ಚೀನಾ (China) ಮೂಲದ ವಿವೊ ಕಂಪನಿ(vivo Company)ಭಾರತದ ಮಾರುಕಟ್ಟೆಗೆ ಮತ್ತೊಂದು ಆಕರ್ಷಕ ಸ್ಮಾರ್ಟ್ಫೋನ್ ಅನ್ನು ಎಕ್ಸ್ ಸರಣಿಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ವಿವೊ X90( Vivo X90 mobile)ಮತ್ತು X90 ಪ್ರೊ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಸಿದ್ಧತೆ ನಡೆಸುತ್ತಿದೆ.
ಹೇಳಿ ಕೇಳಿ ಇದು ಡಿಜಿಟಲ್ ಯುಗ, ದಿನಂಪ್ರತಿ ಹೊಸ ಹೊಸ ವೈಶಿಷ್ಟ್ಯದ ಕ್ಯಾಮೆರಾ ವೈಶಿಷ್ಟ್ಯತೆಯನ್ನು ಒಳಗೊಂಡ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತಿದ್ದು, ಇವುಗಳಲ್ಲಿ ಯಾವುದನ್ನು ಖರೀದಿ ಮಾಡೋದು ಎಂಬ ಗೊಂದಲ ಮೂಡುವುದು ಸಹಜ. ಚೀನಾ ಮೂಲದ ವಿವೊ ಕಂಪನಿಯ ವಿವೊ X90( Vivo X90)ಮತ್ತು X90 ಪ್ರೊ ಸ್ಮಾರ್ಟ್ಫೋನ್ ಲಾಂಚ್ ಆಗಲಿದ್ದು, X90 ಮತ್ತು X90 ಪ್ರೊ Android 13 ಆಧಾರಿತ Funtouch OS 13 ಮೂಲಕ ಕಾರ್ಯನಿರ್ವಹಿಸಲಿದೆ.
Vivo ನ ಇತ್ತೀಚಿನ ಪ್ರಮುಖ ಮಾದರಿಗಳಾದ Vivo X90 ಮತ್ತು X90 Pro, ಈ ತಿಂಗಳ ಅಂತ್ಯದ ವೇಳೆಗೆ ಭಾರತಕ್ಕೆ ಕಾಲಿಡುವ ನಿರೀಕ್ಷೆಯಿದ್ದು, ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಚೀನಾ ಮತ್ತು ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಿದ್ದರೂ, Vivo ಅವುಗಳನ್ನು ಭಾರತದಲ್ಲಿ ಇನ್ನೂ ಬಿಡುಗಡೆ ಮಾಡಿಲ್ಲ. Vivo X90 ಮತ್ತು X90 Pro ಎರಡೂ 6.78-ಇಂಚಿನ AMOLED ಡಿಸ್ಪ್ಲೇ ಬಾಗಿದ ಅಂಚುಗಳೊಂದಿಗೆ, FHD+ ರೆಸಲ್ಯೂಶನ್ ಮತ್ತು 120 Hz ರಿಫ್ರೆಶ್ ರೇಟ್ ಬೆಂಬಲವನ್ನು ನೀಡಲಿದೆ. ಈ ಫೋನ್‌ಗಳು 8GB ಅಥವಾ 12GB LPDDR5 RAM ಮತ್ತು 128GB, 256GB ಅಥವಾ 512GB ಯ ಶೇಖರಣಾ ಆಯ್ಕೆಗಳೊಂದಿಗೆ ಹಲವಾರು ರೂಪಾಂತರಗಳಲ್ಲಿ ಬರಲಿವೆ.
6.78 ಇಂಚಿನ ಫುಲ್ HD+ AMOLED ಡಿಸ್ಪ್ಲೇ ಒಳಗೊಂಡಿದ್ದು, ವಿವೊ X90 ಫೋನ್ನಲ್ಲಿ 50+12+12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ ಹಾಗೂ ವಿವೊ X90 ಪ್ರೊ ಫೋನ್ನಲ್ಲಿ 50+50+12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾವನ್ನ ಹೊಂದಿದೆ. 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಕೂಡ ಇದೆ. MediaTek Dimensity 9200 ಪ್ರೊಸೆಸರ್ ಹೊಂದಿರುವ ವಿವೊ X90 ಮತ್ತು X90 ಪ್ರೊ ಫೋನ್ ಈಗಾಗಲೇ ಚೀನಾ, ಮಲೇಷ್ಯಾ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ.
ಕೆಲ ವರದಿಯ ಅನುಸಾರ, Vivo X90 ಮತ್ತು X90 Pro ಭಾರತದಲ್ಲಿ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ. ಚೀನಾದಲ್ಲಿ, X90 ಬೆಲೆ RMB 3,699 (ಅಂದಾಜು ರೂ 44,000), ಮತ್ತು X90 Pro ಬೆಲೆ RMB 4,999 (ಅಂದಾಜು ರೂ 60,000). ಹೊರಹೋಗುವ X80 ಈಗಾಗಲೇ ಚೀನಾದಲ್ಲಿ X90 ಗಿಂತ ಹೆಚ್ಚಿನ ಬೆಲೆಯನ್ನು ಹೊಂದಿರುವುದರಿಂದ ಭಾರತೀಯ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಆದಾಗ್ಯೂ, ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾದ ನಂತರವೇ ಅಧಿಕೃತ ಬೆಲೆ ತಿಳಿಯಲಿದೆ.
ಇದನ್ನು ಓದಿ : Amul and Nandini: ಅಮುಲ್ ವರ್ಸಸ್ ನಂದಿನಿ ವಿವಾದದ ಕುರಿತು ಅಮುಲ್ ಎಂಡಿ ಜಯೇನ್ ಮೆಹ್ತಾ ಪ್ರತಿಕ್ರಿಯೆ!