Actress Niharika Konidela : ಮೆಗಾ ಸ್ಟಾರ್’ ಚಿರಂಜೀವಿ ಸಹೋದರ ಮಗಳ ಸಂಸಾರದಲ್ಲಿ ಬಿರುಕು; ವಿಚ್ಛೇದನ ಪಡೆದುಕೊಳ್ಳುತ್ತಾರಾ ನಟಿ ನಿಹಾರಿಕಾ?

Actress Niharika getting divorced : ಇತ್ತೀಚಿನ ದಿನಗಳಲ್ಲಿ ಸಿನಿಮಾ ಸೆಲೆಬ್ರಿಟಿಗಳ ಬಾಳಲ್ಲಿ ಬಿರುಕು ಮೂಡುತ್ತಿದೆ. ಒಬ್ಬೊಬರ ಬಾಳಿನಲ್ಲಿ ಬಿರುಗಾಳಿ ಬೀಸುತ್ತಿದೆ. ಇದೀಗ ಸೈಲೆಂಟ್ ಆಗಿ ಟಾಲಿವುಡ್ ನಟಿ ಹಾಗೂ ನಿರ್ಮಾಪಕಿ ನಿಹಾರಿಕಾ ಕೊನಿಡೆಲಾ ವಿಚ್ಛೇದನಕ್ಕೆ (Actress Niharika getting divorced) ಮುಂದಾಗಿದ್ದಾರೆ ಎಂಬ ಪಿಸುಗುಸು ಎಲ್ಲೆಡೆ ಶುರುವಾಗಿದೆ. ಆದರೆ ಇದಕ್ಕೆ ಪುಷ್ಠಿ ನೀಡುವಂತೆ ಅನೇಕ ಘಟನೆಗಳು ಸಹ ನಡೆದಿದೆ. ಹೀಗಾಗಿ ‘ಮೆಗಾ ಸ್ಟಾರ್’ ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಅವರ ಪುತ್ರಿಯಾದ ನಿಹಾರಿಕಾ ಕೊನಿಡೆಲಾ ಬದುಕಿನಲ್ಲಿ ಬಿರುಕು ಮೂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ.

ಅವರು 2020ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಮೂರು ವರ್ಷಕ್ಕೆ ಅವರ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈ ಬಗ್ಗೆ ಯಾರೂ ಕೂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೂ ಸಹ ವಿಚ್ಛೇದನದ ಮಾತು ಕೇಳಿಬರುತ್ತಿದೆ. ಅದಕ್ಕೆ ಕಾರಣ ಆಗಿರುವುದು ನಿಹಾರಿಕಾ ಕೊನಿಡೆಲಾ ಅವರ ಸಾಮಾಜಿಕ ಜಾಲತಾಣಗಳಲ್ಲಿ. ಪತಿ ಜೊನ್ನಲಗಡ್ಡ ವೆಂಕಟ ಚೈತನ್ಯ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ನಿಹಾರಿಕಾ ಅನ್ಫಾಲೋ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಗಂಡನಿಗೆ ಸಂಬಂಧಿಸಿದ ಎಲ್ಲ ಫೋಟೋಗಳನ್ನೂ ಡಿಲೀಟ್ ಮಾಡಿದ್ದಾರೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂದು ಗಾಸಿಪ್ ಆಗುತ್ತಿದೆ.
ಅಂದಹಾಗೆ ನಿಹಾರಿಕಾ ಕೊನಿಡೆಲಾ ಮತ್ತು ವೆಂಕಟ ಚೈತನ್ಯ ನಡುವೆ ವೈಮನಸ್ಸು ಉಂಟಾಗಿದೆ. ಕೆಲ ದಿನಗಳ ಹಿಂದೆ ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್ಫಾಲೋ ಮಾಡಿದ್ದರು.
ಜೊತೆಗೆ ಮದುವೆ ಹಾಗೂ ಎಂಗೇಜ್ಮೆಂಟ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು.ಇಷ್ಟೆಲ್ಲ ಆದ್ರೂ ಕೂಡ ನಿಹಾರಿಕ ಮಾತ್ರ ಸುಮ್ಮನಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್ಫಾಲೋ ಮಾಡಿ, ಫೋಟೋಸ್ ತೆಗೆದುಹಾಕಿರುವುದು ಟಾಲಿವುಡ್ ಅಂಗಳದಲ್ಲಿ ಸಾಕಷ್ಟು ಅನುಮಾನ ಹುಟ್ಟುಹಾಕಿದೆ.
ಒಟ್ಟಾರೆಯಾಗಿ ಅವರು ಬಾಳಲ್ಲಿ ಬಿರುಕು ಮೂಡಿರುವುದು ನಿಜಾ. ಆದ್ರೆ ಯಾರು ಕೂಡ ಈ ಬಗ್ಗೆ ಹೇಳಿಕೊಂಡಿಲ್ಲ. ಇನ್ನೇನು ಈ ಕುರಿತು ಮಾಹಿತಿ ಹೊರಗೆ ಬೀಳುತ್ತೋ ..ಇಲ್ವೋ… ? ಎಂಬುದು ಕಾದುನೋಡಬೇಕಿದೆ.
ಇದನ್ನು ಓದಿ : Best Earphones : ಇಯರ್‌ಫೋನ್ ಖರೀದಿಸಲು ಇಚ್ಛಿಸುವವರಿಗೆ ಇಲ್ಲಿವೆ ಅತ್ಯುತ್ತಮ ಬೆಸ್ಟ್ ಆಯ್ಕೆಯ ಇಯರ್‌ಫೋನ್!