Asla marley: ನೋಡುತ್ತಿದ್ದಂತೆ ಆತ ನನ್ನೆದುರೇ ಹಸ್ತಮೈಥುನ ಮಾಡಿಬಿಟ್ಟ! ಕಹಿ ಅನುಭವಗಳನ್ನು ಬಿಚ್ಚಿಟ್ಟ ಲೈಂಗಿಕ ಶಿಕ್ಷಣದ ಯೂಟ್ಯೂಬರ್
Asla marley : ಇಂದು ದುಡಿಮೆಯ ಪ್ರಮುಖ ಮಾರ್ಗಗಳಲ್ಲಿ ಯೂಟ್ಯೂಬ್(You tuber) ಕೂಡ ಒಂದು. ಅನೇಕ ಯೂಟ್ಯೂಬರ್ ಗಳು ತಮ್ಮ ಆಸಕ್ತ ಕ್ಷೇತ್ರಗಳನ್ನು ಆಯ್ಕೆಮಾಡಿಕೊಂಡು, ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡಿ, ಅದಕ್ಕೆ ಸಂಬಂಧಿಸಿದ ವಿಚಾರಗಳನ್ನು ಜನರಿಗೆ ಮನ ಮುಟ್ಟುವಂತೆ ವಿವರಿಸುತ್ತಾ ಅದರಲ್ಲಿಯೇ ಲಕ್ಷಾಂತರ ಹಣ ಗಳಿಸುತ್ತಾರೆ. ಆದರೂ ಜನರಿಗಂತೂ ಇದರಿಂದ ಹಲವಾರು ಮಾಹಿತಿಗಳು ದೊರೆಯುತ್ತವೆ. ಅಂತೆಯೇ ಇಂದಿಗೂ ನಮ್ಮ ನಡುವೆ ಕಳಂಕವಾಗಿ ಉಳಿದುಕೊಂಡಿರುವ ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ವಿವರಿಸುವ ಅನೇಕ ಯೂಟ್ಯೂಬರ್ಸ್ ಇದ್ದಾರೆ. ಅಂಥವರಲ್ಲಿ ಅಸ್ಲಾ ಮಾರ್ಲಿ(Asla Marley) ಕೂಡ ಒಬ್ಬರು.
ಹೌದು, ಯೂಟ್ಯೂಬರ್ಸ್ ಗಳಲ್ಲಿ ಅನೇಕರು, ಅದರಲ್ಲೂ ಮುಖ್ಯವಾಗಿ ಮಹಿಳಾ ಲೈಂಗಿಕ ತಜ್ಞರು ಕಾಮಾಸಕ್ತಿಯ ಅನುಭವಗಳು ಮತ್ತು ಲೈಂಗಿಕ ಶಿಕ್ಷಣದ ಬಗ್ಗೆ ಜನರಿಗೆ ಮಾಹಿತಿ ನೀಡುತ್ತಾರೆ. ಅಂತವರಲ್ಲಿ ತಾವು ಆಡುವ ಮಾತುಗಳಿಂದಲೇ ಮಾರ್ಲಿ ಖ್ಯಾತಿ ಪಡೆದಿದ್ದಾರೆ. ಸದ್ಯ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಮಾರ್ಲಿ, ಲೈಂಗಿಕತೆ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಕಾಂಡೋಮ್ ಬಗ್ಗೆ ಮಾತನಾಡಿದ ಅವರು ನಮ್ಮ ದೇಶದಲ್ಲಿ ಪುರುಷರ ಕಾಂಡೋಮ್ಗಿಂತ ಮೂರು ಪಟ್ಟು ಹೆಚ್ಚು ಮಹಿಳಾ ಕಾಂಡೋಮ್ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಬಹುತೇಕರಿಗೆ ಇದು ತಿಳಿದಿಲ್ಲ. ಅಲ್ಲದೆ ಪುರುಷರ ಕಾಂಡೋಮ್ಗಳು ಎಲ್ಲ ಕಡೆ ಇವೆ ಮತ್ತು ಮಾರುಕಟ್ಟೆಗಳಲ್ಲಿ ಸುಲಭವಾಗಿ ಕಡಿಮೆ ದರದಲ್ಲಿ ದೊರೆಯುತ್ತವೆ. ಇವುಗಳೊಂದಿಗೆ ಮಹಿಳೆಯರ ಕಾಂಡೋಮ್ಗಳು ಹೆಚ್ಚು ಲಭ್ಯವಿದ್ದು, ಜೊತೆಗೆ ಪರಿಣಾಮಕಾರಿಯಾಗಿದೆ. ಆದರೆ, ಪುರುಷರ ಕಾಂಡೋಮ್ಗಿಂತ ಮೂರು ಪಟ್ಟು ಹೆಚ್ಚಿನ ಬೆಲೆ ಇದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಅವರು ಓರ್ವ ವ್ಯಕ್ತಿ ಸಾರ್ವಜನಿಕ ಪ್ರದೇಶದಲ್ಲೇ ಹಸ್ತಮೈಥುನ ಮಾಡಿಕೊಳ್ಳುವುದನ್ನು ನಾನು ನೋಡಿದ್ದೇನೆ. ಅದೊಂದು ಸಣ್ಣ ರಸ್ತೆಯಾಗಿತ್ತು ಜನರು ಓಡಾಡು ರಸ್ತೆಯಲ್ಲೇ ಆತ ಹಸ್ತಮೈಥುನದಲ್ಲಿ ತೊಡಗಿದ್ದ. ಇದೇ ರೀತಿಯ ಅನುಭವವನ್ನು ನಾನು ಚಿತ್ರಮಂದಿರದ ಒಳಗೂ ಅನುಭವಿಸಿದ್ದೇನೆ. ನನ್ನ ಪಕ್ಕದಲ್ಲಿ ಕುಳಿತಿದ್ದ ಓರ್ವ ಯುವಕ, ತನ್ನ ಪ್ಯಾಂಟ್ ಜಿಪ್ ತೆಗೆದು, ನನ್ನ ಎದುರಲ್ಲೇ ಹಸ್ತಮೈಥುನ ಮಾಡಿಕೊಂಡನು. ಈ ವೇಳೆ ನಾನು ಸಿನಿಮಂದಿರದಿಂದಲೇ ಎದ್ದು ಹೊರಬಂದಿದ್ದೆ ಎಂದು ಅಸ್ಲಾ ಹೇಳಿದ್ದಾರೆ.
ಅಂದಹಾಗೆ ಇಂದಿನ ದಿನಗಳಲ್ಲಿ ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ. ಇಂದಿನ ದಿನಗಳಲ್ಲಿ ಮಕ್ಕಳು ಸಹ ಪೋರ್ನ್ ವಿಡಿಯೋಗಳನ್ನು ನೋಡುತ್ತಿದ್ದಾರೆ. ಈ ಸಮಕಾಲೀನ ಕಾಲದಲ್ಲಿ ಯಾರೂ ಪೋರ್ನ್ ವೀಡಿಯೋಗಳಿಗೆ ಹೊಸಬರಲ್ಲ. ಎಲ್ಲರೂ ಒಮ್ಮೆ ಪ್ರಯತ್ನಿಸಿದ್ದಾರೆ. ದೃಶ್ಯಗಳನ್ನು ವಾಸ್ತವವಾಗಿಸಲು ಪ್ರಯತ್ನಿಸುವಾಗ ಸಮಸ್ಯೆ ಬರುತ್ತದೆ. ಇದರಿಂದ ಹಲವು ಸಂಬಂಧಗಳು ಹಳಸಿ ಹೋಗಿವೆ. ಯಾವುದೇ ಉದ್ಯಮಕ್ಕಿಂತ ಹೆಚ್ಚಾಗಿ ಅಶ್ಲೀಲ ಮತ್ತು ಲೈಂಗಿಕ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ ಎಂದು ಅಸ್ಲಾ ಹೇಳಿದರು.
ಇದನ್ನೂ ಓದಿ: Salman Khan : ಕೊನೆಗೂ ಮದುವೆಯಾಗುತ್ತಿದ್ದಾರೆ ಸಲ್ಮಾನ್ ಖಾನ್! ಹುಡುಗಿ ಯಾರು ಗೊತ್ತಾ?