Rinku Singh : ಕೆಕೆಆರ್ ಗೆ ಗೆಲುವಿಗೆ ಕಾರಣಕರ್ತ ರಿಂಕುವಿನ ಹಿನ್ನೆಲೆ ಏನು? ಇಲ್ಲಿದೆ ವಿವರ!

Rinku Singh: ಕೆಲವರಿಗೆ ಜೀವನದಲ್ಲಿ ಹಲವಾರು ಪ್ರತಿಭೆಗಳಿದ್ದರು ಅವರನ್ನು ಬಡತನ ಜೀವನದಲ್ಲಿ ಮುನ್ನುಗ್ಗಲು ಬಿಡುವುದಿಲ್ಲ. ಬಡತನದ ಜೀವನವನ್ನು(life) ಮುಂದಕ್ಕೆ ನೂಕುತ್ತಾ ಏಳು ಬೀಳುಗಳ ನಡುವೆಯೂ ಮೇಲೆ ಎದ್ದುಕೊಂಡು ಬಂದಂತಹ ಯುವ ಪ್ರತಿಭೆಗಳು ಅದೆಷ್ಟೋ ಜನ ಇದ್ದಾರೆ. ಬಡತನವನ್ನು ಹೋಗಲಾಡಿಸಲು ಅನೇಕ ಜನರು ಬೇರೆ ಬೇರೆ ಕೆಲಸಗಳನ್ನು ಮಾಡಿ ತನ್ನನ್ನು ತಾನು ಗುರುತಿಸಿಕೊಳ್ಳುವ ಮಟ್ಟಕ್ಕೆ ಬರುತ್ತಾರೆ. ಅದೇ ರೀತಿ ಕ್ರಿಕೆಟ್‌ನ (cricket) ದುಬಾರಿ ಲೀಗ್‌ನಲ್ಲಿ ನೂರಾರು ಪ್ರತಿಭೆಗಳು ಹುಟ್ಟಿ ಬೆಳೆದಿದ್ದಾರೆ. ಅವರು ಬಡವರಾಗಿರಬಹುದು ಅಥವಾ ಶ್ರೀಮಂತರಾಗಿರಬಹುದು ಯಾರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಆಸಕ್ತಿ ಇರುವವರನ್ನು ಪಂದ್ಯದಲ್ಲಿ ಸೇರಿಸಿಕೊಂಡು ಒಳ್ಳೆಯ ಸ್ಥಾನವನ್ನು ಪಡೆದು ಮಿಂಚುವುದೇ ಇದರ ಉದ್ದೇಶವಾಗಿದೆ. ಹಣದ (money) ಹೊಳೆಯೇ ಹರಿಯುವ ಐಪಿಎಲ್‌ನಲ್ಲಿ ಆಡಿದ ಅದೆಷ್ಟೋ ಪ್ರತಿಭೆಗಳು ಇಂದು ಟೀಮ್‌ ಇಂಡಿಯಾದಲ್ಲಿ (team India) ಸ್ಥಾನ ಪಡೆದು ಮಿಂಚುತ್ತಿದ್ದಾರೆ.

ಇನ್ನೂ ಕೆಲವು ಆಟಗಾರರು ತಮ್ಮ ಪ್ರತಿಭೆಯನ್ನು ಬಹಳಷ್ಟು ಸಲ ಸಾಬೀತುಪಡಿಸಿದರೂ, ಅವರಿಗೆ ಎಲ್ಲರ ಮುಂದೆ ತೋರ್ಪಡಿಸಿಕೊಂಡು ಮೇಲಕ್ಕೆ ಬರಲು ಅವಕಾಶಗಳು ಸಿಕ್ಕಿರುವುದು ಬಹಳ ಕಡಿಮೆ ಇವೆ. ಇಂತಹ ಪಟ್ಟಿಯಲ್ಲಿ ಬರುವ ಪ್ರಮುಖ ಆಟಗಾರ ರಿಂಕು ಸಿಂಗ್ (Rinku Singh) ಕೂಡ ಒಬ್ಬರು. ಹಾಗಾದರೆ ರಿಂಕು ಸಿಂಗ್ ಅವರ ಜೀವನದ ಕಥೆಗಳು (life story) ಯಾವ ರೀತಿ ಇದ್ದವು ನೋಡೋಣ ಬನ್ನಿ

ರಿಂಕು ಸಿಂಗ್ ಆರ್‌ಸಿಬಿ (RCB) ವಿರುದ್ಧದ‌ ಕೊನೆಯ ಪಂದ್ಯದಲ್ಲಿ ಭರ್ಜರಿಯಾಗಿ 46 ರನ್‌ ಸಿಡಿಸಿದ್ದರು. ಅದರ ಬಳಿಕ, ಇಂದು ಗುಜರಾತ್‌ ಜೈಂಟ್ಸ್‌ ವಿರುದ್ಧ ಮತ್ತೆ ಸಿಡಿದ ಅವರು, ತಂಡವನ್ನು ಗೆಲುವಿನ ದಡದತ್ತ ಸೇರಿಸಿದರು. ಕೊನೆಯ ಓವರ್‌ನಲ್ಲಿ ಅವರ ಬ್ಯಾಟ್‌ನಿಂದ ಸಿಡಿದ ಆ ಐದು ಸಿಕ್ಸರ್‌ಗಳು (sixer)ಅವರ ಸ್ಫೋಟಕ ಆಟದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಅಂದರೆ ಅವರು ತನ್ನನ್ನು ತಾನು ಗುರುತಿಸಿಕೊಂಡಂತಹ ಅಭೂತಪೂರ್ವ ಗಳಿಗೆ ಎಂದೇ ಎನ್ನಬಹುದು. ಆದರೆ, ಇಂತಹ ಅದ್ಭುತ ಪ್ರತಿಭೆಯುಳ್ಳ ಆಟಗಾರ ಟೀಮ್‌ ಇಂಡಿಯಾಗೆ ಆಯ್ಕೆಯಾಗಿಲ್ಲ ಅಂದರೆ ಎಲ್ಲರಿಗೂ ಈ ವಿಷಯ ಅಚ್ಚರಿಯಾಗುವುದು ಸಹಜ.

ಇಷ್ಟೆಲ್ಲ ಮಾಹಿತಿ ನೋಡಿದ ಬಳಿಕ ಹಾಗಿದ್ರೆ ರಿಂಕು ಎಲ್ಲಿಯವರು?ಅವರ ಹಿನ್ನೆಲೆಯೇನು? ಎಂಬ ಪ್ರಶ್ನೆ ನಿಮ್ಮನ್ನು ಕಾಡಿಲ್ಲವೇ ಹಾಗಾದರೆ ಅವರ ಜೀವನದ ಪ್ರತಿಯೊಂದು ಪುಟಗಳ ಇಂಟರೆಸ್ಟಿಂಗ್ ವಿಷಯವನ್ನು ನೋಡೋಣ ಬನ್ನಿ.

ಬಡತನದಲ್ಲಿ ಅರಳಿದ ಪ್ರತಿಭೆ ರಿಂಕು ಸಿಂಗ್ (Rinku Singh) :

1997ರಲ್ಲಿ ಉತ್ತಪ್ರದೇಶದಲ್ಲಿ ಅಲಿಘಡ​​ದಲ್ಲಿ (Uttar Pradesh Aligad) ಜನಿಸಿದ ರಿಂಕು ಸಿಂಗ್‌ಗೆ ಈಗ 26 ವರ್ಷ ವಯಸ್ಸು. ಚಿಕ್ಕ ವಯಸ್ಸಿನಲ್ಲೇ ಬಡತನವನ್ನು ಕಣ್ಣಾರೆ ನೋಡಿ ಅದರಲ್ಲಿ ಈಜಿ ಮೇಲೆ ಬಂದಂತಹ ವ್ಯಕ್ತಿಯಲ್ಲಿ ರಿಂಕು ಸಿಂಗ್ ಕೂಡ ಒಬ್ಬರು. ಜೀವನದಲ್ಲಿ ಅನೇಕ ಕಷ್ಟಗಳನ್ನುಅನುಭವಿಸಿದವರು. ರಿಂಕು ತಂದೆ ಒಬ್ಬ ಸಾಮಾನ್ಯ ಸಿಲಿಂಡರ್​ ವಿತರಕ. ಮನೆಮನೆಗೆ ತೆರಳಿ ಗ್ಯಾಸ್‌ ಸಿಲಿಂಡರ್‌​​​ಗಳನ್ನು(gas cylinder) ಹಂಚುವುದೇ ಅವರ ಕಾಯಕವಾಗಿತ್ತು. ರಿಂಕು ತಂದೆ ತಾಯಿಗೆ ಒಟ್ಟು ಐದು ಜನ ಮಕ್ಕಳು. ಅವರಲ್ಲಿ ಇವರ ಅಣ್ಣ ಆಟೋ ಡ್ರೈವರ್ ಕೆಲಸ ಮಾಡುತ್ತಿದ್ದರು. ತಂದೆ ಮತ್ತು ಅಣ್ಣ ಮನೆ ವಾರ್ತೆ ನೋಡಿಕೊಳ್ಳುತ್ತಿದ್ದರು. ಇದೇ ಅವರ ಜೀವನದ ಪ್ರತಿ ದಿನ ನಿತ್ಯದ ಕಾಯಕವಾಗಿತ್ತು.

ಕಸ ಗುಡಿಸುವ ಸ್ವಾಭಿಮಾನದ ಕೆಲಸ

ಬಡತನದಲ್ಲೇ ಬೆಳೆದು ಕಷ್ಟಗಳನ್ನು ಅನುಭವಿಸಿ ಮೇಲಕ್ಕೆ ಬಂದಂತಹ ರಿಂಕುಗೆ ನಾನು ಒಬ್ಬ ಕ್ರಿಕೆಟ್ ಆಟಗಾರ (cricket player) ಆಗಬೇಕೆಂಬ ಕನಸು ಅವನದಾಗಿತ್ತು. ಆದರೆ, ಬಡತನ ಇವನನ್ನು ಮೇಲಕ್ಕೆ ಬರಲು ಬಿಡುತ್ತಿರಲಿಲ್ಲ ಆದರೆ ಕ್ರಿಕೆಟರ್ ಆಗಬೇಕೆಂಬ ಕನಸು ಬೆಟ್ಟದಷ್ಟು ದೊಡ್ಡದಿತ್ತು. ಹಾಗಾಗಿ ಈ ಕನಸು ನನಸಾಗುವುದು ಬಹಳ ದೂರದ ಮಾತೇ ಆಗಿತ್ತು. ಹೀಗಾಗಿ ತನ್ನ ಕನಸು ನನಸಾಗಿಸುವುದರೊಂದಿಗೆ ಕುಟುಂಬದ(family) ನಿರ್ವಹಣೆಗೆ ನೆರವಾಗಬೇಕೆಂದು ರಿಂಕು ಕೆಲಸ ಮಾಡುವ ನಿರ್ಧಾರಕ್ಕೆ ಬಂದರು. ಅದಕ್ಕಾಗಿ ಅವರು ಮೊದಲನೆಯದಾಗಿ ಸೇರಿದ್ದು ಕಸ ಗುಡಿಸುವ ಕೆಲಸಕ್ಕೆ. ಕೋಚಿಂಗ್ ಸೆಂಟರ್​​ ಒಂದರಲ್ಲಿ ಕಸ ಗುಡಿಸಿ ಒರೆಸುವ ಕೆಲಸಕ್ಕೆ ಸೇರಿಕೊಂಡು ಸ್ವಾಭಿಮಾನದಿಂದ ದುಡಿದು ಅದರಿಂದ ಬರುವ ಹಣದಲ್ಲಿ ತನ್ನ ಜೀವನವನ್ನು ಸಾಗಿಸುತ್ತಿದ್ದಂತಹ ವ್ಯಕ್ತಿ ರಿಂಕು. ಇದರ ನಡುವೆಯು ನಾನು ಒಬ್ಬ ಕ್ರಿಕೆಟರ್‌ ಆಗುವ ಕನಸನ್ನು ಕೂಡಾ ಉಳಿಸಿಕೊಂಡರು.

ಜೀವನಪೂರ್ತಿ(lifelong) ನಾನು ಕೆಲಸವನ್ನು ಮಾಡುತ್ತಾ ಹೋದರೆ ನಾನು ಕ್ರಿಕೆಟರ್‌ ಆಗಲು ಸಾಧ್ಯವಿಲ್ಲ ನನ್ನ ಕನಸು ಕನಸಾಗಿಯೇ ಉಳಿಯಬಹುದೆಂಬ ಕಾರಣದಿಂದ ರಿಂಕು ಕೆಲಸ ಬಿಟ್ಟು ಮೈದಾನಕ್ಕಿಳಿಯಲು ಮುಂದಾದರು. ಈ ವೇಳೆ ಹಲವು ಬಾರಿ ತಮ್ಮ ತಂದೆಯ ಕೈಯಿಂದ ಏಟನ್ನೂ ತಿಂದರು. ಮಗನ ಪ್ರತಿಭೆಯನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿಲ್ಲದ ತಂದೆ, ರಿಂಕು ನಿರ್ಧಾರವನ್ನು ಕಟುವಾಗಿ ವಿರೋಧಿಸಿದ್ರು. ಇಷ್ಟೆಲ್ಲಾ ಕಷ್ಟದ ಪರಿಸ್ಥಿತಿಗಳು ಇದ್ದರೂ ರಿಂಕು ಎಂದಿಗೂ ತನ್ನ ಛಲವನ್ನು ಬಿಡದೆ ಮುನ್ನುಗ್ಗ ಬೇಕೆಂಬ ಹಠವನ್ನು ಹಿಡಿದುಕೊಂಡರು. ಈ ವೇಳೆ ರಿಂಕು ಸಾಧನೆಯ ತುಡಿತವನ್ನು ಅರ್ಥ ಮಾಡಿಕೊಂಡವರು ಅವರ ಕೋಚ್​​(coach) ಹಾಗೂ ಸ್ನೇಹಿತರು(friends).

ಪ್ರತಿಭೆಗೆ ಸಿಕ್ಕಿತು ಅವಕಾಶ

ಅಂಡರ್​​​-16 ಹಾಗೂ ಕಾಲೇಜು ಮಟ್ಟದಲ್ಲಿ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಿಂಕು, ರಣಜಿ ಟ್ರೋಫಿಗೆ (Rana ji trophy)ಆಯ್ಕೆಯಾದ್ರು. ದೇಶಿಯ ಕ್ರಿಕೆಟ್‌ನಲ್ಲಿ​ ಅದ್ಭುತ ಪ್ರದರ್ಶನ ನೀಡಿದ ಬೆನಲ್ಲೇ ಐಪಿಎಲ್‌ನಲ್ಲಿ ಆಡುವ ಅವಕಾಶಕ್ಕೆ ಕಾದರು. ಅದರಂತೆಯೇ 2017ರಲ್ಲಿ ಐಪಿಎಲ್‌​ಗೆ ಎಂಟ್ರಿ ಕೊಟ್ರು. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಅವರನ್ನು 10 ಲಕ್ಷಕ್ಕೆ ಖರೀದಿಸಿತು. ಆದರೆ ರಿಂಕುಗೆ a ಸ್ಥಾನದಲ್ಲಿ ಮಿಂಚುವ ಅವಕಾಶ ಸಿಗಲೇ ಇಲ್ಲ. 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡಕ್ಕೆ 80 ಲಕ್ಷ ರೂಪಾಯಿಗೆ ಮಾರಾಟವಾದರು. ಅದು ಅವರ ಮೂಲ ಬೆಲೆ 20 ಲಕ್ಷಕ್ಕಿಂತ ನಾಲ್ಕು ಪಟ್ಟು ಹೆಚ್ಚು. ಮೊದಲ ವರ್ಷ ಆಡಿದ ನಾಲ್ಕು ಪಂದ್ಯಗಳಲ್ಲಿ 29 ರನ್‌ ಮಾತ್ರ ಗಳಿಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಇನ್ನಿಂಗ್ಸ್‌ ಕಟ್ಟಲು ನೆರವಾಗಬಲ್ಲರು ಎಂಬ ಉದ್ದೇಶದಿಂದ ಅವರನ್ನು ಕೆಕೆಆರ್‌ ಮುಂದಿನ ವರ್ಷ ಕೂಡಾ ರಿಟೈನ್‌ ಮಾಡಿಕೊಂಡಿತು. ಅಲ್ಲಿಂದ ಕೆಕೆಆರ್‌ (KKR) ಪರ ಆಡುತ್ತಿರುವ ರಿಂಕು ಸಿಕ್ಕ ಅವಕಾಶದಲ್ಲಿ ಅದ್ಭುತವಾಗಿ ತನ್ನನ್ನು ತಾನು ಎಲ್ಲರ ಮುಂದೆ ತೋರಿಸಿಕೊಳ್ಳುವ ಹಾಗೆ ಆಡುತ್ತಿದ್ದಾರೆ.

ಕಳೆದ ವರ್ಷ ನಡೆದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ (Rajasthan royals)ವಿರುದ್ಧದ ಪಂದ್ಯದ ಬಳಿಕ ರಿಂಕು ಒಳ್ಳೆಯ ರೀತಿಯಲ್ಲಿ ಆಡಿ ತನ್ನ ಸ್ಥಾನವನ್ನು ಗಿಟ್ಟಿಸಿಕೊಂಡರು. ಆ ಪಂದ್ಯದಲ್ಲಿ ಕೇವಲ 23 ಎಸೆತಗಳನ್ನು ಎದುರಿಸಿದ ಅವರು 42 ರನ್​​ ಗಳಿಸಿ ತಂಡವನ್ನ ಸೋಲಿನಿಂದ ಪಾರು ಮಾಡಿ ಗೆಲ್ಲಿಸಿದ್ದರು. ಮತ್ತೊಮ್ಮೆ ಲಖನೌ ವಿರುದ್ಧದ ಚೇಸಿಂಗ್‌ ವೇಳೆ 15 ಎಸೆತಗಳಿಂದ 40 ರನ್‌ ಕಲೆ ಹಾಕಿದರು. ಆದರೆ, ತಂಡವು ಹೆಚ್ಚಿನ ರೀತಿಯಲ್ಲಿ ಗುರಿ ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ಅಂದು ಕೇವಲ ಎರಡು ರನ್‌ ಕಡಿಮೆಯಾಗಿತ್ತು. ಆ ಬಳಿಕ ಹಲವು ಪಂದ್ಯಗಳಲ್ಲಿ ತಂಡಕ್ಕೆ ಗೆಲುವಿನ ಕೊಡುಗೆ ನೀಡಿದ್ದಾರೆ. ಇದೀಗ ಇಂದಿನ ಪಂದ್ಯದಲ್ಲೂ ರಿಂಕು ಆಟದಿಂದಾಗಿ ಕೆಕೆಆರ್‌ (KKR) ಜೊತೆ ಆಡಿ ತನನ್ನು ತಾನು ಗುರುತಿಸಿಕೊಂಡಿದ್ದಾರೆ.

ಬಿಸಿಸಿಐನಿಂದ ನಿಷೇಧದ ಶಿಕ್ಷೆ

ರಿಂಕು ಸಿಂಗ್ ಒಂದು ಬಾರಿ ಬಿಸಿಸಿಐನಿಂದ ಅವರನ್ನು ನಿಷೇಧ ಮಾಡಿದ ಪರಿಸ್ಥಿತಿಯನ್ನು ಕೂಡಾ ಎದುರಿಸಿದ್ದಾರೆ. 2019ರಲ್ಲಿ, ಅವರು ವಿದೇಶಿ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಭಾರತದ ಕ್ರಿಕೆಟಿಗರಿಗೆ (India cricketer) ಭಾರತದ ಹೊರಗಿನ ಯಾವುದೇ ಲೀಗ್‌ನಲ್ಲಿ ಆಡಲು ಬಿಸಿಸಿಐ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ಈ ಈ ನಿಯಮಗಳ ಬಗ್ಗೆ ತಿಳಿಯದೆ ರಿಂಕು ವಿದೇಶಿ ಲೀಗ್‌ನಲ್ಲಿ ಆಡಿದ ಕಾರಣ ಇವರನ್ನು 3 ತಿಂಗಳ ಕಾಲ ನಿಷೇಧ ಮಾಡಲಾಗಿತ್ತು.ಆದ್ರೆ ಇದೀಗ ರಿಂಕು ಟೀಮ್‌ ಇಂಡಿಯಾ ಪರ ಆಡುವ ಹಂಬಲದಲ್ಲಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ವೇಗದ ರನ್‌ ಗಳಿಕೆಗೆ ನೆರವಾಗುವ ಸಾಮರ್ಥ್ಯ ಹೊಂದಿರುವ ಇವರು, ಬೇಗನೆ ಭಾರತ ತಂಡಕ್ಕೆ (India team) ಆಯ್ಕೆಯಾಗಬೇಕು. ಅಲ್ಲಿ ಇವರು ತನ್ನ ಆಟವನ್ನು ಆಡಿ ಹೆಚ್ಚಿನ ಛಾಪನ್ನು ಮೂಡಿಸಿಕೊಳ್ಳಬೇಕೆಂಬುದು ಅಭಿಮಾನಿಗಳ (fans) ಆಸೆಯಾಗಿದೆ.

Leave A Reply

Your email address will not be published.