Vinod Raj : ಲೀಲಾವತಿ ಮಗ ವಿನೋದ್ ರಾಜ್ ಮದುವೆ ಫೋಟೋ ವೈರಲ್! ನಿರ್ದೇಶಕ ಹೇಳಿದ್ದಾದರೂ ಏನು?

Vinod Raj: ವಿನೋದ್ ರಾಜ್ (Vinod Raj)ಕನ್ನಡ ಚಿತ್ರರಂಗದಲ್ಲಿ ಸಾಮಾನ್ಯವಾಗಿ ಹೆಚ್ಚಿನ ಮಂದಿಗೆ ಗೊತ್ತಿರುವ ಹೆಸರು. ನಟಿ ಲೀಲಾವತಿ ಅವರ ಮಗನಾದ ವಿನೋದ್ ರಾಜ್ ಈ ಮೊದಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಚಿತ್ರರಂಗದಲ್ಲಿ ಹೆಸರು ಮಾಡಿ ಈಗ ಕೃಷಿಯತ್ತ ಗಮನ ಹರಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈ ನಡುವೆ ವಿನೋದ್ ಅವರ ದಾಂಪತ್ಯ ಜೀವನದ ಕುರಿತ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ. ವಿನೋದ್ ಅವರಿಗೆ ಈಗಾಗಲೇ ಮದುವೆಯಾಗಿದೆಯೇ ಎಂಬ ಕೌತುಕದ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದ್ದು ಅಚ್ಚರಿ ಮೂಡಿಸಿದೆ.

ಲೀಲಾವತಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದು, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆ ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ನಡುವೆ, ಲೀಲಾವತಿ ಅವರು ಸ್ವಲ್ಪಮಟ್ಟಿಗಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ, ವಿನೋದ್‌ ರಾಜ್‌ ತಾಯಿ ಲೀಲಾವತಿ ಅವರ ಆರೈಕೆ ಮಾಡುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ನಟಿ ಲೀಲಾವತಿ ಅವರಿಗೆ ಚಿಕಿತ್ಸೆಯನ್ನು ನೆಲಮಂಗಲದ ಬಳಿಯ ಅವರ ತೋಟದ ಮನೆಯಲ್ಲಿಯೇ ನೀಡಲಾಗುತ್ತಿದೆ ಎನ್ನಲಾಗಿದೆ.

 ಹೀಗಾಗಿ, ವಿನೋದ್ ರಾಜ್, ತಮ್ಮ ತೋಟದ ಮನೆಯಲ್ಲಿಯೇ ತಾಯಿಯೊಂದಿಗೆ ವಾಸವಾಗಿದ್ದಾರೆ. ಈ ನಡುವೆ, ವಿನೋದ್‌ ರಾಜ್‌ ಅವರೊಂದು ಮದುವೆಯಾಗಿದ್ದರೆ ಒಳ್ಳೆಯದಿತ್ತೇನೋ? ಎಂಬ ಮಾತುಗಳು ಎಂದು ಅಭಿಮಾನಿವಲಯದಲ್ಲಿ ಆಗಾಗ ಚರ್ಚೆಯಾಗುತ್ತಿತ್ತು.ಇದೆಲ್ಲದರ ಮಧ್ಯೆ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆಯೇ(Marriage)ಎಂಬ ಪ್ರಶ್ನೆ ಎಲ್ಲರಲ್ಲಿಯೂ ಮೂಡಿದ್ದು, ಅಷ್ಟೆ ಅಲ್ಲದೇ, ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗ ಕೂಡ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ (Social Media)ಹರಿದಾಡುತ್ತಿರುವ ಮಾಹಿತಿ ಹೇಳುತ್ತಿದ್ದು, ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ಬುಕ್‌ನಲ್ಲಿ (Facebook) ಈ ಮಾಹಿತಿ ಹಂಚಿಕೊಂಡಿದ್ದಾರೆ.

 

ಲೀಲಾವತಿ ಅವರ ಆರೋಗ್ಯ ಹದಗೆಡುತ್ತಿದ್ದು, ಮಗ ವಿನೋದ್‌ ರಾಜ್‌ ಅವರ ಆರೈಕೆಯಲ್ಲಿ ಇದ್ದಾರೆ.ವಿನೋದ್‌ ರಾಜ್‌ ಅವರು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದ ಹಿನ್ನೆಲೆ ಯಾರಿಗೂ ಅವರ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ ಎಂದರೆ ತಪ್ಪಾಗದು.ಆದರೀಗ ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎನ್ನುವ ವಿಚಾರದ ಜೊತೆಗೆ ವಿನೋದ್‌ ರಾಜ್‌ ಅವರು ಮದುವೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ವಿನೋದ್‌ ರಾಜ್‌ ಅವರದೇ ಮನೆಯಲ್ಲಿ ತೆಗೆದಿರುವ ಫೋಟೊಗಳನ್ನು(The post Vinod Raj)ಪ್ರಕಾಶ್‌ ರಾಜ್‌ ಮೆಹು ಅವರು ಹಂಚಿಕೊಂಡಿದ್ದು ಸದ್ಯ ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ.

 

ನಿರ್ದೇಶಕ  ಪ್ರಕಾಶ್‌ ರಾಜ್‌ ಮೆಹು ಪೋಸ್ಟ್‌ನಲ್ಲಿ ಜಗತ್ತಿಗೆ ತಿಳಿಯದ ಅನೇಕ ವಿಚಾರಗಳು ಅಡಕವಾಗಿವೆ. ವಿನೋದ್ ರಾಜ್ ಮದುವೆಯೇ ಆಗದೆ ತಾಯಿಯ ಸೇವೆಯಲ್ಲಿ ವ್ಯಸ್ತರಾಗಿದ್ದಾರೆ ಎಂಬ ಊಹೆಯಲ್ಲಿ ಇರುವವರಿಗಾಗಿ ಈ ಮಾಹಿತಿ ಎಂದು ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಕೆಳಗಿನ ಫೋಟೊದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ! ಎಂಬ ಸ್ಫೋಟಕ ಮಾಹಿತಿಯನ್ನು ರಟ್ಟು ಮಾಡಿದ್ದಾರೆ. ಹೀಗಾಗಿ, ವಿನೋದ್ ಅಭಿಮಾನಿಗಳಿಗೆ ಶಾಕ್ ಆದರೂ ಅಚ್ಚರಿಯಿಲ್ಲ.

 

ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ. ಹೀಗಾಗಿ ನೈಜ ಪುರಾವೆಗಳ(Proof) ಮೂಲಕ ಮಾಹಿತಿ ನೀಡುತ್ತಿದ್ದೇನೆ. ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದ್ದು, ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಎನ್ನುವ ಸಂಗತಿ ನಿಖರವಾಗಿ ಉಲ್ಲೇಖ ಮಾಡಲಾಗಿದೆ.

 

ಈ ಫ್ಯಾಮಿಲಿ ಫೋಟೊ ನನಗೆ ಸಿಕ್ಕಿ ಆರು ತಿಂಗಳ ಮೇಲಾಗಿದೆ. ಆಗ ಈ ಫೋಟೋ ಪ್ರಕಟಿಸಿದ್ದರೆ, ಎಲ್ಲರೂ ಖಂಡಿತವಾಗಿಯೂ “ಅವರು ಯಾರೋ ಅಭಿಮಾನಿಗಳು” ಅಂದು ಬಿಡುವ ಸಾಧ್ಯತೆಯಿತ್ತು. ಹೀಗಾಗಿ, ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ರವಾನೆ ಮಾಡಿದ್ದಾರೆ. ಇದರಿಂದಾಗಿ ಈ ಸಂಗತಿಗಳನ್ನೂ ಬಯಲು ಮಾಡುತ್ತಿದ್ದೇನೆ ಎಂದು ಪ್ರಕಾಶ್‌ ರಾಜ್‌ ಮೆಹು ಹೇಳಿಕೊಂಡಿದ್ದಾರೆ. ಆದರೆ, ಈ ಆರೋಪದ ಬಗ್ಗೆ ವಿನೋದ್ ರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಈ ವಿಚಾರ ಎಷ್ಟರಮಟ್ಟಿಗೆ ನಿಜ ಎಂಬ ವಿಚಾರದ ಬಗ್ಗೆ ಅಭಿಮಾನಿಗಳಲ್ಲಿ ಕೌತುಕದ ಪ್ರಶ್ನೆ ಹುಟ್ಟು ಹಾಕಿದೆ. ವಿನೋದ್ ರಾಜ್ ಅವರ ಪ್ರತಿಕ್ರಿಯೆಯ ಬಳಿಕ ಅಸಲಿ ಗುಟ್ಟು ರಟ್ಟಾಗಬೇಕಾಗಿದೆ.

Leave A Reply

Your email address will not be published.