Nokia Magic Max : ಐಫೋನ್ ಗೆ ಟಕ್ಕರ್ ಕೊಡಲು ರೆಡಿಯಾದ ನೋಕಿಯಾ ಸ್ಮಾರ್ಟ್ಫೋನ್ ! ಏನಿದರ ವಿಶೇಷತೆ?

Nokia Magic Max : ಮೊಬೈಲ್(Mobile) ಎಂಬ ಮಾಯಾವಿ ಬಹುತೇಕ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ. ಅದರಲ್ಲಿಯೂ ಹೊಸ ಹೊಸ ವೈಶಿಷ್ಟ್ಯತೆ ಮೂಲಕ ಸ್ಮಾರ್ಟ್ ಫೋನ್ (Smart Phone ) ಮಾರುಕಟ್ಟೆಗೆ ಲಗ್ಗೆ ಇಡುತ್ತವೆ. ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾಗಿರುವ ನೋಕಿಯಾ (Nokia)ಇತ್ತೀಚೆಗೆ ತನ್ನ ಬ್ರಾಂಡ್​ನ ಲೋಗೋವನ್ನು ಬದಲಿಸಿದ್ದು, ಇದೀಗ ತನ್ನ ಬ್ರಾಂಡ್​ನ ಹೊಸ ಸ್ಮಾರ್ಟ್​​​​ಫೋನ್​ (Smartphone)ಅನ್ನು ಬಿಡುಗಡೆಗೊಳಿಸಲು ರೆಡಿಯಾಗಿದೆ. ಈ ಸ್ಮಾರ್ಟ್​ಫೋನ್​ ಆ್ಯಪಲ್​ ಫೋನ್​(Apple Company) ರೀತಿಯ ಫೀಚರ್ಸ್​ಗಳನ್ನು ಒಳಗೊಂಡಿದೆ.

ನೋಕಿಯಾ ಇತ್ತೀಚೆಗೆ ಹೊಸ ಲೋಗೋವನ್ನು ಪರಿಚಯಿಸಿದ್ದು, ಹೊಸ ಯುಐ(User interface ) ಅನ್ನೂ ಕೂಡ ಪರಿಚಯಿಸಿದೆ. ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​ (Nokia Magic Max)ಮುಂಭಾಗವು 6.7 ಇಂಚಿನ AMOLED ಡಿಸ್ಪ್ಲೇ ಒಳಗೊಂಡಿದೆ. ಐಫೋನ್​ಗಿಂತಲೂ ತೆಳು ಬೇಝಲ್​​ ಸ್ಕ್ರೀನ್​ ಒಳಗೊಂಡಿದೆ. 120hz ರಿಫ್ರೆಶ್​ ರೇಟ್​​ ಮತ್ತು 1080*2400 ರೆಸಲ್ಯೂಷನ್​ ಅನ್ನು ಹೊಂದಿದೆ. ಡಿಸ್ಪ್ಲೇ ಮೇಲ್ಭಾಗದ ಮಧ್ಯದಲ್ಲಿ 64MP ಪಂಚ್​ ಹೋಲ್​ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ನೋಕಿಯಾ ಮೊಬೈಲ್ (Nokia Mobile) ಟೆಕ್ನಾಲಜಿ ಲೋಕದಲ್ಲಿ ದೊಡ್ಡ ಕ್ರಾಂತಿ ಮಾಡಿದ್ದು, ಬಂದ ಉತ್ತಮ ದರ್ಜೆಯ ಆ್ಯಪಲ್, ಸ್ಯಾಮ್ಸಂಗ್ (Samsung), ಒಪ್ಪೋನಂತಹ (OPPO) ಮೊಬೈಲ್ಗಳ ಅಬ್ಬರದಲ್ಲಿ ನೋಕಿಯಾ ತನ್ನ ಮಾರುಕಟ್ಟೆಯಲ್ಲಿ ಅಬ್ಬರಿಸಲು ಅಣಿಯಾಗಿದೆ. ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​ ವಿಶಿಷ್ಟವಾದ ವಿನ್ಯಾಸ ಒಳಗೊಂಡಿದ್ದು, ಬೇಝ್​ಲೆಸ್​​ ಡಿಸ್​​ಪ್ಲೇಯೊಂದಿಗೆ ಫುಲ್​ ಸ್ಕ್ರೀನ್​ ಡಿಸ್ಪ್ಲೇ ಇರಲಿದೆ. ಹಿಂಭಾಗದಲ್ಲಿರುವ ಕ್ಯಾಮೆರಾ, ಆ್ಯಪಲ್​ ಐಫೋನ್​ ಕ್ಯಾಮೆರಾ ಮಾದರಿಯಲ್ಲಿರಲಿದೆ.

ಈ ಮೊಬೈಲ್ ಕಾರ್ಯಕ್ಷಮತೆ ಬಗ್ಗೆ ಗಮನ ಹರಿಸಿದರೆ, ಸ್ನಾಪ್​ ಡ್ರಾಗನ್​ 8 GEN 2 ಚಿಪ್​​ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 8ಜಿಬಿ, 12ಜಿಬಿ ಮತ್ತು 16 ಜಿಬಿ ರ್‍ಯಾಮ್ ಆಯ್ಕೆಯನ್ನು ಒಳಗೊಂಡಿದೆ. ಇದಲ್ಲದೆ, 2 ಸ್ಟೋರೇಜ್​ ಆಯ್ಕೆಗಳಿದ್ದು, ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​​ 256 ಜಿಬಿ ಮತ್ತು 512 ಜಿಬಿ ಸ್ಟೋರೇಜ್​ ಆಯ್ಕೆ ಲಭ್ಯವಿದೆ. ಎರಡೂ ಸ್ಟೋರೇಜ್​ಗಳಲ್ಲೂ UFS 4.0 ಫಾಸ್ಟೆಸ್ಟ್​​ ಸ್ಟೋರೇಜ್​ ತಂತ್ರಜ್ಞಾನವಿದೆ. ಈ ಮೊಬೈಲ್ ವಿನ್ಯಾಸ ಮತ್ತು ಆ್ಯನಿಮೇಷನ್​ಗಳಲ್ಲಿ ವಿಭಿನ್ನ ಬದಲಾವಣೆ ತರುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಫ್ಲಾಗ್​ಶಿಪ್​ ಬಗ್ಗೆ ಕೂಡ ಚಿಂತನೆ ನಡೆಸುತ್ತಿದೆ.

ಐಫೋನ್​ನಂತೆಯೇ ಈ ಸ್ಮಾರ್ಟ್​ಫೋನ್​ನಲ್ಲೂ ಫ್ಲ್ಯಾಟ್​​ ಎಡ್ಜ್​ ಇರಲಿದ್ದು ಹಿಂಬದಿಯ ಅಂಚುಗಳು ಗುಂಡಾಗಿರುತ್ತವೆ. ಇದು ಗ್ರಾಹಕರು ಫೋನ್​ ಹಿಡಿದುಕೊಳ್ಳಲು ಆರಾಮದಾಯಕ ಅನುಭವವನ್ನು ಒದಗಿಸಲಿದೆ. ಹೀಗಾಗಿ, ಅತ್ಯುತ್ತಮ ಫೀಚರ್​ ಜೊತೆಗೆ ಕೈಗೆಟುಕುವ ದರದಲ್ಲಿ ಪೋನ್​ ಲಭ್ಯವಾಗಲಿದೆ.ಇದರ ಹಿಂಬದಿಯ ಕ್ಯಾಮೆರಾದಲ್ಲಿ ಮೂರು ಕ್ಯಾಮೆರಾಗಳಿದ್ದು, 108 ಎಮ್​ಪಿ ಮುಖ್ಯ ಸಂವೇದಕ, 1 ಎಂಪಿ ಅಲ್ಟ್ರಾವೈಡ್​​​ ಸಂವೇದಕ ಮತ್ತು 5 ಎಂಪಿ ಮ್ಯಾಕ್ರೋ ಲೆನ್ಸ್​ ಅನ್ನು ಒಳಗೊಂಡಿದೆ. ಇದರ ಜೊತೆಗೆ 7,500mAh ಬ್ಯಾಟರಿ ಬ್ಯಾಕಪ್​ ಒಳಗೊಂಡಿದ್ದು, ಈ ಬ್ಯಾಟರಿಯು ಫಾಸ್ಟ್​ ಚಾರ್ಜಿಂಗ್​ ಟೆಕ್ನಾಲಜಿಯನ್ನೂ (Charging Technology) ಅಳವಡಿಸಲಾಗಿದೆ.
ಶೀಘ್ರದಲ್ಲಿಯೇ ಈ ಎಲ್ಲಾ ಅಂಶಗಳನ್ನು ಒಳಗೊಂಡ ಫೋನ್​ ಬಿಡುಗಡೆಗೆ ನೋಕಿಯಾ ಚಿಂತನೆ ನಡೆಸುತ್ತಿದೆ ಎನ್ನಲಾಗಿದ್ದು,ಇದು ನೇರವಾಗಿ ಐಪೋನ್​ಗೆ (iPhone) ಪೈಪೋಟಿ ನೀಡಲಿದೆ. ಈ ಫೋನ್ 32,990 ರೂಪಾಯಿಗೆ ಲಭ್ಯವಿದ್ದು, ಈ ಫೋನ್ ಕೆಂಪು, ಕಪ್ಪು, ಚಿನ್ನ ಮತ್ತು ಹಸಿರು ಈ ರೀತಿಯ​ 4 ವಿಭಿನ್ನ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯಲಿದೆ. ನೋಕಿಯಾ ಮ್ಯಾಜಿಕ್​ ಮ್ಯಾಕ್ಸ್​​ ಆಗಸ್ಟ್​ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

 

ಇದನ್ನು ಓದಿ : Tirumala: ತಿರುಪತಿಗೆ ತೆರಳುವ ಭಕ್ತರಿಗೆ ಮಹತ್ವದ ಮಾಹಿತಿ ಇಲ್ಲಿದೆ!! 

6 Comments
  1. MichaelLiemo says

    ventolin 4mg uk: Ventolin inhaler best price – ventolin cream
    ventolin over the counter canada

  2. Josephquees says

    buy lasix online: buy furosemide – buy furosemide online

  3. Josephquees says

    furosemida 40 mg: furosemide online – lasix 20 mg

  4. Josephquees says

    prednisone generic cost: prednisone 50 mg canada – prednisone 500 mg tablet

  5. Timothydub says

    reputable canadian pharmacy: Cheapest online pharmacy – canada drugs online review

  6. Timothydub says

    buying prescription drugs in mexico: mexican mail order pharmacies – purple pharmacy mexico price list

Leave A Reply

Your email address will not be published.