7 Seater Cars : ಶೀಘ್ರದಲ್ಲಿ ಬಿಡುಗಡೆ ಆಗಲಿರುವ 7 ಸೀಟರ್ ಕಾರುಗಳ ಪಟ್ಟಿ ಇಲ್ಲಿದೆ!
7 Seater Cars : 7 ಸೀಟರ್ ಕಾರು ಕುಟುಂಬಕ್ಕೆ(family ) ಆರಾಮದಾಯಕವಾಗಿ ಮತ್ತು ಸೇಫ್ ಆಗಿ ಕುಟುಂಬ ಸಮೇತ ಪ್ರಯಾಣ ಮಾಡಲು, ಹೆಚ್ಚಿನ ಆಂತರಿಕ ಸ್ಥಳವನ್ನು ಬಯಸುವ ಜನರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಎಸ್‌ಯುವಿಗಳ ಹೊರತಾಗಿ, 7-ಸೀಟರ್ ಕಾರುಗಳಿಗೆ ಉತ್ತಮ ಬೇಡಿಕೆಯಿದೆ(demand). ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 7 ಆಸನಗಳ ಕಾರುಗಳು ಬರಲಿವೆ. ಒಂದರ ಹಿಂದೆ ಒಂದರಂತೆ ಹಲವು ವಾಹನಗಳು ಲಾಂಚ್ ಆಗಲಿವೆ. ಅವುಗಳು ಯಾವುದೆಂದು ಈ ಕೆಳಗೆ ತಿಳಿಸಲಾಗಿದೆ.
7-ಸೀಟರ್ ಮಾದರಿಗಳ ವಿಭಾಗದಲ್ಲಿ ಗ್ರಾಹಕರಿಗೆ ಹಲವು ಆಯ್ಕೆಗಳಿವೆ. ಭಾರತದಲ್ಲಿ ಮುಂಬರುವ ತಿಂಗಳುಗಳಲ್ಲಿ ಮತ್ತಷ್ಟು ಹೊಸ 7-ಸೀಟರ್ (7 Seater Cars)ಬಿಡುಗಡೆಯಾಗಲಿವೆ.
ಮಾರುತಿ ಸುಜುಕಿ C-MPV :
ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿಯು ಹೊಸ ಎಂಪಿವಿಯನ್ನು XLÓ ಕಾರಿನ ಮೇಲೆ ಇರಿಸಲಾಗುತ್ತದೆ, ಹೊಸ ಮಾರುತಿ ಎಂಪಿವಿಯನ್ನು ಈ ವರ್ಷದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.
ಈ ಹೊಸ ಎಂಪಿವಿಯ ವಿನ್ಯಾಸವು ಗ್ರಾಂಡ್ ವಿಟಾರಾದಿಂದ ಪ್ರೇರಿತವಾಗಿದೆ.ಇದು ಇನೋವಾ ಹೈಕ್ರಾಸ್‌ನಂತೆಯೇ ಅದೇ TNGA-C ಪ್ಲಾಟ್‌ಫಾರ್ಮ್ ಅನ್ನು ಹೊಂದಿಕೊಂಡಿರುತ್ತದೆ. ಹೀಗಾಗಿ, ಇದು ADAS ಆಧಾರಿತ ಡ್ರೈವರ್ ಅಸಿಸ್ಟ್ ಮತ್ತು ಸುರಕ್ಷತಾ ಫೀಚರ್ಸ್ ಗಳೊಂದಿಗೆ ಸಜ್ಜುಗೊಂಡ ಮೊದಲ ಮಾರುತಿ ಸುಜುಕಿ ಆಗಬಹುದು. C-MPV ಹೈಕ್ರಾಸ್‌ನಂತೆಯೇ ಅದೇ 2.0 ಲೀಟರ್ ಪೆಟ್ರೋಲ್ ಮತ್ತು 2.0 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ಗಳೊಂದಿಗೆ ಬರುತ್ತದೆ.
ಹೊಸ ಟೊಯೊಟಾ ಎಂಪಿವಿ:
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಕಂಪನಿಯು ಮಾರುತಿಯ ಎರ್ಟಿಗಾ ಆಧಾರಿತ ಹೊಸ ಎಂಪಿವಿಯನ್ನು ಅಭಿವೃದ್ಧಿಪಡಿಸುತ್ತಿದೆ. ಜಪಾನಿನ ಆಟೋ ಮೇಜರ್ ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರುಮಿಯಾನ್ ಎಂದು ಕರೆಯಲ್ಪಡುವ ಎರ್ಟಿಗಾದ ರಿಬ್ಯಾಡ್ಜ್ ಆವೃತ್ತಿಯನ್ನು ಮಾರಾಟ ಮಾಡುತ್ತದೆ. ಭಾರತಕ್ಕೆ ಏಳು-ಸೀಟುಗಳ ಎಂಪಿವಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ಟೊಯೊಟಾ ಕಂಪನಿಯು ನಡೆಸಬಹುದು. ಹೊಸ ಟೊಯೊಟಾ ಹಾರ್ಟೆಕ್ಸ್ ಪ್ಲಾಟ್‌ಫಾರ್ಮ್‌ನಿಂದ ಆಧಾರವಾಗಿರುವುದನ್ನು ಮುಂದುವರಿಸುತ್ತದೆ
ಈ ಹೊಸ ಎಂಪಿವಿಯಲ್ಲಿ 1.5 ಲೀಟರ್ ನಾಲ್ಕು-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್
ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ (ಪ್ಯಾಡಲ್ ಶಿಪ್ಟರ್‌ಗಳೊಂದಿಗೆ) ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಟಾಟಾ ಸಫಾರಿ ಫೇಸ್‌ಲಿಫ್ಟ್:
ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ ಕಂಪನಿಯು ತನ್ನ ಸಫಾರಿ ಎಸ್‌ಯುವಿಯನ್ನು 2023ರ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ನವೀಕರಿಸಿದ ಹ್ಯಾರಿಯರ್ ಜೊತೆಗೆ ಇದನ್ನು ಪರಿಚಯಿಸಬಹುದು ಮತ್ತು ಒಳಭಾಗವು ಹೊಸ ಫೀಚರ್ಸ್ ಗಳನ್ನು ಪಡೆಯಬಹುದು.
ಸಿಟ್ರನ್ C3 ಏಕ್ರಾಸ್:
ಮುಂಬರುವ ತಿಂಗಳುಗಳಲ್ಲಿ ಸಿಟ್ರನ್ C3 ಏರ್‌ಕ್ರಾಸ್ ಕಾರು ಮಾರುಕಟ್ಟೆ ಬಿಡುಗಡೆಗೆ ಮುಂಚಿತವಾಗಿ ಈ ತಿಂಗಳ ಕೊನೆಯಲ್ಲಿ ಅನಾವರಣವಾಗಲಿದೆ. ಈ ಸಿಟ್ರನ್ ಕಾರು CMP ಪ್ಲಾಟ್‌ಫಾರ್ಮ್ ಅನ್ನು ಆಧರಿಸಿರುತ್ತದೆ. ಈ ಕಾರಿನಲ್ಲಿ 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಸಿಟ್ರನ್ C3 ಏಕ್ರಾಸ್ ಕಾರು ಐದು ಮತ್ತು ಏಳು ಸೀಟುಗಳ ಮಾದರಿಯಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: Safest cars India : ಗ್ಲೋಬಲ್ NCAP ಪಟ್ಟಿಯಲ್ಲಿ ಭಾರತದ ಉತ್ತಮ ಸುರಕ್ಷಿತ ಕಾರುಗಳ ಪಟ್ಟಿ ಇಲ್ಲಿದೆ
Your article helped me a lot, is there any more related content? Thanks! https://www.binance.com/pt-PT/join?ref=DB40ITMB