Roopesh Shetty : ಸಾನ್ಯಾ ಮನೆಯಲ್ಲಿ ರೂಪೇಶ್ ಶೆಟ್ಟಿ! ಮದುವೆ ಮಾತುಕತೆ ಎಂದ ಫ್ಯಾನ್ಸ್!

Roopesh Shetty: ಬಿಗ್ ಬಾಸ್ ಕನ್ನಡ ಓಟಿಟಿ 1’ (BBK OTT 1)ಕಾರ್ಯಕ್ರಮದ ಮೂಲಕ ರೂಪೇಶ್ ಶೆಟ್ಟಿ (Roopesh Shetty)ಹಾಗೂ ಸಾನ್ಯ ಅಯ್ಯರ್(Sanya Iyer)ಆತ್ಮೀಯರಾದರು. ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮದಲ್ಲೂ ಇಬ್ಬರ ಮಧ್ಯೆ ಅದೇ ಆತ್ಮೀಯತೆ ಮುಂದುವರೆದು ನೋಡುಗರಿಗೆ ಈ ಜೋಡಿ ಮುಂದೆ ಹಸೆಮಣೆ ಏರಲಿದ್ದಾರೆ ಎನ್ನುವ ಅನುಮಾನ ಕೂಡ ಮೂಡಿಸಿತ್ತು. ಇದೀಗ, ಈ ಜೋಡಿಯ ಕುರಿತ ಹೊಸ ಸುದ್ದಿಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ.

ಬಿಗ್ ಬಾಸ್ ಒಟಿಟಿಯ ಬಳಿಕ ಬಿಗ್ ಬಾಸ್ ಸೀಸನ್ 09 ರಲ್ಲಿ ಕಾಣಿಸಿಕೊಂಡ ಜೋಡಿ ಎಲ್ಲರ ಮನ ಗೆದ್ದಿದ್ದು, ಇವರಿಬ್ಬರ ಸ್ನೇಹದ ಬಗ್ಗೆ ಕೂಡ ಆಗಾಗ ಚರ್ಚೆ ಆಗುತ್ತಿತ್ತು. ‘ಬಿಗ್ ಬಾಸ್’ ಮನೆಯಿಂದ ಸಾನ್ಯ ಅಯ್ಯರ್ ಔಟ್ ಆದ ಸಂದರ್ಭ ಆಕೆಯ ನೆನಪಿನಲ್ಲೇ ರೂಪೇಶ್ ಶೆಟ್ಟಿ ಕಣ್ಣೀರು ಹಾಕಿದ್ದು, ಸಾನ್ಯ ಅಯ್ಯರ್ ಅವರನ್ನ ರೂಪೇಶ್ ಶೆಟ್ಟಿ ತುಂಬಾ ಮಿಸ್ ಮಾಡಿಕೊಂಡಿದ್ದು , ಸಾನ್ಯ ಅವರು ಕೂಡ ಈ ಬಿಗ್ ಬಾಸ್ ಮನೆಗೆ ವಿಶೇಷವಾಗಿ ರೂಪಿ ಗಾಗಿ ರೆಡ್ ಶರ್ಟ್ ಕಳುಹಿಸುತ್ತಾ ಇದ್ದಿದ್ದು ನೆನಪಿರಬಹುದು.

ಈ ಜೋಡಿಯ ನಡುವೆ ಪ್ರೀತಿ ಪ್ರೇಮ ನಡೆಯುತ್ತಿದೆ ಎಂಬ ಗುಸು ಗುಸು ಸುದ್ದಿ ಕೇಳಿಬಂದರೂ ಕೂಡ ಇದಕ್ಕೆ ಈ ಜೋಡಿ ಮಾತ್ರ ಏನು ಪ್ರತಿಕ್ರಿಯೆ ನೀಡಿಲ್ಲ. ಈ ನಡುವೆ ಬಿಗ್ ಬಾಸ್ ಕನ್ನಡ ಸೀಸನ್ 09 ರ ವಿನ್ನರ್ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್ ಮನೆಗೆ ಭೇಟಿ ನೀಡಿದ್ದು, ಅಭಿಮಾನಿಗಳಲ್ಲಿ ಹೊಸ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕುಟುಂಬದ ಜೊತೆ ಫೋಟೋಗೆ ಪೋಸ್ ನೀಡಿದ ರೂಪಿ ಅವರನ್ನು ಕಂಡು ಮದುವೆ(Marraige)ಮಾತುಕತೆ ಮುಕ್ತಾಯ ಎಂದು ಅಭಿಮಾನಿಗಳು ಮಾತಾಡುತ್ತಿದ್ದಾರೆ.

ತುಂಬಾ ದಿನಗಳ ಬಳಿಕ ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಅವರ ಮನೆಗೆ ಭೇಟಿ ನೀಡಿದ್ದು, ಅವರ ಕುಟುಂಬದ ಜೊತೆ ಫೋಟೋಗೆ (Photo) ಪೋಸ್ ನೀಡಿದ್ದಾರೆ. ರೂಪೇಶ್ ಶೆಟ್ಟಿ ಅವರು ಸದ್ಯ ಸರ್ಕಸ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಇದ್ದು, ಇದರ ನಡುವೆಯೂ ಸಾನ್ಯಾ ಮನೆಗೆ ಭೇಟಿ ನೀಡಿ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ರೂಪೇಶ್ ಶೆಟ್ಟಿ ಅವರು ಸಾನ್ಯಾ ಐಯ್ಯರ್ ಜೊತೆಗಿನ ಫೋಟೋಗಳು ಎಲ್ಲೆಡೆ ವೈರಲ್ ಆಗಿದ್ದು, ಇದೇನು ಕಥೆ? ಮದುವೆ ಮಾತುಕತೆನಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದ್ದು, ಶೀಘ್ರದಲ್ಲೇ ಮದುವೆ ಎಂದು ಕೂಡ ಹೇಳಲಾಗುತ್ತಿದ್ದು,ರೂಪೇಶ್ ಶೆಟ್ಟಿ ಶೇರ್ ಮಾಡಿರುವ ಫೋಟೋಗಳಿಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ರೂಪಾನ್ಯ ಜೋಡಿಯನ್ನು ಮತ್ತೆ ಜೊತೆ ಜೊತೆಯಲಿ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.