Pushpa The Rule: ಪುಷ್ಪ 2 ಟೀಸರ್‌ನಲ್ಲಿ ಅತಿದೊಡ್ಡ Clue ನೀಡಿದ ಡೈರೆಕ್ಟರ್!
Pushpa The Rule: ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಕಳೆದ ಎರಡು ಮೂರು ದಿನಗಳಿಂದ ರಾಷ್ಟ್ರವ್ಯಾಪಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ. ಈಗಾಗಲೇ ಸುಕುಮಾರ್ ನಿರ್ದೇಶನದ ಪುಷ್ಪಾ ಸೂಪರ್ ಹಿಟ್ ಆಗಿದ್ದು ಗೊತ್ತೇ ಇದೆ. ಇದೀಗ, ನಿರ್ಮಾಪಕರು ಪುಷ್ಪಾ – 2 ಕೆಲಸದಲ್ಲಿ(Pushpa 2 teaser) ನಿರತರಾಗಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪುಷ್ಪರಾಜ್ ಬಗ್ಗೆ ಕುತೂಹಲಕಾರಿ ಮಾಹಿತಿಗಳು ಹರಿದಾಡುತ್ತಿವೆ.
ಸುಕುಮಾರ್ ಅವರ ಎಲ್ಲಾ ಚಲನಚಿತ್ರಗಳು (Films)ಕೆಲವು ಆಸಕ್ತಿದಾಯಕ ಪರಿಕಲ್ಪನೆಯೊಂದಿಗೆ ಮೂಡಿಬಂದಿವೆ. ಹೀಗಾಗಿ, ಪುಷ್ಪಾ 2 ಕೂಡ ಅಭಿಮಾನಿಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಸುಕುಮಾರ್ ಚಲನಚಿತ್ರಗಳಲ್ಲಿ ವಿಭಿನ್ನ ಶೀರ್ಷಿಕೆಗಳನ್ನು ನೀಡುತ್ತಾರೆ. ಇದೀಗ ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪಾ ಟೀಸರ್‌ನಲ್ಲಿ ಈ ಹಿಂಟ್ ಅನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ನೀಡುತ್ತಿದ್ದಾರೆ. ಸುಕುಮಾರ್ ಏನು ಪ್ಲಾನ್ ಮಾಡಿದ್ದಾರೆ ಎಂಬ ಕುರಿತಾದ ಕೂತೂಹಲ ಜನರಲ್ಲಿ ಮನೆ ಮಾಡಿದೆ.
ಇತ್ತೀಚೆಗೆ ವೇರ್ ಈಸ್ ಪುಷ್ಪಾ (Pushpa The Rule teaser)ಎಂಬ ಕಿರು ಟೀಸರ್ ವಿಡಿಯೋ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಈ ಟೀಸರ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ಹರಿದಾಡುತ್ತಿದೆ. ಮೂರು ನಿಮಿಷದ ಈ ಟೀಸರ್ ಮೂಲಕ ಸಿನಿಮಾದ ಎರಡನೇ ಭಾಗ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಕಥೆ ಏನೆಂಬುದನ್ನು ಸುಕುಮಾರ್ ಅವರು ಮಾಹಿತಿ ನೀಡಿದ್ದು, ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಸುಕುಮಾರ್ ಈ ಚಿತ್ರದ ಬಗ್ಗೆ ಸುಳಿವು ನೀಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ವೇರ್ ಈಸ್ ಪುಷ್ಪಾ ಎಂಬ ಕಿರು ಟೀಸರ್ ವಿಡಿಯೋ(Video) ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಈ ಟೀಸರ್ ವಿಡಿಯೋ ಎಲ್ಲಾ ಭಾಷೆಗಳಲ್ಲಿ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದ್ದು, ಇದರಲ್ಲಿ ಅತಿದೊಡ್ಡ ಸುಳಿವು (Clue)ಬಿಟ್ಟು ಕೊಟ್ಟಿದ್ದಾರೆ. ಮೊದಲ ಭಾಗದ ಶೀರ್ಷಿಕೆಗಳಲ್ಲಿ ಪುಷ್ಪ ಎಂಬ ಪದಗಳು ಕೆಂಪು ಬಣ್ಣದಲ್ಲಿ ಕಂಡುಬರುತ್ತಿದ್ದವು. ಆದರೆ ಈ ಇತ್ತೀಚಿನ ಟೀಸರ್ ಬಿಡುಗಡೆಯಾದ ಸಂದರ್ಭ ಆ ಕೆಂಪು ಅಕ್ಷರಗಳು ಚಿನ್ನದ ಬಣ್ಣಕ್ಕೆ ಬದಲಾಗುತ್ತಿವೆ ಎನ್ನಲಾಗಿದೆ. ಸುಕುಮಾರ್ ಅವರ ಸ್ಟೈಲ್ ನಲ್ಲಿ ಈ ಸುಳಿವು ನೀಡಿರಬಹುದು ಎಂಬ ಮಾತು ಟಾಲಿವುಡ್ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.
ಇದನ್ನೂ ಓದಿ: Tanisha Kuppanda : ನಟಿ ತನಿಷಾ ಕುಪ್ಪಂಡ ಆರೋಪಕ್ಕೆ ಉತ್ತರ ಕೊಟ್ಟ ರಾಜಾಹುಲಿ ಹರ್ಷ! ಶಾಕಿಂಗ್ ಮಾಹಿತಿ ಬಹಿರಂಗ!
Your point of view caught my eye and was very interesting. Thanks. I have a question for you.
I don’t think the title of your article matches the content lol. Just kidding, mainly because I had some doubts after reading the article. https://accounts.binance.com/register?ref=P9L9FQKY