Bikes Under Rs.1 lakh : ಗಮನಿಸಿ ಬೈಕ್‌ ಪ್ರಿಯರೇ, ಇಲ್ಲಿದೆ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್‌ ಬೈಕ್‌ಗಳ ಲಿಸ್ಟ್‌, ನಿಮ್ಮ ದುಡ್ಡಿಗೆ ಮೋಸವಿಲ್ಲ!

Bikes Under Rs.1 lakh : ನೀವು ಬೈಕ್ (bike) ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ನೋಡಿ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೆಸ್ಟ್‌ ಬೈಕ್‌ಗಳ (Bikes Under Rs.1 lakh) ಲಿಸ್ಟ್‌. ಜನಪ್ರಿಯ ಕಂಪನಿಗಳ ಈ ಬೈಕ್ ಗಳು ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ನೀವು ಇವುಗಳ ಬಗ್ಗೆ ಮಾಹಿತಿ ತಿಳಿದರೆ, ಖಂಡಿತ ಈ ಬೈಕ್ ಗಳನ್ನು ಖರೀದಿಸುತ್ತೀರಾ!! ಹಾಗಿದ್ರೆ ಒಂದು ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಬೈಕ್ ಗಳ ಮಾಹಿತಿ ತಿಳಿಯೋಣ.

ರೈಡರ್ (rider) : ಟಿವಿಎಸ್ ಕಂಪನಿಯ ‘ರೈಡರ್’ ಬೈಕ್ ನ ಬೆಲೆ 93,719 (ಎಕ್ಸ್ ಶೋರೂಂ) ಆಗಿದೆ. ಇದು 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 11.22 bhp ಗರಿಷ್ಠ ಪವರ್ ಹಾಗೂ 11.2 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಕೇವಲ 5.9 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಪಡೆಯಲಿದೆ. ಅಲ್ಲದೆ, ರೈಡರ್ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಫುಲ್ ಡಿಜಿಟಲ್ ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಿವಿಎಸ್ ಸ್ಪೋರ್ಟ್ (TVs sport) : ಇದು ಸೆಲ್ಫ್ ಸ್ಟಾರ್ಟ್ ಹಾಗೂ ಕಿಕ್ ಸ್ಟಾರ್ಟ್ ಎಂಬ ಎರಡು ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದರ ಎಕ್ಸ್ ಶೋರೂಂ ಬೆಲೆ ರೂ.64,050 ಆಗಿದೆ. ಇದು 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, 8.1 bhp ಗರಿಷ್ಠ ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.

ಸಿಟಿ100 (city 100): ಬಜಾಜ್ (Bajaj) ಕಂಪನಿಯ ‘ಸಿಟಿ100’ ಬೆಲೆ ರೂ.72,224 (ಎಕ್ಸ್ ಶೋರೂಂ) ಆಗಿದ್ದು, ಇದು 115.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಜೊತೆಗೆ 8.71 bhp ಗರಿಷ್ಠ ಪವರ್ ಹಾಗೂ 9.81 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 10.5 ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 75 kmpl ಮೈಲೇಜ್ ನೀಡುತ್ತದೆ.

ಹೀರೋ ಗ್ಲಾಮರ್ (hero glamour): ‘ಹೀರೋ ಮೊಟೊಕಾರ್ಪ್’ (hero motors) ಕಂಪನಿಯ ‘ಗ್ಲಾಮರ್’ ಬೈಕ್ ಎರಡು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಸೆಲ್ಫ್ ಸ್ಟಾರ್ಟ್ ಡ್ರಮ್ ರೂಪಾಂತರದ ಬೆಲೆ ರೂ.78,768 ಹಾಗೂ ಸೆಲ್ಫ್ ಸ್ಟಾರ್ಟ್ ಡಿಸ್ಕ್ ರೂಪಾಂತರದ ದರ ರೂ.82,768 (ಎಕ್ಸ್ ಶೋರೂಂ, ದೆಹಲಿ) ಆಗಿದೆ. ಇದು 124.5 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 10.73 bhp ಗರಿಷ್ಠ ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಹಾಗೇ 5 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, ಈ ಬೈಕ್ 55 kmpl ಮೈಲೇಜ್ ನೀಡುತ್ತದೆ.

ಶೈನ್ (shine) : ಹೋಂಡಾದ (Honda) ಶೈನ್ ಬೈಕ್ ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಾಗಲಿದೆ. ಇದರ ಎಕ್ಸ್ ಶೋರೂಂ ಬೆಲೆ ಕ್ರಮವಾಗಿ ರೂ.78,687 ದಿಂದ ರೂ.82,697 ಆಗಿದೆ. ಇದು 123.94 ಸಿಸಿ ಸಿಲಿಂಡರ್ ಎಂಜಿನ್ ಹೊಂದಿದ್ದು, 10.59 bhp ಗರಿಷ್ಠ ಪವರ್ ಹಾಗೂ 11 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 55 kmpl ಮೈಲೇಜ್ ನೀಡುತ್ತದೆ. ಇದರಲ್ಲಿ ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆ ಇದ್ದು, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ.

Leave A Reply

Your email address will not be published.