Salman Khan : ಕೊನೆಗೂ ಮದುವೆಯಾಗುತ್ತಿದ್ದಾರೆ ಸಲ್ಮಾನ್‌ ಖಾನ್‌! ಹುಡುಗಿ ಯಾರು ಗೊತ್ತಾ?

Salman Khan: ಬಾಲಿವುಡ್ ನ (Bollywood) ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಎಂದೇ ಕರೆಯಲ್ಪಡುವ ನಟ ಸಲ್ಮಾನ್ ಖಾನ್ (Salman Khan) ಇದೀಗ ಮದುವೆಯಾಗುವ ಸುಳಿವು ನೀಡಿದ್ದಾರೆ. ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟ ಸಲ್ಮಾನ್ ಖಾನ್ ನಟನೆ, ಹಿಟ್ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ವಯಸ್ಸು 57 ದಾಟಿದರೂ ಮದುವೆಯಾಗದೇ ಇರುವ ನಟನ ಜೀವನದಲ್ಲಿ ಐಶ್ವರ್ಯಾ ರೈಯಿಂದ ಹಿಡಿದು ಕತ್ರಿನಾ ಕೈಫ್​​ವರೆಗೆ ಹಲವಾರು ನಟಿಯರು ಬಂದು ಹೋಗಿದ್ದಾರೆ. ಆದರೂ ಈವರೆಗೂ ಮದುವೆಯಾಗದ ಸಲ್ಮಾನ್ ಇದೀಗ ಮದುವೆಯಾಗುತ್ತಿದ್ದಾರೆ.

 

ಸದ್ಯ ಸಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki jaan) ಚಿತ್ರ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು, ಸಿನಿಮಾದ ‘ಯೆಂಟಮ್ಮಾ’ ಸಾಂಗ್ (Yentamma Song) ರಿಲೀಸ್ ಆಗಿ ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್ (raam Charan), ದಗ್ಗುಬಾಟಿ ವೆಂಕಟೇಶ್ ಜಬರ್‌ದಸ್ತ್ ಆಗಿ ಡ್ಯಾನ್ಸ್ ಮಾಡಿದ್ದು, ಜೊತೆಗೆ ಪೂಜಾ ಹೆಗ್ಡೆ ಕೂಡ ಸಖತ್ ಸ್ಟೆಪ್ ಹಾಕಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.

ಆದರೆ, ಇದಕ್ಕಿಂತಲೂ ಹೆಚ್ಚು ಸದ್ದು ಮಾಡುತ್ತಿರುವ ವಿಚಾರವೆಂದರೆ, ಸಲ್ಮಾನ್ ಖಾನ್ ಮದುವೆ (Salman Khan marriage) ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹೌದು, ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಸದ್ಯ ಕರಾವಳಿ ಬ್ಯೂಟಿ ಆಗಿರುವಂತಹ ಬಹುಭಾಷಾ ತಾರೆ ಪೂಜಾ ಹೆಗ್ಡೆ (Pooja Hegde) ಅವರ ಜೊತೆಗೆ ಸಲ್ಮಾನ್ ಖಾನ್ ರವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದೆ.

ಈ ಗಾಸಿಪ್ ಗೆ ಪುಷ್ಟಿ ನೀಡುವಂತೆ ಸಲ್ಲು ಮಾತನಾಡಿದ್ದು, ಅಭಿಮಾನಿಗಳು ಖಾನ್ ಮದುವೆ ಪಕ್ಕಾ!! ಎನ್ನುತ್ತಿದ್ದಾರೆ. ಹೌದು, ಸಲ್ಲು ಭಾಯ್​ ತಾವು ಸಂಬಂಧದಲ್ಲಿರುವ ಬಗ್ಗೆ ಬಹಿರಂಗವಾಗಿ, ಪರೋಕ್ಷವಾಗಿ ಹೇಳಿಕೊಂಡಿದ್ದಾರೆ. ಕಿಸೀ ಕಾಭಾಯ್​ ಪ್ರಮೋಷನ್​ ವೇಳೆ ಪತ್ರಕರ್ತರು ನೀವು ‘ಯಾವಾಗ ಮದುವೆಯಾಗುತ್ತೀರಿ’ ಎಂದು ಪ್ರಶ್ನೆ ಕೇಳಿದ್ದು, ಇದಕ್ಕೆ ಸಲ್ಮಾನ್ ಖಾನ್ ಅವರು, ನಕ್ಕು ಸುಮ್ಮನಾಗಿದ್ದಾರೆ. ಮಾತು ಮುಂದುವರೆಸಿದ ಪತ್ರಕರ್ತ ಸಲ್ಮಾನ್ ಖಾನ್ ಅವರನ್ನು ಇಡೀ ದೇಶದ ‘ಭಾಯಿಜಾನ್’ ಎಂದು ತಮಾಷೆಯಾಗಿ ಹೇಳಿದ್ದು, ಅಷ್ಟೇ ತಮಾಷೆಯಾಗಿ ಖಾನ್, “ನಾನು ಎಲ್ಲರ ಭಾಯ್ ಅಲ್ಲವೇ ಅಲ್ಲ, ಸಲ್ಮಾನ್ ಖಾನ್ ಕೆಲವರ ಜಾನ್​ ಕೂಡ. ಅದರಲ್ಲಿಯೂ ಒಬ್ಬರ ಜಾನ್​ (Jaan) ಅವರ ಭಾಯಿ ಅಲ್ಲ” ಎಂದಿದ್ದಾರೆ. ಸಲ್ಮಾನ್ ಖಾನ್ ಅವರ ಈ ಮಾತು ಕೇಳಿ ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ, ಖುಷಿ ವ್ಯಕ್ತಪಡಿಸಿದ್ದು, ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

ಬಹುನಿರೀಕ್ಷಿತ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್ ಸಿನಿಮಾ ಏಪ್ರಿಲ್ 21ರಂದು ರಿಲೀಸ್ ಆಗುತ್ತಿದ್ದು, ಈಗಾಗಲೇ ಸಿನಿಮಾತಂಡ ಪ್ರಮೋಷನ್ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದೆ. ಸಲ್ಮಾನ್ ಖಾನ್ ಸಿನಿಮಾ ರಿಲೀಸ್ ಆಗದೆ ವರ್ಷದ ಮೇಲಾಗಿದೆ. ನೆಚ್ಚಿನ ನಟನ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿದ್ದಾರೆ.

 

ಇದನ್ನೂ ಓದಿ: NRI : ಭಾರತೀಯರಿಗೆ ಸಿಹಿಸುದ್ದಿ ; ಈ ದೇಶಗಳು ಸರಾಗಗೊಳಿಸಿತು ವೀಸಾ ಪ್ರಕ್ರಿಯೆ!!

1 Comment
  1. Binance美国注册 says

    Your article helped me a lot, is there any more related content? Thanks!

Leave A Reply

Your email address will not be published.