Cooking Job : ಅಡುಗೆಯಲ್ಲಿ ಪರಿಣತಿ ಹೊಂದಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್!ಕುಕ್ ಕೆಲಸಕ್ಕೆ ಮಾಸಿಕ 32 ಸಾವಿರ ಸಂಬಳ!

cooking job : ಮಂಗಳೂರು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ (Job Alert) . ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯವು ಖಾಲಿ ಇರುವ ವಿವಿಧ ಹುದ್ದೆಗಳಾದ ಟೆಕ್ನಿಷಿಯನ್ ಮತ್ತು ಕುಕ್ (cooking job) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು 4 ಟೆಕ್ನಿಷಿಯನ್, ಕುಕ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ವರ್ಷ ಮತ್ತು ಗರಿಷ್ಠ 40 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ :
ಟೆಕ್ನಿಷಿಯನ್ ಹುದ್ದೆಗೆ : ಮಾಸಿಕ 27,650- 52,650
ಕುಕ್/ ಅಸಿಸ್ಟೆಂಟ್ ಕುಕ್ ಹುದ್ದೆಗೆ : ಮಾಸಿಕ 18,600-32,600 ನೀಡಲಾಗುತ್ತದೆ.

ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ರಿಜಿಸ್ಟ್ರಾರ್, ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳ ಗಂಗೋತ್ರಿ-574199, ದಕ್ಷಿಣ ಕನ್ನಡ, ಕರ್ನಾಟಕ ಇಲ್ಲಿಗೆ ಕಳುಹಿಸಬಹುದಾಗಿದೆ.

ಆಯ್ಕೆಯಾಗುವ ಅಭ್ಯರ್ಥಿಗಳು ಮಂಗಳೂರಿನಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅರ್ಜಿ ಸಲ್ಲಿಸಲು ಏಪ್ರಿಲ್ 10, 2023 ಕೊನೆಯ ದಿನಾಂಕವಾಗಿದೆ.

 

ಇದನ್ನು ಓದಿ : Juice in summer : ಬೇಸಿಗೆಗೆ ಈ ಜ್ಯೂಸ್ ಕುಡಿದರೆ ತುಂಬಾ ಒಳ್ಳೆಯದು! ಯಾವುದೆಲ್ಲ ಗೊತ್ತಾ?

2 Comments
  1. nimabi says

    Thank you very much for sharing, I learned a lot from your article. Very cool. Thanks. nimabi

  2. binance says

    Your article helped me a lot, is there any more related content? Thanks! https://accounts.binance.com/en-IN/register?ref=UM6SMJM3

Leave A Reply

Your email address will not be published.