Electric Car : ಇನ್ನೂ ಎಲೆಕ್ಟ್ರಿಕ್ ಕಾರಿನಲ್ಲಿ ಟೆನ್ಷನ್ ಇಲ್ಲದೆ ಲಾಂಗ್ ಡ್ರೈವ್ ಹೋಗಬಹುದು! ರೇಂಜ್ ಹೆಚ್ಚಿಸುವ ಹೊಸ ಸಾಧನ ರೆಡಿ!
Aha NexCruise : ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಹವಾ ಮಾರುಕಟ್ಟೆಯಲ್ಲಿ ಜೋರಾಗಿದೆ. ಪ್ರಸ್ತುತ ಭಾರತದಲ್ಲಿ (india ) ಎಲೆಕ್ಟ್ರಿಕ್ ಕಾರುಗಳಿಗೆ ಇನ್ನಷ್ಟು ಬಹು ಬೇಡಿಕೆ ಸೃಷ್ಟಿಯಾಗಲಿದೆ. ಯಾಕೆಂದರೆ ಎಲೆಕ್ಟ್ರಿಕ್ ಕಾರುಗಳ ರೇಂಜ್ ಅನ್ನು ಅನಿವಾರ್ಯ ಸಮಸ್ಯೆಯನ್ನು ನಿವಾರಿಸಲು, ಜೈಪುರದಲ್ಲಿ ಆಹಾ 3D ಆವಿಷ್ಕಾರ (Aha 3D innovations) ಸಂಸ್ಥಾಪಕ ಆಕಾಶ್ ಅವರು ಹೊಸ ಪರಿಹಾರವನ್ನು ಕಂಡುಹಿಡಿದ್ದಾರೆ.
ಇನ್ನುಮುಂದೆ ಬಳಕೆದಾರರು ತಮ್ಮ ಎಲೆಕ್ಟ್ರಿಕ್ ವಾಹನಗಳ ರೇಂಜ್ ಅನ್ನು ಶೇ.20 ರಷ್ಟು ಹೆಚ್ಚಿಸಲು ಹೊಸ ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ. ಆಹಾ ನೆಕ್ಸ್‌ಕ್ರೂಸ್ (Aha NexCruise) ಒಂದು ಪ್ಲಗ್-ಅಂಡ್-ಪ್ಲೇ ಗ್ಯಾಜೆಟ್ ಆಗಿದ್ದು, ಅದು ಚಾಲನೆಯ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ. ಫಾಸ್ಟ್ ಚಾರ್ಜರ್ ಗಳು ಇಲ್ಲದೇ ರಸ್ತೆಗಳಲ್ಲಿ ದೂರದ ಪ್ರಯಾಣ ಮಾಡುವಾಗ ಎಲೆಕ್ಟ್ರಿಕ್ ವಾಹನದ ರೇಂಜ್ ಅನ್ನು ಹೆಚ್ಚಿಸುತ್ತದೆ.
ಆಹಾ ನೆಕ್ಸ್ಕ್ರೂಸ್ ಸಾಧನವು ಸಂಪರ್ಕಗೊಂಡಿರುವ ಎಲೆಕ್ನಿಕ್ ವಾಹನಕ್ಕೆ ಕ್ರೂಸ್ ಕಂಟ್ರೋಲ್ ಮತ್ತು ಇತರ ಫೀಚರ್ಸ್ ಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಯಾವುದೇ ಫಾಸ್ಟ್ ಚಾರ್ಜ‌್ರಗಳಿಲ್ಲದೆ ಬಳಕೆದಾರರನ್ನು ವಿಶ್ವಾಸದಿಂದ ದೂರದವರೆಗೆ ಓಡಿಸಲು ಅನುವು ಮಾಡಿಕೊಡುತ್ತದೆ.
ಈ ಸಾಧನವನ್ನು “ಆಕ್ಸಿಲರೇಟರ್ ಪೆಡಲ್ಅನ್ನು ನೇರವಾಗಿ ಕಾರಿನ ವೈಕಲ್ ಕಂಟ್ರೋಲ್ ಯುನಿಟ್ (VCU) ಸಂಪರ್ಕಿಸಲಾಗಿದ್ದು, “ಆಕ್ಸಿಲರೇಟರ್-ಪೆಡಲ್ ಸಿಗ್ನಲ್ ಅನ್ನು ನೇರವಾಗಿ ಕಾರಿಗೆ ಹೋಗುವ ಬದಲು ಈ ಸಾಧನವು ಸ್ವೀಕರಿಸುತ್ತದೆ.
ಈ ಸಾಧನವು ‘ಇವಿ ಡ್ರೈವಿಂಗ್ ಶೈಲಿಯ’ ನಿಯಮಗಳ ಪ್ರಕಾರ ಈ ಸಿಗ್ನಲ್ ಅನ್ನು ಪರಿಷ್ಕರಿಸುತ್ತದೆ ಮತ್ತು ಕಾರಿನ VCU ಗೆ ಈ ಆದರ್ಶ ಸಂಕೇತವನ್ನು ನೀಡುತ್ತದೆ. ಆದ್ದರಿಂದ, ಇದು ಎಲ್ಲಾ ಮ್ಯಾನುವಲ್ ತಪ್ಪುಗಳನ್ನು ತಡೆಹಿಡೆಯುತ್ತದೆ ಮತ್ತು ಸಾಧ್ಯವಾದಷ್ಟು ಉತ್ತಮ ರೇಂಜ್ ಅನ್ನು ಸಾಧಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಈ ಸಾಧನವು ಎರಡು ರೂಪಾಂತರಗಳಲ್ಲಿ ಬರುತ್ತದೆ.
ಈ ಸಾಧನವನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳ ಬಳಕೆದಾರರು ಕ್ರೂಸ್ ಕಂಟ್ರೋಲ್ ನಿಂದ ಪ್ರಯೋಜನ ಪಡೆಯಬಹುದು ಏಕೆಂದರೆ ಇದು ಪ್ರತಿ ಚಾಲನೆಯ ವೇಗಕ್ಕೆ ನಿರ್ದಿಷ್ಟ ರೇಂಜ್ ಅನ್ನು ಖಾತರಿಪಡಿಸುತ್ತದೆ. ಇನ್ನು ಇಕೋ ಮೋಡ್ ನಲ್ಲಿ ನಗರಗಳಲ್ಲಿ ಚಾಲನೆ ಮಾಡುವಾಗ ರೇಂಜ್ ಅನ್ನು ಹೆಚ್ಚಿಸುತ್ತದೆ. ಡೀಪ್ ಇಕೋ ಮೋಡ್ (ಟಾಟಾ ನೆಕ್ಸಾನ್ ಇವಿ ನಿರ್ದಿಷ್ಟ) ಬಳಕೆದಾರರಿಗೆ ತಮ್ಮ ನೆಕ್ಸಾನ್ ಇವಿ ಕನಿಷ್ಠ 300 ಕಿ.ಮೀ ರೇಂಜ್ ಅನ್ನು ಹೊಂದಿರುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು.
ಇನ್ನು ಕೋಸ್ಟ್ ಮೋಡ್ ಪುನರುತ್ಪಾದಕ ಬ್ರೇಕಿಂಗ್ ಅನ್ನು ನಿಷ್ಕ್ರಿಯಗೊಳಿಸುತ್ತದೆ ಮತ್ತು ವಾಹನದ ಚಲನೆಯನ್ನು ಬಳಸಿಕೊಂಡು ಮೈಲೇಜ್ ಅನ್ನು ಹೆಚ್ಚಿಸುತ್ತದೆ. ಇದು ಎಲೆಕ್ನಿಕ್ ವಾಹನಗಳಿಗೆ ಹೆಚ್ಚಾಗಿ ICE ವಾಹನಗಳಲ್ಲಿ ಕಂಡುಬರುವ ಪರ್ಕ್ ಅನ್ನು ನೀಡುತ್ತದೆ. ಉದ್ದೇಶಪೂರ್ವಕವಲ್ಲದ ಮಿತಿಮೀರಿದ ವೇಗವನ್ನು ತಡೆಗಟ್ಟಲು, ಇದು ವೇಗ ನಿರ್ಬಂಧದ ಮೋಡ್ (restriction mode) ಅನ್ನು ಬಳಸುತ್ತದೆ.
ಅದಲ್ಲದೆ OTA ನವೀಕರಣಗಳಲ್ಲಿ, ನೆಕ್ಸ್ಕ್ರೂಸ್ ಗ್ಯಾಜೆಟ್ ಬಳಕೆದಾರರಿಗೆ ಹೊಸ ಫೀಚರ್ಸ್ ಗಳನ್ನು ನೀಡಲು ಪ್ರಸಾರದ ಸಾಫ್ಟ್‌ವೇರ್ ನವೀಕರಣಗಳನ್ನು ಅನುಮತಿಸುತ್ತದೆ.
ಸಂಸ್ಥಾಪಕರು ಸಂದರ್ಶನ ಒಂದರಲ್ಲಿ ಈ ಸಾಧನದ ರಚನೆಯಹಿಂದಿನ ಕಥೆಯನ್ನು ಹಂಚಿಕೊಂಡಿದ್ದು, ಕಂಪನಿಯಿಂದ 312 ಕಿಮೀ ರೇಂಜ್ ಅನ್ನು ಹೊಂದಿರುವ ತನ್ನ ಟಾಟಾ ನೆಕ್ಸಾನ್ ಇವಿಯಲ್ಲಿ ತನ್ನ ಪತ್ನಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದರು. ಜೈಪುರದಿಂದ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಲೋಂಗವಾಲಾಗೆ 1500 ಕಿಲೋಮೀಟರ್ ರೌಂಡ್‌ಟ್ರಿಪ್‌ನಲ್ಲಿ ಪ್ರಯಾಣಿಸಿದರು. ದಾರಿಯುದ್ದಕ್ಕೂ ಪುಷ್ಕರ್, ಜೋಧಪುರ ಮತ್ತು ಜೈಸರ್‌ನಲ್ಲಿ ನಿಂತುಕೊಂಡಿತು. ಈ ಟ್ರಿಪ್ ಅತ್ಯಂತ ವಿಶಿಷ್ಟವಾದ ಪ್ರವಾಸವಾಗಿದೆ. ಏಕೆಂದರೆ ಸುದೀರ್ಘ ಪ್ರಯಾಣಕ್ಕೆ ಕೇವಲ 800 ರೂ. ವೆಚ್ಚವಾಗಿದೆ. ಮುಖ್ಯವಾಗಿ ಈ ಪ್ರವಾಸವು ಈ ಸಾಧನವನ್ನು ರಚಿಸಲು ಕಾರಣವಾಯಿತು ಎಂದು ಈ ಮೂಲಕ ಆಹಾ ನೆಕ್ಸ್ಕ್ರೂಸ್ ಸಾಧನವನ್ನು ವಿನ್ಯಾಸಗೊಳಿಸಿದ ಬಗ್ಗೆ ಅವರು ವಿವರಿಸಿದರು.
I don’t think the title of your article matches the content lol. Just kidding, mainly because I had some doubts after reading the article.