cow Urine : ಗೋಮೂತ್ರ ಮಾನವ ಬಳಕೆಗೆ ಒಳ್ಳೆಯದಲ್ಲ- ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆ IVRI !!!

Cow Urine : ಗೋಮೂತ್ರದ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ನಡೆದಿವೆ. ಅದಲ್ಲದೆ ಅಧ್ಯಯನ ಮೂಲಕ ಹಲವಾರು ಆರೋಗ್ಯ ಉಪಕಾರಿ ವಿಚಾರಗಳು ತಿಳಿದು ಬಂದಿದೆ. ಆದರೆ, ಮುಖ್ಯವಾಗಿ ಗೋಮೂತ್ರವು (Cow Urine) ಮಾನವನ ನೇರ ಸೇವನೆಗೆ ಸೂಕ್ತವಲ್ಲ ಏಕೆಂದರೆ ಇದು ಅಪಾಯಕಾರಿ ಬ್ಯಾಕ್ಟಿರಿಯಾವನ್ನು ಹೊಂದಿರಬಹುದು. ಎಂದು ದೇಶದ ಪ್ರಮುಖ ಪ್ರಾಣಿ ಸಂಶೋಧನಾ ಸಂಸ್ಥೆಯಾದ ಬರೇಲಿ ಮೂಲದ ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಐವಿಆರ್‌ಐ) ನಡೆಸಿದ ಸಂಶೋಧನೆಯ ಪ್ರಕಾರ ತಿಳಿಸಿದೆ.

ಸದ್ಯ ಇನ್‌ಸ್ಟಿಟ್ಯೂಟ್‌ನಲ್ಲಿ ಎಪಿಡೆಮಿಯಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಭೋಜ್ ಸಿಂಗ್ ಅವರು ತಮ್ಮ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳೊಂದಿಗೆ ಜೂನ್ 2022 ಮತ್ತು ನವೆಂಬರ್ 2022 ರ ನಡುವೆ ಸ್ಥಳೀಯ ಡೈರಿ ಫಾರ್ಮ್‌ಗಳಿಂದ ಮೂರು ರೀತಿಯ ಹಸುಗಳಾದ ಸಾಹಿವಾಲ್, ಥಾರ್ಪಾರ್ಕರ್ ಮತ್ತು ವಿಂದಾವನಿ (ಅಡ್ಡ ತಳಿ) ಮೇಲೆ ಸಂಶೋಧನೆ ನಡೆಸಿದ್ದಾರೆ .

ಬರೇಲಿ ಮೂಲದ ಐಸಿಎಆರ್-ಇಂಡಿಯನ್ ವೆಟರ್ನರಿ ರಿಸರ್ಚ್‌ ಇನ್‌ಸ್ಟಿಟ್ಯೂಟ್ (ಐವಿಆರ್‌ಐ) ಸಂಸ್ಥೆಯ ಭೋಜ್ ರಾಜ್ ಸಿಂಗ್ ನೇತೃತ್ವದಲ್ಲಿ ಮೂವರು ಪಿಎಚ್‌ಡಿ ವಿದ್ಯಾರ್ಥಿಗಳು ನಡೆಸಿದ ಅಧ್ಯಯನದಲ್ಲಿ ಆರೋಗ್ಯವಂತ ಹಸುಗಳು ಮತ್ತು ಎತ್ತುಗಳ ಮೂತ್ರದ ಮಾದರಿಗಳು ಕನಿಷ್ಠ 14 ರೀತಿಯ ಹಾನಿಕಾರಕ ಬ್ಯಾಕ್ಟಿರಿಯಾವನ್ನು ಹೊಂದಿದ್ದು, ಹೊಟ್ಟೆಯ ಸೋಂಕನ್ನು ಉಂಟುಮಾಡುವ ಎಸ್ಟೆರಿಚಿಯಾ ಕೋಲಿ ಉಪಸ್ಥಿತಿಯನ್ನು ಕಂಡು ಹಿಡಿದಿದೆ.

ಅದಲ್ಲದೆ ಎಮ್ಮೆಯ ಮೂತ್ರವು ಕೆಲವು ಬ್ಯಾಕ್ಟಿರಿಯಾಗಳ ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನವು ಕಂಡುಹಿಡಿದಿದೆ.

ಇನ್ನು ಪೀರ್- ರಿವ್ಯೂಡ್ ಸಂಶೋಧನೆಯ ಸಂಶೋಧನೆಗಳನ್ನು ಆನ್‌ಲೈನ್ ಸಂಶೋಧನಾ ವೆಬ್‌ಸೈಟ್ ರಿಸರ್ಚ್‌ಗೇಟ್‌ನಲ್ಲಿ ಪ್ರಕಟಿಸಲಾಗಿದ್ದು, ಹಸುಗಳು, ಎಮ್ಮೆಗಳು ಮತ್ತು ಮಾನವರ 73 ಮೂತ್ರದ ಮಾದರಿಗಳ ಅಂಕಿಅಂಶಗಳ ವಿಶ್ಲೇಷಣೆಯು ಎಮ್ಮೆಗಳ ಮೂತ್ರದಲ್ಲಿ ಬ್ಯಾಕ್ಟಿರಿಯಾದ ಚಟುವಟಿಕೆಯು ಹಸುಗಳಿಗಿಂತ ಹೆಚ್ಚು ಇದೇ ಎನ್ನಲಾಗಿದೆ. ಎಮ್ಮೆಯ ಮೂತ್ರವು ಎಸ್ ಎಪಿಡರ್ಮಿಡಿಸ್ ಮತ್ತು ಇ ರಾಪಾಂಟಿಸಿಯಂತಹ ಬ್ಯಾಕ್ಟಿರಿಯಾಗಳ ಮೇಲೆ ಗಮನಾರ್ಹವಾಗಿ ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನಲಾಗಿದೆ .

ಭೋಜ್ ರಾಜ್ ಸಿಂಗ್, ಅಧ್ಯಯನದ ನೇತೃತ್ವ ವಹಿಸಿದ್ದು, ಮುಖ್ಯವಾಗಿ ಮಾನವರು ಮತ್ತು ಎಮ್ಮೆಗಳ ಮಾದರಿಗಳನ್ನು ಸಹ ಅಧ್ಯಯನಕ್ಕಾಗಿ ಪರಿಗಣಿಸಲಾಗಿದೆ. ‘ಸ್ಪಷ್ಟವಾಗಿ ಆರೋಗ್ಯವಂತ ವ್ಯಕ್ತಿಗಳಿಂದ ಮೂತ್ರದ ಮಾದರಿಗಳ ಗಾತ್ರದ ಪ್ರಮಾಣವು ಸಂಭಾವ್ಯ ರೋಗಕಾರಕ ಬ್ಯಾಕ್ಟಿರಿಯಾವನ್ನು ಒಯ್ಯುತ್ತದೆ’ ಎಂದು ಅವರು ಗಮನಿಸಿದ್ದು, ಮಾಧ್ಯಮದ ಮೂಲಕ ಮಾಹಿತಿ ತಿಳಿಸಿದ್ದಾರೆ.

 

ಇದನ್ನು ಓದಿ : Labour Card Holders good news: ಲೇಬರ್ ಕಾರ್ಡ್ ಹೊಂದಿರುವವರಿಗೆ ವಾರ್ಷಿಕವಾಗಿ ದೊರಕುತ್ತೆ ರೂ. 6000 

Leave A Reply

Your email address will not be published.